ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಪಾರದರ್ಶಕ

KannadaprabhaNewsNetwork |  
Published : Jul 12, 2026, 04:00 AM IST
(ಫೋಟೊಬಿಕೆಟಿ2, ಜಿಲ್ಲಾಧಿಕಾರಿ ಸಂಗಪ್ಪ  ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜರುಗಿದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತ ಸಾರ್ವಜನಿಕರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಜಿಲ್ಲೆಯ ಆಸಕ್ತ ಬಿಡ್ಡುದಾರರು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಜಿಲ್ಲೆಯ ಆಸಕ್ತ ಬಿಡ್ಡುದಾರರು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತ ಸಾರ್ವಜನಿಕರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಬಕಾರಿ ಸನ್ನದುಗಳ ಇ-ಹಾರಾಜು ಪ್ರಕ್ರಿಯೆಯಲ್ಲಿ ಶೇ.18ರಷ್ಟು ಮಾತ್ರ ಮೀಸಲಾತಿ ಇರಿಸಲಾಗಿದ್ದು, ಉಳಿದಂತೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿರುತ್ತದೆ. ಇದೇ ಜುಲೈ 24 ರಿಂದ 31ರವರೆಗೆ ರಾಜ್ಯಾದ್ಯಂತ 579 ಅಬಕಾರಿ ಸನ್ನದುಗಳನ್ನು ಇ-ಹರಾಜು ನಡೆಸಲಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ 8 ಸನ್ನದುಗಳನ್ನು ಜುಲೈ 28 ರಂದು ಹಾಗೂ ವಿಜಯಪೂರ ಜಿಲ್ಲೆಯ 9 ಸನ್ನದುಗಳನ್ನು ಜುಲೈ 30ರಂದು ಇ-ಹರಾಜು ನಡೆಸಲಾಗುತ್ತದೆ, ಇದರ ಸದುಪಯೋಗವನ್ನು ನಿರೀಕ್ಷಿತ ಬಿಡ್ಡುದಾರರು ಪಡೆದುಕೊಳ್ಳಬೇಕು ಎಂದರು.

ಅಪರ ಅಬಕಾರಿ ಆಯುಕ್ತ ಬಸವರಾಜ ಸೋಮಣ್ಣನವರ ಮಾತನಾಡಿ, ಈ ಹಿಂದೆ ಕೊಟ್ಟಂತಹ ಸನ್ನದುಗಳು ವಂಶಾವಳಿಯಾಗಿ ಮುಂದುವರೆಯುತ್ತಿದ್ದವು, ಆದರೆ ಈಗ ಪ್ರತಿ ಐದು ವರ್ಷಕೊಮ್ಮೆ ಹರಾಜು ಪ್ರಕ್ರಿಯೆ ಮೂಲಕ ಬದಾಯಿಸಲಾಗುತ್ತದೆ. 2026-27 ರಿಂದ 2030-31 ಅವಧಿಯ ಸನ್ನದುಗಳನ್ನು ಪಡೆಯಲು ಗೇಜೇಟ್ ನೋಟಿಫಿಕೇಶನ ಹೊರಡಿಸಲಾಗಿದ್ದು, ಜುಲೈ 1ರಂದು ಅಧಿಸೂಚನೆ ಹೊರಬಿದ್ದಿದ್ದು, ಜುಲೈ 3 ರಿಂದ ನೋಂದಣಿಗೆ ಅವಕಾಶ ನೀಡಲಾಗಿರುತ್ತದೆ. ಜುಲೈ 6 ರಿಂದ 14 ರವರೆಗೆ ನಿರೀಕ್ಷಿತ ಬಿಡ್ಡುದಾರರಿಗೆ ತರಬೇತಿ ನೀಡಲಾಗುತ್ತಿದ್ದು, ಜುಲೈ 24 ರಿಂದ 31 ವರೆಗೆ ಅಬಕಾರಿ ಸನ್ನದುಗಳನ್ನು ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಬೆಳಗಾವಿ ಅಬಕಾರಿ ಜಂಟಿ ಆಯುಕ್ತ ಎಫ್.ಎಚ್.ಚಲವಾದಿ, ಬಾಗಲಕೋಟ ಅಬಕಾರಿ ಉಪಆಯುಕ್ತ ತಿಪ್ಪೇಸ್ವಾಮಿ ಡಿ.ಎನ್ ವಿಜಯಪುರ ಅಬಕಾರಿ ಉಪ ಆಯುಕ್ತ ಮುರಳಿದರ್, ಬಾಗಲಕೋಟೆ ಅಬಕಾರಿ ಅಧೀಕ್ಷಕ ಹನುಮಂತಪ್ಪ, ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಆಸಕ್ತ ಬಿಡ್ದಾರರು ಇದ್ದರು.

ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಆಗದೇ ಉಳಿದಂತಹ ಸನ್ನದುಗಳನ್ನು ಮತ್ತೆ 6 ತಿಂಗಳ ನಂತರ ಹರಾಜು ಹಾಕಲಾಗುತ್ತದೆ. ಲೈವ್ ಬಿಡ್ಡಿಂಗ್ ಇರುತ್ತದೆ. ಇದಕ್ಕೆ ಬಿಡ್ದಾರರು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್‌ ಗಳನ್ನೇ ಬಳಸಬೇಕಾಗುತ್ತದೆ. ಮೊಬೈಲ್ ನಿಂದ ಬರುವುದಿಲ್ಲ. ಇದರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಯಾವುದೇ ರೀತಿಯ ಹಸ್ತಕ್ಷೇಪವಿರುವುದಿಲ್ಲ, ಮಧ್ಯವರ್ತಿಗಳ ಮಾತುಗಳಿಗೆ ಮರಳಾಗಬಾರದು, ಯಾವುದೇ ಮೋಸಗಳಿಗೆ ಅವಕಾಶವಿರುವುದಿಲ್ಲ, ಪ್ರತಿಯೊಂದು ಸನ್ನದ್ದಕ್ಕು ಕೂಡ ಪ್ರತ್ಯೇಕ ಅರ್ಜಿ ಹಾಕಬೇಕಾಗಿರುತ್ತದೆ. ನಿಗದಿಪಡಿಸಿದ ದುಡ್ಡನ್ನು ತುಂಬುವುದನ್ನು, ನಿಯಮಾವಳಿಗಳನ್ನು, ಮಾನದಂಡಗಳನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ.

-ಬಸವರಾಜ ಸೋಮಣ್ಣನವರ, ಅಪರ ಅಬಕಾರಿ ಆಯುಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ಜಾಲದ ವಿರುದ್ಧ ಪೊಲೀಸ್ ಸಮರ
ಲೋಕ ಅದಾಲತ್‌ ನಲ್ಲಿ 890 ಪ್ರಕರಣಗಳು ಇತ್ಯರ್ಥ