ಕನ್ನಡಪ್ರಭ ವಾರ್ತೆ ಬೀದರ್
ಒಳ ಮೀಸಲಾತಿ ಜಾರಿ ಮಾಡದೇ ವಿಳಂಬ ಧೋರಣೆ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಬೀದರ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಹಾಗೂ ರಾಜು ಕರಡ್ಯಾಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರ್ತಿಭಟನೆ ಬಳಿಕ ಕೆಲ ಹೊತ್ತು ಡಾ.ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ಹಾಗೂ ಧರಣಿ ನಡೆಸಿದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ, ಕಾಂಗ್ರೆಸ್ ಪಕ್ಷ 2023ರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಘೋಷಿಸಿದಂತೆ ಪ್ರಸ್ತುತ ಸರ್ಕಾರರವು ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ತಿರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು.ಒಳ ಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಸೇರಿದಂತೆ ಯಾವುದೇ ಹುದ್ದೆಗಳ ನೇಮಕಾತಿ ತುಂಬಬಾರದು. ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್‌ಸಿ ಒಳಮೀಸಲಾತಿ ಜಾರಿ ಗೊಳಿಸುವಲ್ಲಿ ನಿರ್ಲಕ್ಷ ಧೋರಣೆ ಸಲ್ಲದು. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರ ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟ ಸರ್ಕಾರವು ಎದುರಿಸಬೇಕಾಗುತ್ತದೆ. ಈಗಾಗಲೇ ಸಂವಿದಾನ ಪರಿಚ್ಛೇದ 15(4)ನೇಯ ಹಾಗೂ 16(4) ನೇ ವಿಧಿಗಳ ಅಡಿಯಲ್ಲಿ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿ ಕೊಂಡು ಮೀಸಲಾತಿಯಂತಹ ವಿಶೇಷ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು ಮುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪುನ್ನು ಕೂಡಲೇ ರಾಜ್ಯ ಸರ್ಕಾರವು ಜಾರಿಗೊಳಿಸಬೇಕೆಂದು ಇಂದು ಪರಿಶಿಷ್ಟ ಜಾತಿಗಳ ಒಳ ಮಿಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ದಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷ ಕಮಲಾಕರ.ಎಲ್.ಹೆಗಡೆ, ಜಾಪೇಟ್ ಕಡ್ಯಾಳ್, ಸ್ವಾಮಿದಾಸ ಮೇಘಾ, ದತ್ತಾತ್ರಿ ಜ್ಯೋತಿ, ಸುಧಾಕರ ಕೊಳ್ಳುರ, ಸುಧಾಕರ ಸೂರ್ಯವಂಶಿ, ಶಿವಣ್ಣಾ ಹಿಪ್ಪಳಗಾಂವ, ಪೀಟರ್ ಚಿಟಗುಪ್ಪ, ರವಿ ನಿಜಾಂಪೂರೆ, ಪರಮೇಶ್ವರ ಕಾಳಮಂದರಗಿ, ಜಯಶೀಲ್ ಕಲವಾಡೆ, ವಿಜಯಕುಮಾರ ಸೂರ್ಯವಂಶಿ, ವೀರಶೆಟ್ಟಿ, ಮನೋಹರ ಉಡಬಾ, ರಾಜು ಸಾಂಗ್ಲೆ, ಸಚೀನ ಅಂಬೇಸಿಂಗೆ, ಗೋರಖ ನಿಂಬೂರ, ಪೀಟರ್ ಶ್ರೀಮಂಡಲ, ವೀರಶೆಟ್ಟಿ ಬಂಬುಳಗಿ, ಹರೀಶ ಗಾಯಕವಾಡ, ದಯಾನಂದ ರೇಕುಳಗಿ, ಮನೋಹರ ಸೋನೈಯಿ, ಲಾಲಪ್ಪ ರಾಂಪುರೆ, ಪ್ರಕಾಶ ಬಗದಲ, ಪ್ರಶಾಂತ ಮುತ್ತಂಗಿ, ಅನಿಲಕುಮಾರ ಬಂಬುಳಗಿ, ಸಂದೀಪ ನಂದಿ, ರವಿಂದ್ರ ಸೂರ್ಯವಂಶಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.--ಚಿತ್ರ 16ಬಿಡಿಆರ್51:
ಬೀದರ್‌ನಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬುಧವಾರ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.