ರಟ್ಟಿಹಳ್ಳಿ: ಸಾಧು ಸಂತರು ಶರಣರ ಚಿಂತನೆಗಳ ಮಾರ್ಗದರ್ಶನದ ಕೊರತೆಯಿಂದಾಗಿ ಸಾಂಸ್ಕೃತಿಕ ವಲಯ ಸೊರಗಿ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುವುದನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರೇಕೇರೂರು ತಾಲೂಕು ಶಸಾಪ ಅಧ್ಯಕ್ಷ ಜಿ.ಆರ್. ಕೆಂಚಕ್ಕಳವರ ಮಾತನಾಡಿ, ವಚನ ಸಾಹಿತ್ಯವನ್ನು ಉಳಿಸಿ ಓದುಗರಿಗೆ ಶುದ್ಧ ಬರಹವಾಗಿ ನೀಡಿದ ಫ.ಗು. ಹಳಕಟ್ಟಿ ಅವರ ಸಾಧನೆಯ ಫಲವಾಗಿಯೇ ಇಂದು ನಮ್ಮೆಲ್ಲರ ಬದುಕು ರೂಪಿಸುವ ವಚನ ಸಾಹಿತ್ಯ ಉಳಿದಿದೆ. ಸಾಮಾಜಿಕ ಹಿತಕ್ಕಾಗಿ ಇಂದು ಶರಣ ಸಾಹಿತ್ಯ ಪರಿಷತ್ತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಡಾ.ಎಚ್.ಬಿ. ಪಾಟೀಲ ಅಧ್ಯಕ್ಷತೆವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎನ್.ಸಿ.ಕಠಾರೆ, ಹಾನಗಲ್ಲ ತಾಲೂಕು ಶಸಾಪ ಅಧ್ಯಕ್ಷ ಎಸ್.ಸಿ.ಕಲ್ಲನಗೌಡರ, ಕಾರ್ಯದರ್ಶಿ ಎಸ್.ವಿ. ಹೊಸಮನಿ ಅತಿಥಿಗಳಾಗಿದ್ದರು. ತಾಲೂಕು ಅಧ್ಯಕ್ಷ ಎಸ್.ಎಂ. ಮಠದ, ರಾಜು ಹರವಿಶೆಟ್ಟರ, ಹಿರೇಕೇರೂರು ತಾಲೂಕು ಕಾರ್ಯದರ್ಶಿ ಸಿ.ಬಿ. ಮಾಳಗಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಧ್ಯಕ್ಷರು ರೂಪಾ ಅಂಬ್ಲೇರ ಉಪಸ್ಥೀತರಿದ್ದರುಪದಾಧಿಕಾರಿಗಳು :
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಬ್ಬಿಣಕಂತಿಮಠ, ಅಧ್ಯಕ್ಷ ಎಸ್.ಎಂ.ಮಠದ, ಉಪಾಧ್ಯಕ್ಷರು ಎಂ.ವಾಯ್. ಮೆಣಸಿನಹಾಳ, ಜಿ.ಜಿ.ಕಮ್ಮಾರ, ಕಾರ್ಯದರ್ಶಿ ವಿಜಯ ಬುಳ್ಳಾಪುರ, ಜಗದೀಶ ಪೂಜಾರ, ಸಂಘಟನಾ ಕಾರ್ಯದರ್ಶಿ ಮಂಜಪ್ಪ ಕಣಗೊಟಗಿ, ಮಹಿಳಾ ಪ್ರತಿನಿಧಿ ಪರಿಮಳಾ ಪಾಟೀಲ, ರತ್ನಮ್ಮ ಜೋಗಿಹಳ್ಳಿ, ಸದಸ್ಯರು ಸಿದ್ದನಗೌಡ ಪಾಟೀಲ, ಕೆ.ಆರ್.ಕೊಣ್ತಿ, ಬೂದೇಶ ಗುಬ್ಬಿ, ಸಿ.ಎಸ್.ಚಕ್ರಸಾಲಿ, ಸುರೇಶ ಬೆಣ್ಣಿ, ವಸಂತ ದ್ಯಾವಕ್ಕಳವರ, ಎಸ್.ಎಸ್. ಪ್ಯಾಟಿಗೌಡ್ರ, ರಾಜು ಹರವಿಶೆಟ್ಟರ, ಪಿ.ಆರ್.ಹೊನ್ನತ್ತಿ, ಪಂಚಾಕ್ಷರಯ್ಯ ಕಬ್ಬಿಣಕಂತಿಮಠ, ಪ್ರಕಾಶ ಪೂಜಾರ, ಕೆ.ವಿ.ವರಹದ, ಸಿ.ಡಿ.ಕರಿಯಣ್ಣನವರ, ಹೇಮಪ್ಪ ನಿಂಬೆಗೊಂದಿ.ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷರು ರೇಣುಕಾ ಗೂಳಪ್ಪನವರ, ಅಧ್ಯಕ್ಷರು ರೂಪಾ ಅಂಬ್ಲೇರ, ಉಪಾಧ್ಯಕ್ಷರು ಗಾಯತ್ರಿ ಹದಡೇರ, ಸರೋಜಾ ಹುರಕಡ್ಲಿ, ಕಾರ್ಯದರ್ಶಿ ರತ್ನಾ ಕಮ್ಮಾರ, ರೋಹಿಣಿ ಕೆ.ಬಿ., ಸಹಕಾರ್ಯದರ್ಶಿ ಸಾವಿತ್ರಾ ಬೆಣ್ಣಿ, ಸಂಘಟನಾ ಕಾರ್ಯದರ್ಶಿ ಶೋಭಾ ಪೂಜಾರ, ಸದಸ್ಯರು ಲಲಿತಾ ಹೊಸಮನಿ, ರತ್ನಾ ಕಟ್ಟಿಮನಿ, ಲತಾ ಮಳಗೊಂಡರ, ಸುದಾ ಚಿಂದಿ, ಅಕ್ಕಮ್ಮ ಮುದಿಯಪ್ಪನವರ, ಪ್ರೇಮಾ ಬೆಣ್ಣಿ, ಸುನಿತಾ ಬಲಮುರಿ, ರೂಪಾ ತೊಗರ್ಸಿ, ಅಕ್ಕಮ್ಮ ಹರವಿಶೆಟ್ಟರ, ಮಾನಸಾ ಮಳಗೊಂಡರ, ಗಂಗಮ್ಮ ಗದುಗಿನ, ಪೂಜಾ ಮುದಿಯಪ್ಪನವರ, ದೀಪಾ ಮಳಗೊಂಡರ ಆಯ್ಕೆಯಾದರು.