ಮಳೆಗೆ ಕಳಚುತ್ತಿವೆ ರಾಮೇಶ್ವರ ದೇಗುಲ ಗೋಪುರದ ಗೊಂಬೆಗಳು

KannadaprabhaNewsNetwork |  
Published : May 30, 2025, 12:20 AM IST
29ಎಚ್ಎಸ್ಎನ್4ಎ : ರಾಮನಾಥಪುರ  ಶ್ರೀ ರಾಮೇಶ್ವರಸ್ವಾಮಿ ದೇವಾಲಯ ಗೋಪುರದ  ಅಚ್ಚು ಗೊಂಬೆಗಳು ಬಿದ್ದಿರುವುದು. | Kannada Prabha

ಸಾರಾಂಶ

ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ 5 ಯುಗಗಳ ಕಾಲದಾಗಿದ್ದು, ಕೃತಯುಗದಲ್ಲಿ ಸಂವರ್ತಕೇಶ್ವರ, ತ್ರೇತಾಯುಗದಲ್ಲಿ ವಾಸುಕೀಶ್ವರ, ದ್ವಾಪರಯುಗದಲ್ಲಿ ವಹ್ನಿಶ್ವರ ಹಾಗೂ ಈ ಕಲಿಯುಗದಲ್ಲಿ ರಾಮೇಶ್ವರಸ್ವಾಮಿ ಎಂದು ಕರೆಸಿಕೊಳ್ಳುತ್ತಿರುವ ( ಹಿಂದೆ ಅಗ್ನಿಯಿಂದ ಪೂಜಿಸಲ್ಪಟ್ಟ ) ಈ ಶಿವಲಿಂಗವೂ ಚತುರ್ಯುಗಮೂರ್ತಿ ಎಂದೇ ಪ್ರಖ್ಯಾತ. ಮಹರ್ಷಿ ಭೃಗುಗಳ ಶಾಪಕ್ಕೆ ಗುರಿಯಾದ ಅಗ್ನಿಯನ್ನು ಸಾನುರಾಗದಿಂದ ಪೊರೆದ ಶ್ರೀ ರಾಮೇಶ್ವರನ ಮಹಿಮೆ ಇರುವ ಇಂತಹ ದೇವಾಲಯದ ಜಿರ್ಣೋದ್ಧಾರದ ಪ್ರಗತಿಗೆ ಸಹಕರಿಸುವಂತೆ ದೇವಾಲಯದ ಸಮಿತಿ ಮಾಜಿ ಸದಸ್ಯ ರಘು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರಇಲ್ಲಿಯ ಪುರಾತನ ಕಾಲದ ಚತುರ್ಯಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯ ಗೋಪುರದ ಕೆಲವು ಅಚ್ಚು ಗೊಂಬೆಗಳು ಮಂಗಳವಾರ ಬಿದ್ದ ಭಾರಿ ಮಳೆಯಿಂದ ಬಿದ್ದುಹೋಗಿವೆ. ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ 5 ಯುಗಗಳ ಕಾಲದಾಗಿದ್ದು, ಕೃತಯುಗದಲ್ಲಿ ಸಂವರ್ತಕೇಶ್ವರ, ತ್ರೇತಾಯುಗದಲ್ಲಿ ವಾಸುಕೀಶ್ವರ, ದ್ವಾಪರಯುಗದಲ್ಲಿ ವಹ್ನಿಶ್ವರ ಹಾಗೂ ಈ ಕಲಿಯುಗದಲ್ಲಿ ರಾಮೇಶ್ವರಸ್ವಾಮಿ ಎಂದು ಕರೆಸಿಕೊಳ್ಳುತ್ತಿರುವ ( ಹಿಂದೆ ಅಗ್ನಿಯಿಂದ ಪೂಜಿಸಲ್ಪಟ್ಟ ) ಈ ಶಿವಲಿಂಗವೂ ಚತುರ್ಯುಗಮೂರ್ತಿ ಎಂದೇ ಪ್ರಖ್ಯಾತ. ಮಹರ್ಷಿ ಭೃಗುಗಳ ಶಾಪಕ್ಕೆ ಗುರಿಯಾದ ಅಗ್ನಿಯನ್ನು ಸಾನುರಾಗದಿಂದ ಪೊರೆದ ಶ್ರೀ ರಾಮೇಶ್ವರನ ಮಹಿಮೆ ಇರುವ ಇಂತಹ ದೇವಾಲಯದ ಜಿರ್ಣೋದ್ಧಾರದ ಪ್ರಗತಿಗೆ ಸಹಕರಿಸುವಂತೆ ದೇವಾಲಯದ ಸಮಿತಿ ಮಾಜಿ ಸದಸ್ಯ ರಘು ಒತ್ತಾಯಿಸಿದರು. ಕ್ಷೇತ್ರದ ಶಾಸಕ ಎ. ಮಂಜು ಮಾತನಾಡಿ, ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯ ಪುರಾತನ ಕಾಲದಾಗಿದೆ. ಈ

ದೇವಾಲಯ ಬಹಳ ಶಿಥಿಲವಾಗಿದ್ದು ದೇವಾಲಯದ ಸುತ್ತಲೂ ಇರುವ ಪೌಳಿ ಹಾಗೂ ಮಂಟಪಗಳಲ್ಲಿ ಬಿರುಕು ಬಿಟ್ಟಿದ್ದು, ಶಿಲಾಶಾಸನಗಳು ಪೂರ್ಣ ಹಾಳಾಗಿವೆ. ಈ ಹಿಂದೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳವರ ಕೋರಿಕೆ ಮೇರೆಗೆ ದೇವಾಲಯದ ಸಮುಚ್ಚಯವನ್ನು ಸಂಪೂರ್ಣವಾಗಿ ಬಿಚ್ಚಿ ತಳಪಾಯ ಭದ್ರಪಡಿಸಿ, ಸಂರಕ್ಷಿಸಲು ಈ ಕಾಮಗಾರಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದು ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ 2024- 25ನೇ ಸಾಲಿನಲ್ಲಿ ಪುರಾತತ್ವ ಇಲಾಖೆ ವತಿಯಿಂದ ಕ್ರಮಕೈಗೊಂಡು ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿ ಹಾಗೂ ಆಡಳಿತಾತ್ಮಕ ಅನುಮೋದನೆಯೊಂದಿಗೆ ಹಣ ಅನುದಾನ ಬಿಡುಗಡೆ ಮಾಡಲು ಸಚಿವರಲ್ಲಿ ಕೋರಲಾಗಿದೆ ಎಂದು ಎ. ಮಂಜು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ