ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾಜುಲೈ 22ರಂದು ಮದುವೆಯ ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮವಿತ್ತು. ಈ ಖುಷಿಯನ್ನು ಸಂತಸದಿಂದಲೇ ಆಚರಿಸಬೇಕು ಎಂಬ ತವಕದಿಂದಲೆ ಹೊಟ್ಟೆ ಪಾಡಿಗಾಗಿ ಜೋಯಿಡಾದಿಂದ ಕೇರಳಕ್ಕೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ. ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಪತಿ ಮಾತ್ರ ದಾರಿಯ ಮಧ್ಯೆಯೆ ವಿಧಿಯಾಟಕ್ಕೆ ಸಿಲುಕಿ ನಾಪತ್ತೆಯಾಗಿದ್ದ. ತನ್ನ ಗಂಡನೊಂದಿಗೆ ಸಂಭ್ರಮ ಆಚರಿಕೊಳ್ಳಬೇಕಿದ್ದ ಪತ್ನಿ ಈಗ 6 ತಿಂಗಳ ಮಗುವನ್ನು ಎತ್ತುಕೊಂಡು ಕಣ್ಣಿರಲ್ಲೇ ಪತಿಯ ಬರುವಿಕೆಯ ದಾರಿ ಎದುರು ನೋಡುತ್ತಿರುವ ಈ ಕರಾಣಾಜನಕ ಕಥೆ ಕರಳು ಹಿಂಡುವಂತಿದೆ.
ಹೌದು.. ಇದು ಅಂಕೋಲಾದ ಶಿರೂರಿನ ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿಯೊಂದಿಗೆ ಕಣ್ಮರೆಯಾದ ಕೇರಳದ ಕ್ಯಾಲಿಕೆಟ್‌ನ ಅರ್ಜುನ ಡಿ. ದುರಂತದ ವ್ಯಥೆಯ ಕಥೆ.ಪ್ರೀತಿಸಿ ಮದುವೆಯಾಗಿದ್ದರು:
ಕೇರಳದ ಕ್ಯಾಲಿಕೆಟ್‌ನ ಅರ್ಜುನ ಡಿ. (34) ಹಾಗೂ ಕೃಷ್ಣಪ್ರಿಯಾ (24) ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. ಚೆನ್ನಾಗಿ ಬಾಳಬೇಕು. ಕಿರಿಯ ಸಹೋದರಿಯ ಮದುವೆಯಾದ ಮೇಲೆ ನೂತನ ಮನೆ ಕಟ್ಟಿ ಆನಂದದಿಂದ ಜೀವನ ಸಾಗಿಸಲು ಹತ್ತಾರು ಹೊಂಗನಸನ್ನು ಇಟ್ಟು ಈ ದಂಪತಿ ಬಹಳ ಅನೋನ್ಯವಾಗಿ ಜೀವನ ಸಾಗಿಸುತ್ತಿದ್ದರು.ಆಗಾಗ ಪೋನ್ ಮಾಡುತ್ತಿದ್ದ ಪತಿ:
ಅರ್ಜುನ ಕೇರಳ ಕ್ಯಾಲಿಕೆಟ್‌ನಿಂದ ಜುಲೈ 8ರಂದು ಲಾರಿ ಏರಿ ದಾಂಡೇಲಿಗೆ ಹೊರಟಿದ್ದ. ಪ್ರತಿದಿನವು ಏಳೆಂಟು ಭಾರಿ ಪತ್ನಿ ಸುವೇಧಾಗೆ ಕರೆ ಮಾಡಿ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದ. ಘಟನೆ ನಡೆದ ಜುಲೈ 16ರಂದು ಬೆಳಗ್ಗೆ 8. 50ಕ್ಕೆ ಪತಿಗೆ ಕರೆ ಮಾಡಿದ್ದ ಅರ್ಜುನ್ ನಾನು ಅಂಕೋಲಾದ ತನಕ ಬಂದು ಮುಟ್ಟಿದ್ದೇನೆ. ನಾಳೆ ಬೆಳಗಾಗುವುದರೊಳಗೆ ನಾನು ಅಲ್ಲಿರುತ್ತೇನೆ. ಬಂದು ಮಗು ಹಾಗೂ ನಿನಗೆ ಬಟ್ಟೆ ಕೊಡಿಸುತ್ತೇನೆ ಎಂದು ಹೇಳಿ ಪೋನ್ ಇಟ್ಟಿದ್ದ.20 ನಿಮಿಷದಲ್ಲೆ ಆಘಾತದ ಕರೆ:
ಪತಿ ಕರೆ ಮಾಡಿ ಇಪ್ಪತ್ತೇ ನಿಮಿಷದಲ್ಲಿ ಇನ್ನೊಂದು ಲಾರಿಯವರು ಕರೆ ಮಾಡಿ, ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಅರ್ಜುನ ಕಣ್ಮರೆಯಾಗಿದ್ದಾನೆ ಎಂಬ ಆಘಾತಕಾರಿ ವಿಷಯ ಬರಸಿಡಿಲಿನಂತೆ ಕೇಳಿತ್ತು. ಪುನ: ಪತಿಗೆ ಮಾಡಿದರೆ ಕೇಳಿ ಬರುತ್ತಿದ್ದ ಸ್ವೀಚ್ಡ್ ಆಫ್ ಸಂದೇಶ ಇನ್ನಷ್ಟು ಆತಂಕ್ಕೆ ಎಡೆ ಮಾಡಿಕೊಟ್ಟಿತ್ತು. ಕಂಡ ಕನಸುಗಳೆಲ್ಲ ಮಣ್ಣಿನಲ್ಲಿ ಕೊಚ್ಚಿ ಹೋದಂತೆ ಶಿರೂರಿನ ದುರಂತ ಪ್ರಕರಣ ಎದುರಾಗಿತ್ತು.ಸಹೋದರಿಯ ಮದುವೆಗೂ ತಯಾರಿ:
ಅರ್ಜುನನಿಗೆ, ತಂದೆ-ತಾಯಿ ಇಬ್ಬರು ಸಹೋದರಿಯರು, ಒರ್ವ ಸಹೋದರ, ಪತ್ನಿ ಆರು ತಿಂಗಳ ಮಗು ಇವರೇ ಪ್ರಪಂಚವಾಗಿತ್ತು. ಒಬ್ಬ ಸಹೋದರಿಯನ್ನು ಮದುವೆ ಮಾಡಿ ಕೊಡಲಾಗಿತ್ತು. ಇನ್ನೊಬ್ಬ ಸಹೋದರಿಯ ಮದುವೆಯ ಕೂಡ ಸೆಪ್ಚೆಂಬರ್ ತಿಂಗಳಲ್ಲಿ ನಿಗದಿಯಾಗಿತ್ತು. ತಂಗಿಯ ಮದುವೆಯನ್ನು ಅದ್ಧೂರಿಯಿಂದ ನಡೆಸಬೇಕು ಎಂಬ ಹಂಬಲ ಅರ್ಜುನನದ್ದಾಗಿತ್ತು. ಆದರೆ ವಿಧಿ ಲಿಖಿತ ಮಾತ್ರ ಬೇರೆಯದೆ ಆಗಿತ್ತು.ಜು. 18ರಿಂಗ್ ಆಗಿತ್ತು :
ಘಟನೆ ನಡೆದ ದಿನ ಸ್ವೀಚ್ಟ್ ಆಫ್ ಆಗಿದ್ದ ಪೋನ್ ಜುಲೈ 18ರಂದು ಕರೆ ಮಾಡಿದಾಗ ರಿಂಗ್ ಆಗಿತ್ತು. ಆದರೆ, ಅರ್ಜುನ ಕರೆ ಸ್ವೀಕರಿಸಿರಲಿಲ್ಲ. ಮತ್ತೆ ಪೋನ್ ಮಾಡಿದಾಗ ಕನೆಕ್ಟ್ ಆಗಿರಲಿಲ್ಲ. ಹೀಗಾಗಿ, ನನ್ನ ಪತಿ ಇನ್ನೂ ಬದುಕಿದ್ದಾರೆ ಎಂದು ನನ್ನ ಆತ್ಮ ಸಾಕ್ಷಿ ಹೇಳುತ್ತಿದೆ ಎಂದು ಪತಿ ಸುವೇಧಾ ಗೋಗೆರೆಯುತ್ತಲೆ ಇದ್ದಾಳೆ.ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಕೇರಳ ಸರಕಾರ:
ಜು. 16ರಂದು ಶಿರೂರಿನ ಹೆದ್ದಾರಿ ಪಕ್ಕದಲ್ಲಿದ್ದ ಲಕ್ಷಣ ನಾಯ್ಕ ಅವರ ಹೊಟೇಲನಲ್ಲಿಯೇ ಚಹ ಕುಡಿದು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ. ಇಲ್ಲಿಯೆ ಲಾರಿ ಮಣ್ಣಿನಲ್ಲಿ ಸಿಲುಕಿರುವ ಬಗ್ಗೆ ಲಾರಿಗೆ ಅಳವಡಿಸಲಾಗಿದ್ದ ಜಿಪಿಎಸ್ ಲೋಕೇಶನ ಮೂಲಕ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರ್ಜುನನ ಸಹೋದರ ಅಭಿಜಿತ್ ತನ್ನ ಅಣ್ಣನನ್ನು ಹುಡುಕಿಕೊಡುವಂತೆ ದೂರನ್ನು ಕೂಡ ನೀಡಿದ್ದ.ಆದರೆ ಅರ್ಜುನನ ಕುಟುಂಬ ಮಾತ್ರ ಈ ಮಣ್ಣು ತೆರವಿನ ಕಾರ್ಯಾಚರಣೆ ವಿಫಲತೆಯಿಂದ ಸಾಗಿದೆ. ಕೇವಲ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಜಿಪಿಎಸ್ ಕಾಣಿಸುವಲ್ಲಿ ಮಣ್ಣು ತೆರವುಗೊಳಿಸಿದಲ್ಲಿ ಲಾರಿಯಲ್ಲಿ ಬದುಕಿರುವ ಸಾಧ್ಯತೆ ಇರುವ ಅರ್ಜುನನನ್ನು ರಕ್ಷಿಸಿಬಹುದು ಎಂದು ವಿನಂತಿಸಿತ್ತು.
ಈ ಬಗ್ಗೆ ಸೂಕ್ತ ಸ್ಪಂದನೆ ಸಿಗದೇ ಇರುವ ನಿಟ್ಟಿನಲ್ಲಿ ಕೇರಳದ ಮಾಧ್ಯಮ ಮತ್ತು ಸರಕಾರದ ಸಹಾಯಕ್ಕೆ ಈ ಕುಟುಂಬ ಸಾಗಿತ್ತು. ಕೂಡಲೇ ಎಚ್ಚೆತ್ತ ಕೇರಳ ಸರಕಾರ ಕೇರಳ ವೆಹಿಕಲ್ ಟ್ರಾನ್ಸ್‌ಫೋರ್ಟ್ ಅಧಿಕಾರಿ ಚಂದ್ರಯಾನ್ ಹಾಗು ಹಿರಿಯ ಪೊಲಿಸ್ ಅಧಿಕಾರಿ ಪ್ರೇಮ ಸದನ ಅವರನ್ನು ಕರ್ನಾಟಕಕ್ಕೆ ಕಳುಹಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ವರದಿ ಒಪ್ಪಿಸುವಂತೆ ಆದೇಸಿಸಿತ್ತು.ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅಂಕೊಲಾದ ಶಿರೂರಿಗೆ ಬಂದು ಕಾರ್ಯಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇರಳದ 30ಕ್ಕೂ ಹೆಚ್ಚು ಸುದ್ದಿವಾಹಿನಿಗಳು ಶಿರೂರಿಗೆ ಆಗಮಿಸಿ ವರದಿ ಮಾಡುತ್ತಲಿದೆ.
ಕರ್ನಾಟಕ ಸರಕಾರಕ್ಕೆ ಛೀಮಾರಿ ಹಾಕಿದ ಕೇರಳ ಸರಕಾರ:ಶಿರೂರಿನಲ್ಲಿ ಕೇವಲ ಮಣ್ಣು ತೆರವು ಕಾರ್ಯಾಚರಣೆ ಮಾತ್ರ ನಡೆಯುತ್ತಿದೆ. ಅಪಾಯದಲ್ಲಿ ಸಿಲುಕಿರುವ ಅರ್ಜುನ ಸೇರಿದಂತೆ ಇತರರ ರಕ್ಷಣೆಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕರ್ನಾಟಕ ಸರಕಾರ ವಿಫಲವಾಗಿದೆ ಎಂದು ಕೇರಳದ ಮಾದ್ಯಮಗಳು ಕರ್ನಾಟಕವನ್ನು ಛೀಮಾರಿ ಹಾಕುತ್ತಿರುವ ವರದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೆಟಲ್ ಡಿಟೆಕ್ಟರ್‌ನಿಂದ ಶೋಧಕೇರಳದ ಸರಕಾರದಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಶೋಧ ಕಾರ್ಯವನ್ನು ಸುರತ್ಕಲನ ಎನ್ಐಟಿಕೆ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ತಜ್ಞರು ಮಾಡುತ್ತಿದ್ದಾರೆ. ಸುಮಾರು 4 ಅಡಿ ಆಳದ ವರೆಗೆ ರೇಡಾರ್ ಮೂಲಕ ಇರುವ ಮೆಟಲ್ ಪತ್ತೆ ಮಾಡುವ ಸಾಧನ ಇದಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮೂರು ಕಡೆ ಸಿಗ್ನಲ್ ದೊರೆತಿದ್ದು, ಅದು ವಾಹನಗಳೆ ಎಂಬ ಬಗ್ಗೆ ದೃಢೀಕರಿಸಲು ಶೋಧ ಕಾರ್ಯ ಮುಂದುವರಿದಿದೆ.