ಆಕ್ರೋಶ । ಕ. ಸೇನಾಪಡೆ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ಇತರ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ನೂರಾರು ಬಾಣಂತಿಯರು, ಸಾವಿರಾರು ಮಕ್ಕಳು ಮೃತಪಟ್ಟಿದ್ದಾರೆ.. ರಾಜ್ಯದಲ್ಲಿ ಆರೋಗ್ಯ ಇಲಾಖೆ ಇದೆಯೋ ಅಥವಾ ಸತ್ತು ಹೋಗಿದೆಯೋ, ಆರೋಗ್ಯ ಸಚಿವರು ಇದ್ದಾರೋ ನಾಪತ್ತೆಯಾಗಿದ್ದಾರೋ? ಇಂತಹ ಪ್ರಕರಣ ನಡೆದರೂ ಸಹ ರಾಜ್ಯ ಸರ್ಕಾರ ಗಮನಹರಿಸದೆ ಇರುವುದು ಒಂದು ದುರಂತ ಸಂಗತಿಯಾಗಿದೆ ಎಂದು ದೂರಿದರು.ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಕುಟುಂಬಕ್ಕೆ 50 ಲಕ್ಷ ರು..ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಘೋಷಣೆ ಮಾಡಬೇಕು. ತಪ್ಪಿತಸ್ಥ ವೈದ್ಯರು, ಅಧಿಕಾರಿಗಳ ವಿರುದ್ದ ತಕ್ಷಣವೇ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಚಾ.ರಂ.ಶ್ರೀನಿವಾಸಗೌಡ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಮಹೇಶ್ ಗೌಡ, ನಂಜುಂಡಶೆಟ್ಟಿ, ವರದನಾಯಕ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ರಾಚಪ್ಪ ಸಿದ್ದಶೆಟ್ಟಿ, ಇತರರು ಭಾಗವಹಿಸಿದ್ದರು.