ಮಾದರಿ ಸಂವಿಧಾನ ರಚಿಸಿದ ಹೆಗ್ಗಳಿಕೆ ಅಂಬೇಡ್ಕರ್‌ ಗೆ ಸಲ್ಲುತ್ತದೆ: ಲೀಲಾ ಸೋಮಶೇಖರಯ್ಯ

KannadaprabhaNewsNetwork |  
Published : Apr 17, 2025, 12:07 AM ISTUpdated : Apr 17, 2025, 12:08 AM IST
ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನವನ್ನು ರಚಿಸಿದ ಹೆಗ್ಗಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆಃ ಲೀಲಾ ಸೋಮಶೇಖರಯ್ಯ | Kannada Prabha

ಸಾರಾಂಶ

ತರೀಕೆರೆ, ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಭಾರತದ ಮಹಾನ್‌ ನಾಯಕರಲ್ಲೂಬ್ಬರು. ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನ ರಚಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ ತಿಳಿಸಿದರು.

ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯು ತ್ಸವ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಭಾರತದ ಮಹಾನ್‌ ನಾಯಕರಲ್ಲೂಬ್ಬರು. ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನ ರಚಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ ತಿಳಿಸಿದರು.

ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಶಾಲಾ ಅವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯು ತ್ಸವದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮಹಿಳೆಯರು ಮತದಾನ ಮಾಡಲು ಪ್ರಮುಖ ಕಾರಣ ಡಾ.ಅಂಬೇಡ್ಕರ್ . ಅವರು ಶಿಕ್ಷಣ ಮಾನವನ ಸರ್ವಾಂಗೀಣ ವಿಕಸನಕ್ಕೆ ದಾರಿ ಎಂದು ಸಾರಿದ್ದರು, ರವರ ಭೋಧನೆ, ವಿಚಾರಧಾರೆಗಳು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. ಬಾಬುರವರ ತತ್ವ ಸಿದ್ಧಾಂತ, ಆದರ್ಶ, ಚಿಂತನೆ ಸದೃಢ ಭಾರತ ನಿರ್ಮಾಣಕ್ಕೆ ಬಲು ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ಸಂಸ್ಥೆ ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ವಿಚಾರ ಸದಾ ಕಾಲ ನಮಗೆಲ್ಲರಿಗೂ ಸ್ಫೂರ್ತಿ, ಸಂವಿಧಾನ ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥ, 1891ರ ಏಪ್ರಿಲ್ 14ರಂದು ಮಧ್ಯ ಪ್ರದೇಶದ ಮಾಹೇ ಎಂಬಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಜನಿಸಿದ್ದರು. ಬಾಲ್ಯದಲ್ಲಿ ಸಾಕಷ್ಟು, ಕಷ್ಟಗಳನ್ನು ಕಂಡಿದ್ದ ಅವರು ಈ ದೇಶದಲ್ಲಿದ್ದ ಜಾತಿ ಪದ್ಧತಿ ಹೋಗಲಾಡಿಸುವುದು ಮಾತ್ರವಲ್ಲದೇ ಶಿಕ್ಷಣದ ಮಹತ್ವ ತಿಳಿಸಿ ಕೊಟ್ಟರು.

ವಿಶ್ವವಿಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಬದುಕಿನ ಸಾರ ತಿಳಿದು ಸಂವಿಧಾನ ಅರಿತರೆ ಸುಖ ನೆಮ್ಮದಿ ಸಿಗಲಿದೆ. ಅವರು ಸಮಾಜ ಸುಧಾಕರ, ರಾಜಕಾರಣಿ ಮತ್ತು ನ್ಯಾಯಶಾಸ್ತೃಜ್ಞರಾಗಿದ್ದರು. ಅವರನ್ನು ಭಾರತೀಯ ಸಂವಿಧಾನ ಪಿತಾಮಹ ಎಂದು ಕರೆಯಲಾಗುವುದು ಎಂದರು.ಸಮಾರಂಭದಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕಿಯರು ಉಪಸ್ಥಿತರಿದ್ದರು.

16ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತ್ಯುತ್ಸವ ದಲ್ಲಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ