ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ತೊಡಕುಗಳಿದ್ದು ಚುನಾವಣೆಗಳು ಬೇರೆ ರೀತಿ ನಡೆಯುತ್ತಿವೆ ಹಾಲು ಹಾಕದವರು ಡಾಮಿನೇಟ್ ಮಾಡುವ ವ್ಯವಸ್ಥೆ ನಡೆಯಬಾರದು. ಹಾಲು ಹಾಕವರು ಮಾತ್ರ ಓಟು ಹಕ್ಕು ವ್ಯವಸ್ಥೆಯಾಗಬೇಕಿದೆ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ತಾಲೂಕಿನ ಕಸಬಾ ಹೋಬಳಿ ದೊಡ್ಡಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ,ಬಿಎಂಸಿ ಘಟಕ ಹಾಗೂ ಸಾಮೂಹಿಕ ಹಾಲು ಕರೆಯುವ ಘಟಕದ ಉದ್ಘಾಟನೆಯನ್ನು ಕೋಚಿಮುಲ್ ಅದ್ಯಕ್ಷ ಹಾಗೂ ಶಾಸಕರಾದ ಕೆ ವೈ ನಂಜೇಗೌಡ.ಸಚಿವ ಡಾ.ಎಂಸಿ ಸುಧಾಕರ್.ಎಂಎಲ್ ಸಿ ಅನಿಲ್ ಕುಮಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.ಎಂಎಲ್ ಸಿ ಅನಿಲ್ ಮಾತನಾಡಿ ನಾನು ಪಕ್ಕದ ಮದನಹಳ್ಳಿ ಗ್ರಾಮದವ ನಾನು ಡೈರಿ ಅದ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಬಹಳ ಕಷ್ಟ ಕಾರ್ಯ. ಚಲಾಕಿ ಇಲ್ಲಾ ಎಂದರೆ ಚಲ್ಲೆ ಹಣ್ಣು ತಿನ್ನುಸುವುದು ಗ್ಯಾರೆಂಟಿ ಎಂದರು. ಆದರೂ ಈ ಗ್ರಾಮದಲ್ಲಿ ಡೈರಿಯನ್ನು ಇಷ್ಟು ಅಭಿವೃದ್ದಿ ಮಾಡಿರುವುದು ಸಂತಸವಾಗಿದೆ ಎಂದರು.ಕೋಚಿಮುಲ್ ಅಧ್ಯಕ್ಷ ಕೆ ವೈ ನಂಜೇಗೌಡ ಮಾತನಾಡಿ ಹಾಲು ಉತ್ಪಾದನೆಯು ರಾಜ್ಯದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಅವಳಿ ಜಿಲ್ಲೆಗಳಲ್ಲಿ ನೀರಿನ ಅಭಾವವಿದ್ದರೂ ರೈತರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಅಭಿವೃದ್ದಿಗೆ ಹಾಲು ಸಹಕಾರಿಯಾಗಿದೆ ,ರೈತರ ಹಸು ತೊಂದರೆಯಾದರೆ ತಕ್ಷಣ ಇನ್ಸೂರೆನ್ಸ್ ನೀಡಲಾಗುತ್ತಿದೆ,ಬಿಎಂಸಿಗಳಿಂದ ಹಾಲಿನ ಗುಣಮಟ್ಟವು ಹೆಚ್ಚಾಗಿದೆ,ಚಿಂತಾಮಣಿಗೆ ಅತಿ ಹೆಚ್ಚಿನ ಅನುಧಾನ ನೀಡಲಾಗಿದೆ ಎಂದು ತಿಳಿದಿದರು. ನಂತರ ಸಚಿವ ಡಾ.ಎಂಸಿ ಸುಧಾಕರ್ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ತೊಡಕುಗಳಿದ್ದು ಚುನಾವಣೆಗಳು ಬೇರೆ ರೀತಿ ನಡೆಯುತ್ತಿವೆ ಹಾಲು ಹಾಕದವರು ಡಾಮಿನೇಟ್ ಮಾಡುವ ವ್ಯವಸ್ಥೆ ನಡೆಯಬಾರದು. ಹಾಲು ಹಾಕವರು ಮಾತ್ರ ಓಟು ಹಕ್ಕು ವ್ಯವಸ್ಥೆಯಾಗಬೇಕಿದೆ ಎಂದರು
ಕರ‍್ಯಕ್ರಮದಲ್ಲಿ ಡೈರಿ ಅದ್ಯಕ್ಷ ವೆಂಕಟೇಶ ಗೌಡ,ಕೊಚಿಮುಲ್ ನರ‍್ದೇಶಕ ಅಶ್ವತ್ಥನಾರಾಯಣ ಬಾಬು ,ಸೀಕಲ್ ಗ್ರಾಮ ಪಂಚಾಯತಿ ಅದ್ಯಕ್ಷ ನರೇಂದ್ರ ಗೌಡ,ವ್ಯವಸ್ಥಾಪಕ ಗೋಪಾಲಮರ‍್ತಿ,ಉಪ ವ್ಯವಸ್ಥಾಪಕ ಮಹೇಶ್ ,ಬಿಎಂಸಿ ತಾಂತ್ರಿಕ ಅಧಿಕಾರಿ ಪ್ರಭು,ವಿಸ್ತರಣಾಧಿಕಾರಿ ಸಂತೋಷ್ ಬಾಬು,ಗ್ರಾಮ ಪಂಚಾಯಿತಿ ಸದಸ್ಯ ರವಿ.ಆನೂರು ಸುಬ್ಬಣ್ಣ,ರೈತ ಸಂಘ ಅದ್ಯಕ್ಷ ರಮಣಾರೆಡ್ಡಿ, ಖಂಡರು, ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.