ಬೆಳೆ ಕಾಯಲು ಹೋಗಿದ್ದ ಇಬ್ಬರ ಸಾವು

KannadaprabhaNewsNetwork |  
Published : Aug 18, 2024, 01:51 AM IST
ಫೋಟೋ 17ಪಿವಿಡಿ1ಪಾವಗಡ ತಾ,ಟಿಎನ್‌.ಬೆಟ್ಟ ಗ್ರಾಮದಲ್ಲಿ ಶೇಂಗಾ ಬೆಳೆ ಕಾವಲು ತೆರಳಿದ್ದ ವೇಳೆ ವಿದ್ಯುತ್‌ ಅವಘಡದಿಂದ ಯುವಕರಿಬ್ಬರು ಸಾವನ್ನಪ್ಪಿದ್ದ ಸ್ಥಳದಲ್ಲಿ ಫೋಷಕ ಆಕ್ರಂಧನ ಮುಗಿಲು ಮುಟ್ಟಿತ್ತು.ಅವಘಡ ಕುರಿತು ಬೆಸ್ಕಾಂ ಹಾಗೂ ಪೊಲೀಸ್‌ ಅಧಿಕಾರಿಗಳಿಂದ ಪರಿಶೀಲನೆ   | Kannada Prabha

ಸಾರಾಂಶ

ಬೆಳೆ ಕಾಯಲು ಹೋಗಿದ್ದ ಇಬ್ಬರ ಸಾವು

ಪಾವಗಡ : ಶೇಂಗಾ ಬೆಳೆಗೆ ಕಾವಲು ಕಾಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಟಿ. ಎನ್‌. ಬೆಟ್ಟ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಅನಿಲ್‌ ಕುಮಾರ (29) ಹಾಗೂ ಪುಟ್ಟರಾಜು (35) ಎಂದು ಗುರುತಿಸಲಾಗಿದೆ. ವನ್ಯ ಜೀವಿಗಳ ಹಾವಳಿ ಹಿನ್ನಲೆಯಲ್ಲಿ ಶೇಂಗಾ ಬೆಳೆ ಕಾವಲಿಗೆ ಹೋಗಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಸೀಕೆರೆ ಪೊಲೀಸ್ ಠಾಣೆ ಪಿಎಸ್‌ಐ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಪರಿಶೀಲನೆ ನಡೆಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಇಬ್ಬರು ಮೃತರು ಬಡ ರೈತರಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲಾ ಹಂತದಲ್ಲೇ ಮಕ್ಕಳನ್ನು ದಂಡಿಸದಿದ್ದರೆ ಅಪಾಯ: ನಿಶ್ಚಲಾನಂದನಾಥ ಸ್ವಾಮೀಜಿ
ಜಾತ್ರೆ: ಎಸ್‌ಪಿ ನೇತೃತ್ವದಲ್ಲಿ ಜನಜಾಗೃತಿ ಪಥ ಸಂಚಲನ