ಸಹಕಾರಿ ಸಂಘಗಳು ಅಭಿವೃದ್ಧಿ ಎಲ್ಲರ ಸಹಕಾರ ಅಗತ್ಯ-ಶೆಟ್ಟರ್‌

KannadaprabhaNewsNetwork |  
Published : Aug 27, 2026, 03:00 AM IST
ಹಿರೇಕೆರೂರಿನ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣಾ ಸಭೆ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷ ಸಿದ್ಧಲಿಂಗೇಶ ಶೆಟ್ಟರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲ್ಲೇಶಪ್ಪ ಹುಲ್ಮನಿ, ಬಸವರಾಜಪ್ಪ ಹಂಪಾಳಿ, ಪರಮೇಶಪ್ಪ ಹಳಕಟ್ಟಿ, ಪ್ರಭುಲಿಂಗಪ್ಪ ಹಂಚಿನ, ನಾಗರಾಜ ದುರ್ಗದ ಇದ್ದರು. | Kannada Prabha

ಸಾರಾಂಶ

ಹಿರೇಕೆರೂರಿನ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣಾ ಸಭೆ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷ ಸಿದ್ಧಲಿಂಗೇಶ ಶೆಟ್ಟರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲ್ಲೇಶಪ್ಪ ಹುಲ್ಮನಿ, ಬಸವರಾಜಪ್ಪ ಹಂಪಾಳಿ, ಪರಮೇಶಪ್ಪ ಹಳಕಟ್ಟಿ, ಪ್ರಭುಲಿಂಗಪ್ಪ ಹಂಚಿನ, ನಾಗರಾಜ ದುರ್ಗದ ಇದ್ದರು.

ಹಿರೇಕೆರೂರು: ಯಾವುದೇ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಸಿಬ್ಬಂದಿ, ನಿರ್ದೇಶಕರು ಮತ್ತು ಸದಸ್ಯರ ಸಹಾಯ, ಸಹಕಾರ, ಕರ್ತವ್ಯ ನಿಷ್ಠೆ ಪ್ರಾಮಾಣಿಕತನ ಅತಿ ಮುಖ್ಯವಾಗಿದೆ ಎಂದು ಪಟ್ಟಣದ ದಿ.ಅರ್ಬನ್ ಕೋ, ಆಫ್ ಕ್ರೆಡಿಟ್ ಸೊಸೈಟಿ (ಬ್ಯಾಂಕಿನ) ಅಧ್ಯಕ್ಷ ಸಿದ್ಧಲಿಂಗೇಶ ಶೆಟ್ಟರ ಹೇಳಿದರು.

ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣಾ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ತಾವು ತೆಗೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಭರಿಸಿದರೇ ಬ್ಯಾಂಕುಗಳು ಉತ್ತರೋತ್ತರವಾಗಿ ಬೆಳೆಯಲು ಸಾಧ್ಯ. ಅಳಿವಿನ ಅಂಚಿನಲ್ಲಿದ್ದ ಈ ಬ್ಯಾಂಕ್ ಅನ್ನು ನೂತನ ಎಲ್ಲ ನಿರ್ದೇಶಕರ, ಸದಸ್ಯರ ಸಹಾಯ, ಸಹಕಾರ ಮತ್ತು ನಿರಂತರ ಪ್ರಯುತ್ನದಿಂದ ಮತ್ತೆ ಉತ್ತೇಜನಗೊಳಿಸುವ ಮೂಲಕ ಉತ್ತಮ ಲಾಭಾಂಶದೊಂದಿಗೆ ಅಭಿವೃದ್ಧಿಪಡಿಸಿದ ಆತ್ಮತೃಪ್ತಿ ನಮಗಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಅನ್ನು ನವೀಕರಣಗೊಳಿಸಿ, ಹೊಸ ಯೋಜನೆಗಳಿಂದ ಮತ್ತಷ್ಟು ಸಾಲವನ್ನು ವಿಸ್ತರಣೆಗೊಳಿಸುವ ಮೂಲಕ ಅಭಿವೃದ್ಧಿಗೊಳಿಸಲಾಗುವುದು ಎಂದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ನಾಗರಾಜ ದುರ್ಗದ ಮಾತನಾಡಿ, ನಮ್ಮ ಬ್ಯಾಂಕು 2025-26ನೇ ಸಾಲಿನಲ್ಲಿ 62.67 ಲಕ್ಷ ರು. ನಿವ್ವಳ ಲಾಭಾಂಶ ಹೊಂದಿದ್ದು, 2026-27ನೇ ಸಾಲಿನಲ್ಲಿ ಸಾಲ ನೀಡುವುದು, ಡಿಪಾಜಿಟ್ ಸೇರಿದಂತೆ ಇನ್ನಿತರ ಮೂಲಗಳಿಂದ 85.31 ಲಕ್ಷ ರು. ಆದಾಯ ಬರುವ ನಿರೀಕ್ಷೆಯಿದೆ. ಇನ್ನು ತೆರಿಗೆ, ಠೇವಣಿದರರಿಗೆ ಬಡ್ಡಿ ವಿತರಣೆ, ನೌಕರದಾರರಿಗೆ ಸಂಬಳ ಸೇರಿದಂತೆ ವಿವಿಧ ಕಾರ್ಯಗಳಿಗೆ 25.62 ಲಕ್ಷ ರು. ಖರ್ಚಿಗಾಗಿ ಮೀಸರಿಲಿರಿಸಲಾಗಿದೆ ಎಂದರು.

ಇದೆ ವೇಳೆ ಬ್ಯಾಂಕಿನಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಎಸ್. ಕೆರೂಡಿ ಹಾಗೂ ಉತ್ತಮ ವಹಿವಾಟು ನಡೆಸಿದ ಗ್ರಾಹಕರಿಗೆ, ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಬಸವರಾಜಪ್ಪ ಹಂಪಾಳಿ, ಪರಮೇಶಪ್ಪ ಹಳಕಟ್ಟಿ, ಪ್ರಭುಲಿಂಗಪ್ಪ ಹಂಚಿನ, ರಾಜಶೇಖರ ಹಾದ್ರಿಹಳ್ಳಿ, ಪ್ರಕಾಶ ಹರಿಹರ, ಸುಮಿತ್ರಾ ಅಬಲೂರ, ಪ್ರತಿಭಾ ಕೋರಿ, ನಾಗಪ್ಪ ಲಾಪೋಜಿ, ಶಿವಾನಂದ ಖಾಂಡ್ಕೆ ಹಾಗೂ ಸದಸ್ಯರು, ಸಿಬ್ಬಂದಿಯವರು ಇದ್ದರು.

ಬ್ಯಾಂಕಿನ ಉಪಾಧ್ಯಕ್ಷ ಮಲ್ಲೇಶಪ್ಪ ಹುಲ್ಮನಿ, ಅಧಿಕಾರಿಗಳಾದ ಎಸ್.ಎಸ್. ಹಳ್ಳೂರ, ಎಂ.ಎಸ್.ಕೆರೂಡಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ - ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಮಹಾಸಭೆ
ಸೆ. 8, ಮೊಂತಿ ಫೆಸ್ತ್‌ಗೆ ರಜೆ ನೀಡಲು ಸಿಎಂಗೆ ಕಥೊಲಿಕ್ ಸಭಾ ಮನವಿ