ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ₹ 65 ಲಕ್ಷ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಸ್ತೆ, ಒಳಚರಂಡಿ, ಸಮುದಾಯ ಭವನ, ಆರೋಗ್ಯ, ನೀರಾವರಿ, ಶಿಕ್ಷಣ ಮತ್ತು ವಿದ್ಯುತ್ತ ಸೇರಿದಂತೆ ಹಲವು ಕಾಮಗಾರಿ ಕೈಗೊಂಡು ಅಥಣಿ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ದನಾಗಿದ್ದೇನೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆ ಹಲವಾರು ಸಾಧನೆ ಮಾಡಿದೆ. ಅಥಣಿ ಮತಕ್ಷೇತ್ರಕ್ಕೆ ₹ 2500 ಕೋಟಿಗಿಂತಲೂ ಅಧಿಕ ಅನುದಾನವನ್ನು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒದಗಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುತ್ತಿರುವ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಿಂದಲೂ ಅತ್ಯಧಿಕ ಅನುದಾನವನ್ನು ತಂದು ಇಲ್ಲಿನ ನೀರಾವರಿ, ಶಾಲಾ ಕೊಠಡಿ, ಸಮುದಾಯ ಭವನ, ರಸ್ತೆ, ವಿದ್ಯುತ್ ಘಟಕಗಳು, ಕುಡಿಯುವ ನೀರು, ಶಾಲಾ, ಕಾಲೇಜಗಳ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಂಡು ರೈತರ, ಕೂಲಿ ಕಾರ್ಮಿಕರ ಏಳ್ಗೆಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ಕಳಸಪ್ಪ ಹೊನಗೌಡ ಮಾತನಾಡಿ, ಶಾಸಕ ಲಕ್ಷ್ಮಣ ಸವದಿಯವರು ಅಥಣಿ ಮತಕ್ಷೇತ್ರದ ಜನರ ಏಳ್ಗೆಗೆ ಹಲವಾರು ಯೋಜನೆಗಳನ್ನು ತಂದು ಆಸರೆಯಾಗಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ಅವರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಸಮುದಾಯ ಆರೋಗ್ಯ ಅಧಿಕಾರಿ ಖಂಡುಬಾ ಶಿಂಧೆ, ಮುಖಂಡರಾದ ರಾವಸಾಬ ಹೊನಗೌಡ, ಗುಳಪ್ಪ ಗೌಡಪ್ಪನವರ, ಶಂಕರ ಕೆಂಚಗೊoಡ, ಸದಾಶಿವ ಹೊನಗೌಡ, ಶಿವಾನಂದ ಪಾಟೀಲ, ಸಾನಿಂಗಗೌಡ ಹೊನಗೌಡ, ಶಿವಲಿಂಗ ಹೋನಗೌಡ, ಧರೇಪ್ಪ ಬ್ಯಾಡರಟ್ಟಿ, ಸಿದರಾಯ ಜಮಖಂಡಿ, ಬಸವರಾಜ ಕೆಂಚಗೊoಡ, ಅನಿಲ ಶಿಂಧೆ, ರಾವಸಾಬ ಹೊನಗೌಡ, ಗುಳಪ್ಪ ಗೌಡಪ್ಪನವರ, ಸುರೇಶ ಗುಳಪ್ಪನವರ, ಗುತ್ತಿಗೆದಾರ ಅನಿಲ ಶಿಂದೆ, ಸಂತೋಷ ಗಾಲಿ, ವಿನೋದ ಪಾಟೀಲ, ವಿಜಯಶ್ರೀ ದುಮಕನಾಳ, ಗೀತಾ ಹಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.---