ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಡಿಜಿಟಲ್ ಸ್ಟಾರ್ಟರ್ ರಿಪೇರಿಗೆ ಬಂದು ತಿಂಗಳಿಂದಳಾಗುತ್ತಿದ್ದರೂ ಗುಂಡ್ಲುಪೇಟೆಗೆ ಕಬಿನಿ ನೀರು ಬಂದಿಲ್ಲ. ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿ ಸರಿಯಾಯ್ತು ಎನ್ನುವ ವೇಳೆಗೆ ಬೇಗೂರಿನ ಜಲ ಸಂಗ್ರಹಾಲಯದ ಸ್ಟಾರ್ಟರ್ ಕೆಟ್ಟ ಕಾರಣ ನೀರು ಮೇಲೆತ್ತಲಾಗುತ್ತಿಲ್ಲ.ಡಿಜಿಟಲ್ ಸ್ಟಾರ್ಟರ್ ಕೆಟ್ಟು ತಿಂಗಳಿನಿಂದ ಗುಂಡ್ಲುಪೇಟೆ ಪಟ್ಟಣದ ಜನತೆಗೆ ಕಬಿನಿ ನೀರಿಲ್ಲ. ಜೊತೆಗೆ ಕಬಿನಿ ನೀರಿನ ಸಂಪರ್ಕ ಇರುವ ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಪುರಸಭೆಗೆ ನಾಗರೀಕರು ಶಾಪ ಹಾಕುತ್ತಿದ್ದಾರೆ.ಯಾವುದೇ ಪ್ರತಿಭಟನೆ ಇಲ್ಲ:
ಈಗ ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿ ಕೆಲಸ ನಿರ್ವಹಿಸುತ್ತಿವೆ ಆದರೀಗ ಸಿಂಧುವಳ್ಳಿ ಹಾಗೂ ದೇಬೂರಿನ ಸ್ಟಾರ್ಟರ್ ದುರಸ್ಥಿಗೊಂಡು ನೀರೆತ್ತಲು ಶುರು ಮಾಡಿ ಬುಧವಾರ ಮಧ್ಯಾಹ್ನ ಬೇಗೂರಿನ ಸಂಪಿನ ತನಕ ಕಬಿನಿ ನೀರು ಬಂದಿದೆ.
ಬೇಗೂರಿನ ಡಿಜಿಟಲ್ ಸ್ಟಾರ್ಟರ್ ಈಗ ಕೆಟ್ಟಿರುವ ಕಾರಣ ಗುಂಡ್ಲುಪೇಟೆಗೆ ನೀರು ತಲುಪಿಲ್ಲ. ಸ್ಟಾರ್ಟರ್ ರಿಪೇರಿ ಮಾಡಲಾಗುತ್ತಿದ್ದು ಗುಂಡ್ಲುಪೇಟೆಗೆ ಬುಧವಾರ ಸಂಜೆಯ ತನಕ ನೀರು ಬಂದಿರಲಿಲ್ಲ. ಗುಂಡ್ಲುಪೇಟೆಯ ಜನ ಕಬಿನಿ ನೀರಿಗಾಗಿ ಶಬರಿಯಂತೆ ಕಳೆದೊಂದು ತಿಂಗಳಿನಿಂದ ಕಾಯುತ್ತಿದ್ದಾರೆ.ಪುರಸಭೆಗೆ ಎಚ್ಚರಿಸಿದ್ದ ಕನ್ನಡಪ್ರಭ!: ಕಳೆದ ಮಾ.13 ರಂದು ಕನ್ನಡಪ್ರಭದಲ್ಲಿ ʼಗುಂಡುಪೇಟೆ ೧೫ ದಿನಗಳಿಂದ ಕಬಿನಿ ನೀರಿಲ್ಲʼ ಎಂದು ವರದಿ ಪ್ರಕಟಿಸಿತ್ತು. ಮಾ.18 ರಂದು ಕನ್ನಡಪ್ರಭದಲ್ಲಿ ʼಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರʼ ಎಂದು ವರದಿ ಪ್ರಕಟಿಸಿ ಗಮನ ಸೆಳೆದು ಪುರಸಭೆ ಆಡಳಿತಾಧಿಕಾರಿಗಳಿಗೆ ಎಚ್ಚರಿಸಿತ್ತು. ಕನ್ನಡಪ್ರಭದ ವರದಿ ಬಳಿಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಪುರಸಭೆ ಮುಖ್ಯಾಧಿಕಾರಿಗೆ ಎಚ್ಚರಿಕೆ ಕೊಟ್ಟು ಕೂಡಲೇ ನೀರು ಕೊಡುವ ಕೆಲಸ ಮಾಡಬೇಕು ಎಂದೇಳಿದ ಬಳಿಕ ತಿಂಗಳಿನಿಂದ ಕೆಟ್ಟಿದ್ದ ಡಿಜಿಟಲ್ ಸ್ಟಾರ್ಟರ್‌ಗಳು ದಿಡೀರ್ ದುರಸ್ಥಿಯಾಗಿ ಎರಡು ದಿನ ಕಳೆದರೂ ಗುಂಡ್ಲುಪೇಟೆಗೆ ಮಾತ್ರ ತಲುಪಿಲ್ಲ. ಡಿಜಿಟಲ್ ಸ್ಟಾರ್ಟರ್ ರಿಪೇರಿಯಾಗಿದೆ.ಮಂಗಳವಾರ ದೇಬೂರು,ಸಿಂಧುವಳ್ಳಿಯ ಸ್ಟಾರ್ಟರ್ ಕೆಟ್ಟಿತ್ತು ಅದು ರಿಪೇರಿ ಆಗಿವೆ.ಅಲ್ಲಿಂದ ಬೇಗೂರಿನ ಸಂಪಿನ ತನಕ ನೀರು ಬಂದಿದೆ.ಬೇಗೂರು ಸಂಪಿನ ಸ್ಟಾರ್ಟರ್ ನೀರು ಮೊದಲಿಗೆ ಎತ್ತಿತ್ತು ನಂತರ ಕೆಟ್ಟಿದೆ.ದುರಸ್ಥಿ ಕೆಲಸ ಆಗುತ್ತಿದೆ.ಬುಧವಾರ ರಾತ್ರಿ ಎಷ್ಟೊತ್ತಾದರೂ ಗುಂಡ್ಲುಪೇಟೆಗೆ ನೀರು ತಲುಪುವ ಸಾದ್ಯತೆ ಇದೆ.ಕೆ.ಪಿ.ವಸಂತಕುಮಾರಿ ಪುರಸಭೆ ಮುಖ್ಯಾಧಿಕಾರಿ