ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಗ್ಯ ಗ್ರಾಮದ ಮಾರಮ್ಮನ ಹಬ್ಬದ ಹಿನ್ನೆಲೆ ಜನಸಾಮಾನ್ಯರಿಗೆ ಓಡಾಡಲು ಕಿತ್ತು ಹೋಗಿರುವ ರಸ್ತೆಗೆ ಮಣ್ಣಿನ ಭಾಗ್ಯ ಕರುಣಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಾಗರಿಕರು ಜನಪ್ರತಿನಿಧಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಗೆ ಮಣ್ಣಿನ ಭಾಗ್ಯ:ಗ್ರಾಮ ದೇವತೆ ಮಾರಮ್ಮನ ಹಬ್ಬ ಶಾಗ್ಯ ಗ್ರಾಮದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 13 ವರ್ಷಗಳ ನಂತರ ಹಬ್ಬವನ್ನು ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿರುವುದರಿಂದ ಹಬ್ಬಕ್ಕೆ ಬರುವ ಜನತೆಗೆ ಮತ್ತು ಬರುವಂತ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜೆಸಿಬಿ ಯಂತ್ರದಲ್ಲಿ ಭಾರಿ ಕಂದಕಗಳ ಮಾದರಿ ಇರುವ ಕಿತ್ತೋಗಿರುವ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕೆಲಸ ಭರದಿಂದ ಸಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ:ಹನೂರು ಪಟ್ಟಣದಿಂದ ಚಂಗವಾಡಿ, ಮಣಗಳ್ಳಿ ಬಂಡಳ್ಳಿ, ಶಾಖೆ ಹಾಗೂ ಇನ್ನಿತರ ಗ್ರಾಮಗಳು ಇರುವ ಪ್ರಮುಖ ರಸ್ತೆ ಕಳೆದ 20 ವರ್ಷಗಳಿಂದಲೂ ಡಾಂಬರೀಕರಣ ಕಾಣದೆ ಭಾರಿ ಗಾತ್ರದ ಗುಂಡಿಮಯವಾಗಿ ದ್ವಿಚಕ್ರ ವಾಹನಗಳು ಸಹ ಸಂಚರಿಸಲಾಗದಷ್ಟುರಸ್ತೆಯಲ್ಲಿ ಗುಂಡಿಗಳು ಆಗಿರುವುದರಿಂದ ಇನ್ನು ಮುಂದಾದರೂ ಜನಪ್ರತಿನಿಧಿ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಭಾಗ್ಯ ಕರುಣಿಸುವಂತೆ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ನಾಗರಿಕರು ತಮ್ಮ ಅಕ್ರೋಶ ಹೊರಹಾಕಿದ್ದಾರೆ.
ಭಾಗ್ಯಗಳ ಸರ್ಕಾರ ರಸ್ತೆ ಭಾಗ್ಯ ಕರುಣಿಸಿ:ಮಲೆಮಹದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆಯುತ್ತಿರುವ ಕ್ಯಾಬಿನೆಟ್ ಸಭೆಯಲ್ಲಿ ಬಂಡಳ್ಳಿ ರಸ್ತೆ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲು ಕಿತ್ತು ಬಂದು ಗುಂಡಿಮಯವಾಗಿರುವ ರಸ್ತೆಗೆ ಮಣ್ಣು ಸುರಿಯುತ್ತಿರುವುದರಿಂದ ಮತ್ತೆ ಯಥಾಸ್ಥಿತಿಯಾಗಲಿದ್ದು ಕ್ಯಾಬಿನೆಟ್ ಸಭೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.