ಕನ್ನಡಪ್ರಭ ವಾರ್ತೆ ಬೀದರ್
ಅವರು ಮಂಗಳವಾರ ನಗರದ ಸಿದ್ಧಾರ್ಥ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ಧಾರ್ಥ ಪ.ಪೂ ಕಾಲೇಜು, ಟೀಂ ಯುವಾ ಹಾಗೂ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನೀರು, ಪರಿಸರ, ಬರ ಕುರಿತು ನೆಲದಾಳದಲ್ಲಿ ಹರಿಯುವ ಇತಿಹಾಸ: ಬೀದರಿನ ಕರೇಜ್ - ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸುಮಾರು 30 ವರ್ಷಗಳ ಹಿಂದೆ ನೀರು ಇಂದಿನ ರೀತಿಯಲ್ಲಿ ಸರಳವಾಗಿ ಸಿಗುತ್ತಿರಲಿಲ್ಲ. ಇಡೀ ಕುಟುಂಬದವರು ಮೂರು ನಾಲ್ಕು ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ನೀರು ತರುವ ಕಾಲವಿತ್ತು. ಕ್ರಮೇಣವಾಗಿ ಇಂದು ಬಾವಿ, ಬೊರ್‌ವೆಲ್ ಮನೆ ಮನೆಯಲ್ಲಿ ಇರುವ ಕಾರಣ ನೀರು ಸಿಗುತ್ತಾ ಇದೆ ಎಂದರು.
ಬೀದರ್ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ವಿಠಲದಾಸ ಪ್ಯಾಗೆ ಮಾತನಾಡಿ, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಸಂಘ ಸಂಸ್ಥೆಗಳು ನಾಗರಿಕ ಪ್ರಜ್ಞಾವಂತ ಸಮಾಜ ಬರಗಾಲ ಬರದಂತೆ ಜಾಗೃತಿ ವಹಿಸಿ ಎಂದರು.ಟೀಂ ಯುವಾ ಸಹ ಸಂಸ್ಥಾಪಕ ವಿನಯ ಮಾಳಗೆ ಮಾತನಾಡಿ, ಬಹಮನಿ ಸುಲ್ತಾನ್ ಅಹ್ಮದ್ ಶಾ ಅವರು 1420ರ ದಶಕದಲ್ಲಿ ರಾಜಧಾನಿಯನ್ನು ಕಲಬುರ್ಗಿ ಯಿಂದ ಬೀದರ್‌ಗೆ ಸ್ಥಳಾಂತರಿಸಿದರು. ಆಗಿನ ಬಹಮನಿ ಸಂಸ್ಥಾನದಲ್ಲಿ ಅನೇಕ ಪರ್ಷಿಯನ್ ತಂತ್ರಜ್ಞರಿದ್ದರು. ಅವರು ಕನಾತ್ (ಕರೇಜ್) ತಂತ್ರಜ್ಞಾನವನ್ನು ಬೀದರ್‌ಗೆ ಪರಿಚಯಿಸಿದರು. ಗುಡ್ಡದ ಬುಡದ ಅಂತರಜಲವನ್ನು ಸ್ವಲ್ಪವೇ ಇಳಿಜಾರಿನ ಸುರಂಗದ ಮೂಲಕ ಊರಿನವರೆಗೆ ಗುರುತ್ವದಿಂದಲೇ ಹರಿಸುವ ವ್ಯವಸ್ಥೆ ಇದು. ಇದಕ್ಕೆ ಪಂಪ್ ಅಥವಾ ವಿದ್ಯುತ್ ಬೇಕಿಲ್ಲ, ನೀರು ಬಿಸಿಲಿಗೆ ಆವಿಯಾಗುವುದೂ ಇಲ್ಲ ಎಂದರು.
ನಿವೃತ್ತ ಸಹಾಯಕ ರಿಜಿಸ್ಟ್ರಾರ್ ಕಂಟೇಪ್ಪಾ ಪೂಜಾರಿ, ಜಗದೀಶ್ವರ ಬಿರಾದರ, ಕಾಲೇಜಿನ ಸಿಬ್ಬಂದಿ ವಿಜಯಕುಮಾರ, ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ, ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್, ಟೀಂ ಯುವಾ ಸದಸ್ಯರಾದ ಶ್ರೀಧರ ಸೋಮನೋರ, ಹರ್ಷವರ್ಧನ ರಾಠೋಡ, ವಿಶಾಲ ಪಾಟೀಲ್, ಬಾಲಾಜಿ ಕುಂಬಾರ, ಅಮರ ಅಲ್ಲಾಪೂರ ಮತ್ತಿತರರು ಉಪಸ್ಥಿತರಿದ್ದರು.