ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌ ವಿತರಣೆ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Jun 22, 2025, 11:48 PM IST
ರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ    ಖಾಸಗಿ ಶಾಲೆಯಲ್ಲಿ ನೋಟ್‌ ಬುಕ್‌ ವಿತರಣ | Kannada Prabha

ಸಾರಾಂಶ

ನಗರದ ಶ್ರೀರಾಮಶೇಷ ಸಂಸ್ಕೃತ ಪಾಠಶಾಲೆ ವತಿಯಿಂದ ಸಮ್ಯಕ್ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಆಗುವಷ್ಟು ನೋಟ್‌ಬುಕ್ , ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ಶ್ರೀರಾಮಶೇಷ ಸಂಸ್ಕೃತ ಪಾಠಶಾಲೆ ವತಿಯಿಂದ ಸಮ್ಯಕ್ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಆಗುವಷ್ಟು ನೋಟ್‌ಬುಕ್ , ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಡ್ರೀಮ್ಸ್ ಟ್ರಸ್ಟ್ ಆವರಣದಲ್ಲಿ ನಡೆದ ಸೇವಾ ಮಿಲನ ಕಾರ್ಯಕ್ರಮವನ್ನು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಶ್ರೀ ಚೆನ್ನಬಸವ ಸ್ವಾಮೀಜಿ, ಡ್ರೀಮ್ ಟ್ರಸ್ಟ್ ಮುಖ್ಯಸ್ಥ ಪ್ರದೀಪ್ ಕುಮಾರ್ ದೀಕ್ಷಿತ್ ಅವರು, ಹಲವಾರು ವರ್ಷಗಳಿಂದಲೂ ಸೇವಾ ಮಿಲನ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸುತ್ತಾ ಬರುತ್ತಿರುವುದು ಅವರ ಸಾಮಾಜಿಕ ಕಾಳಜಿಯನ್ನು ತೋರಿಸುತ್ತದೆ. ಸಮಾಜದ ಉತ್ತಮರನ್ನು ಗುರುತಿಸಿ ಸನ್ಮಾನಿಸುವುದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಪುರಸ್ಕಾರ ಮಾಡುವುದು, ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುತ್ತಿರುವುದು ಸಾರ್ಥಕವಾದ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಸುಧಾಕರ ಹೊಸಹಳ್ಳಿ ಮಾತನಾಡಿ, ಸೇವೆ, ಸಂಸ್ಕಾರ ನಮ್ಮ ನೆಲದಲ್ಲಿನ ಸಂಸ್ಕೃತಿಯೇ ಆಗಿದೆ. ಯಜುರ್ವೇದ ಕಾಲದಲ್ಲೇ ನಾವು ಜಗತ್ತಿಗೆ ಎಲ್ಲವನ್ನೂ ಕೊಟ್ಟಿವೆ. ಆದರೆ, ಇಂದು ನಮ್ಮವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ದುರದೃಷ್ಟಕರ. ಶ್ರೀರಾಮ ನಮ್ಮ ಧಾರ್ಮಿಕತೆಯ ಆದರ್ಶವಾದರೆ, ಅಂಬೇಡ್ಕರ್ ಆಧುನಿಕತೆಯ , ಸಮಾನ ಭಾರತದ ಆದರ್ಶವಾಗುತ್ತಾರೆ. ಅವರ ಸಂವಿಧಾನ ನಮ್ಮ ದೇಶದ ಕಣ್ಣು ಎಂದು ಬಣ್ಣಿಸಿದರು.

ಇದೇ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ದಿಲೀಪ್‌ಕುಮಾರ್, ಪೊಲೀಸ್ ಇಲಾಖೆಯ ಎನ್. ನಾಗೇಂದ್ರ, ಕರಾಟೆ ತರಬೇತುದಾರ ಸುನೀಲ್‌ಕುಮಾರ್, ಪತ್ರಕರ್ತ ಪುಟ್ಟರಾಜು, ಕೆ. ಶ್ರೀಹರಿ, ಸತೀಶ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.ನಗರಸಭೆ ಮಾಜಿ ಸದಸ್ಯ ಗಣೇಶ ದೀಕ್ಷಿತ್, ಸಮ್ಯಕ್ ಪ್ರತಿಷ್ಠಾನದ ಸತೀಶ್, ಉದ್ಯಮಿ ವೆಂಕಟನಾಗಪ್ಪಶೆಟ್ಟಿ, ಅನೂಷ್, ಕದಂಬ ಸೇನೆಯ ಅಂಬರೀಶ್, ಡೀಮ್ ಟ್ರಸ್ಟ್‌ನ ಪ್ರದೀಪ್‌ಕುಮಾರ್ ದೀಕ್ಷಿತ್ ಇತರರು ಹಾಜರಿದ್ದರು.

22ಸಿಎಚ್ಎನ್‌15

ಚಾಮರಾಜನಗರದ ಡ್ರೀಮ್ ಟ್ರಸ್ಟ್ ಆವರಣದಲ್ಲಿ ಶ್ರೀರಾಮಶೇಷ ಪಾಠಾ ಶಾಲೆ ವತಿಯಿಂದ ನಡೆದ ಸೇವಾ ಮಿಲನ ಕಾರ್ಯಕ್ರಮವನ್ನು ಶ್ರೀ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ