ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ- ಶಾಸಕ ಚಂದ್ರು ಲಮಾಣಿ

KannadaprabhaNewsNetwork |  
Published : Jul 13, 2025, 01:18 AM IST
ಪೋಟೊ-೧೨ ಎಸ್.ಎಚ್.ಟಿ. ೨ಕೆ- ಶಾಸಕ ಡಾ. ಚಂದ್ರು ಲಮಾಣಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸದರು. | Kannada Prabha

ಸಾರಾಂಶ

ಸರ್ಕಾರ ನೀಡುವ ಅನುದಾನ ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ಜನರು ನೆಮ್ಮದಿಯ ಜೀವನ ಸಾಗಿಸಲು ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಸರ್ಕಾರ ನೀಡುವ ಅನುದಾನ ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ಜನರು ನೆಮ್ಮದಿಯ ಜೀವನ ಸಾಗಿಸಲು ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಗ್ರಾಮದಲ್ಲಿ ಹೆಬ್ಬಾಳ-ತಾರಿಕೊಪ್ಪ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಾರ್ವಜನಿಕರ ಬಳಕೆಗೆ ಬರುವ ರಸ್ತೆಗಳು ಸಂಚಾರಕ್ಕೆ ಅನುಕೂಲವಾಗಿರಬೇಕು. ಆ ನಿಟ್ಟಿನಲ್ಲಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆಗಳ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಅವುಗಳು ಕೂಡ ಅಧಿಕ ಬಾಳಿಕೆ ಬರುವಂತೆ ಎಚ್ಚರಿಕೆ ವಹಿಸುವುದು ಗುತ್ತಿಗೆದಾರ ಸೇರಿದಂತೆ ನಮ್ಮೆಲ್ಲರ ಕರ್ತವ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಈ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ದಿಗೆ ಬೇಡಿಕೆ ಸಲ್ಲಿಸಿದ್ದರು. ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ರಸ್ತೆ ಅಭಿವೃದ್ದಿಗೆ ಸರ್ಕಾರ ಅನುದಾನ ನೀಡಿದ್ದು, ಗುಣಮಟ್ಟದ ಕೆಲಸ ನಡೆಯಲಿ ಎಂದರು.ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ಸಮರ್ಪಕವಾಗಿ ಗುಣಮಟ್ಟದ ರಸ್ತೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.ಆದಷ್ಟು ಬೇಗನೆ ಕಾಮಗಾರಿಯನ್ನು ಮುಗಿಸಲು ಸೂಚಿಸಿದರು. ಗ್ರಾಮೀಣ, ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಜನರು ಸಣ್ಣಪುಟ್ಟ ವೈಮನಸ್ಸುಗಳನ್ನು ದೂರ ಮಾಡಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಬೇಕು. ಅಂದಾಗ ಮಾತ್ರ ನಿರೀಕ್ಷೆಯಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯ ಎಂದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಫಕ್ಕಿರೇಶ ತಿಮ್ಮಾಪುರ, ಶ್ರೀಶೈಲ, ಸುರೇಶಗೌಡ ಪಾಟೀಲ, ಹನುಮರೆಡ್ಡಿ ಬುಳ್ಳಪ್ಪನವರ, ಪುರಪ್ಪ ಲಮಾಣಿ, ಶಂಕರ ಭಾವಿ, ಪ್ರವೀಣ ಪಾಟೀಲ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಚನ್ನವೀರಗೌಡರ ತೆಗ್ಗಿನಮನಿ, ಎಚ್.ಎಚ್. ತಳವಾರ, ಅಣ್ಣಪ್ಪ ರಣತೂರ, ಶಿವನಗೌಡ್ರ ಕಂಠಿಗೌಡ್ರ, ಸಿ.ಆರ್. ಪಾಟೀಲ, ಪ್ರಶಾಂತ ರೆಡ್ಡಿ, ಶ್ರೀನಿವಾಸ್ ಸೌದತ್ತಿ, ಮಲ್ಲೇಶ ಲಮಾಣಿ, ದೇವರಾಜ ಮೇಟಿ, ಮಹೇಶ ಲಮಾಣಿ, ಶಿವಾನಂದ ಪೂಜಾರ, ಈರಣ್ಣ ಬಡಿಗೇರ, ಬಾಬು ತಿರುಮಲ ರೆಡ್ಡಿ, ಗುಡದಪ್ಪ ಸುರಣಗಿ, ಮಲ್ಲು ನಾವಿ, ಮಂಜುನಾಥ ಕರಿಯತ್ತಿನ ಇತರರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು