ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿ ಸದಸ್ಯ ನಾಣಚ್ಚಿ ಗದ್ದೆಹಾಡಿಯ ರಮೇಶ್, ಬ್ರಹ್ಮಗಿರಿ-ಕಾಂತೂರು ಹಾಡಿಯ ಪ್ರಕಾಶ್ ಹಾಗೂ ಮುತ್ತಪ್ಪ ಮಾತನಾಡಿ, ಕಾನೂರು ಗ್ರಾಪಂ ವ್ಯಾಪ್ತಿಯ ಬ್ರಹ್ಮಗಿರಿ ಕಾಂತೂರು-ಹಾಡಿಯ ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸಿ ಹಕ್ಕುಪತ್ರ ವಿತರಿಸಲು ಕೋರಿದರು.
ಮುಖಂಡರಾದ ಪುಷ್ಪ ಅವರು ಮಾತನಾಡಿ, ದೇವರಪುರ ದೇವರಕಾಡು ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸುವಂತೆ ಕೋರಿದರು.ಬೊಮ್ಮಾಡು ಹಾಡಿಯ ಸೋಮಯ್ಯ ಮಾತನಾಡಿ, ಈಗಾಗಲೇ ನೀಡಿರುವ ಹಕ್ಕುಪತ್ರದಲ್ಲಿನ ಜಾಗದ ವಿಸ್ತೀರ್ಣದಲ್ಲಿ ಅನ್ಯಾಯವಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಹಕ್ಕುಪತ್ರ ಸರಿಪಡಿಸುವಂತೆ ಕೋರಿದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವಂತೆ ಹಾಗೂ ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಆದಿವಾಸಿಗಳ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಯವರು ಇಲಾಖಾಧಿಕಾರಿಗೆ ಸೂಚಿಸಿದರು.ಸಭೆಯಲ್ಲಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ತೇಜರಾಜು, ಸಿದ್ದೇಗೌಡ, ಬಾಲಕೃಷ್ಣ ರೈ, ಹಾಡಿ ಮುಖಂಡರಾದ ರಮೇಶ್, ಪ್ರಕಾಶ್, ತಿಮ್ಮ, ಶಿವು, ಕಾಳ, ಸೋಮಯ್ಯ, ಪುಷ್ಪ ಮತ್ತಿತರರು ಹಾಜರಿದ್ದರು.
- ತಿಮ್ಮ, ಶಿವು
ನಾಗರಹೊಳೆ ಹಾಡಿ