ಹನಿಟ್ರ್ಯಾಪ್ ಗೆ ಬಲಿಯಾಗಿ ದುರಂತ ಅಂತ್ಯ ಕಂಡ ನಿವೖತ್ತ ಯೋಧ

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಹನಿಟ್ರ್ಯಾಪ್ಪ್‌ಗೆ ಬಲಿಯಾಗಿ ದುರಂತ ಅಂತ್ಯ ಕಂಡ ನಿವೃತ್ತ ಯೋಧ

ಕನ್ನಡಪ್ರಭ ವಾರ್ತೆ ಮಡಿಕೇರಿ

ಡೆತ್ ನೋಟ್ ಬರೆದಿಟ್ಟು ಕಣ್ಮರೆಯಾಗಿದ್ದ ಮಾಜಿ ಸೈನಿಕ ಸಂದೇಶ್ (40) 30 ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ.

ಮಹಿಳೆಯೊಬ್ಬಳಿಂದ ಹನಿಟ್ರ್ಯಾಪ್‍ಗೊಳಗಾಗಿ ನಿವೃತ್ತ ಯೋಧ ಸಂದೇಶ್ ಡೆತ್‍ನೋಟ್ ಬರೆದಿಟ್ಟು ಮಂಗಳವಾರ ನಾಪತ್ತೆಯಾಗಿದ್ದರು.

ಫೇಸ್‍ಬುಕ್‍ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳ ಸ್ನೇಹಕ್ಕೆ ಬಿದ್ದು ಆಕೆಯಿಂದಲೇ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ಸಂದೇಶ್ ಬಳಿಕ ಆಕೆ ಹಾಗೂ ಆಕೆಯ ಗೆಳೆಯರ ಕಾಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‍ನೋಟ್ ಬರೆದಿಟ್ಟಿದ್ದರು.

ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ನಡೆಸಿದ ಸಂದರ್ಭ ಸಂದೇಶ್ ಮನೆಯ ಸಮೀಪದ ಪಂಪಿನ ಕೆರೆ ಬಳಿ ಆತನ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿಸಿ ಕೆರೆಯಲ್ಲಿ ಮಂಗಳವಾರ ಸಂಜೆಯಿಂದಲೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞ ಹುಡುಕಾಟ ನಡೆಸಿದರು. ಆದ್ರೆ ಎಷ್ಟೇ ಹುಡುಕಿದರು ಸಂದೇಶ್ ಮೃತ ದೇಹ ಮಾತ್ರ ಸಿಗಲೇ ಇಲ್ಲ. ಬುಧವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಉಡುಪಿಯ ಹೆಸರಾಂತ ಅನುಭವಿ ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ತಂಡ ಯೋಧನ ಮೃತ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯ ಕೊಡಿಸುವಂತೆ ಸಂದೇಶ್ ಪತ್ನಿ ಕಣ್ಣೀರು ಹಾಕಿದ್ದಾಳೆ. ಈ ಸಂಬಂಧ ಆರೋಪಿತ ಮಹಿಳೆ ಹಾಗೂ ರೆಸಾರ್ಟ್ ಮಾಲೀಕನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು, ನಾಪತ್ತೆಯಾಗಿರುವ ಮತ್ತೋರ್ವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕೊಡಗು ಪೊಲೀಸ್ ಎಸ್ಪಿ ಕೆ.ರಾಮರಾಜನ್ ಮಾಗ೯ದಶ೯ನದಲ್ಲಿಯೇ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಸಲಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ.

ಏನಿದು ಪ್ರಕರಣ : ಜೀವಿತಾ ಎಂಬ ಮಹಿಳೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದಳಂತೆ. 2020 ರಿಂದಲೇ ಸೇನೆಯಲ್ಲಿರುವಾಗಲೇ ಸಂದೇಶನಿಗೆ ಪರಿಚಯ ಅಂದಿನಿಂದಲೂ 20 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದ ಜೀವಿತಾ ನಿವೃತ್ತಿ ಬಳಿಕವೂ 50 ಲಕ್ಷ ರೂಪಾಯಿ ಕೊಡುವಂತೆ ಕಾಟ ನೀಡಿದ್ದಾಳಂತೆ ಇದೆಲ್ಲವನ್ನೂ ತನ್ನ ಪತ್ನಿ ಯಶೋಧ ರೊಂದಿಗೆ ಹೇಳಿಕೊಂಡಿದ್ದ ಸಂದೇಶ್ ಕಿರುಕುಳ ತಾಳಲಾರದೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ನಿವೃತ ಸೈನಿಕ ಸಂದೇಶ್ ನ ಪತ್ನಿ ಯಶೋಧ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾರೆ.

30 ಗಂಟೆಗಳ ಬಳಿಕ ಮೃತದೇಹ ಪತ್ತೆ ::

ಡೆತ್ ನೋಟ್ ಬರೆದಿಟ್ಟು ಕಾಣೆಯಾಗಿದ್ದ ನಿವೃತ್ತ ಯೋಧ ಸಂದೇಶ್ ನ ಚಪ್ಪಲಿ, ಮೊಬೈಲ್ ನಗರದ ಪಂಪಿನ ಕೆರೆಯ ಪಕ್ಕದಲ್ಲಿ ದೊರೆತ್ತಿದ್ದ ಕಾರಣ ಆತ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂಬುವುದು ಬಹುತೇಕ ಖಚಿತವಾಗಿತು. ಹೀಗಾಗಿ ಸೈನಿಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞ ಮುತ್ತಪ್ಪ ಅವರಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಯಿತು ಆದ್ರೆ ಮೃತದೇಹ ಸಿಗುವ ಯಾವುದೇ ಸುಳಿವು ಸಿಗಲಿಲ್ಲ. ಹೀಗಾಗಿ 900ಕ್ಕೂ ಅಧಿಕ ಮೃತದೇಹಗಳನ್ನು ಹೊರತೆಗೆದ ಹೆಗ್ಗಳಿಕೆ ಹೊಂದಿರುವ ಉಡುಪಿಯ ಹೆಸರಾಂತ ಅನುಭವಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿಕೊಳ್ಳಲಾಯಿತು. ಬುಧವಾರ ಸಂಜೆ ವೇಳೆ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವರೆಸಿದ ಈಶ್ವರ್ ಹಾಗೂ ತಂಡ ರಾತ್ರಿ 8.20 ಸುಮಾರಿಗೆ ಕೆರೆಯ 40 ಅಡಿ ಆಳದಲ್ಲಿ ಸಿಲುಕಿದ್ದ ಯೋಧನ ಮೃತ ದೇಹವನ್ನು ಹೊರ ಎತ್ತುವಲ್ಲಿ ಯಶಸ್ವಿಯಾದರು.

Share this article