ಕೆಇಎಸ್ ಕಾಲೇಜನ ಶಿಕ್ಷಣ ಸೇವೆ ಅಮೋಘವಾದುದು: ಶಾಂತಲಿಂಗ ಶ್ರೀ

KannadaprabhaNewsNetwork |  
Published : Nov 29, 2026, 02:15 AM IST
(28ಎನ್.ಆರ್.ಡಿ4 ಶಿವಾನುಭವ ಕಾರ್ಯಕ್ರಮದಲ್ಲಿ ಕೆ.ಇ.ಎಸ್ ಶಿಕ್ಷಣ ಸಂಸ್ಥೆಯವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.)  | Kannada Prabha

ಸಾರಾಂಶ

ಈ ಭಾಗದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರ ಹಣತೆ ಹಚ್ಚಿದ ಕೊಣ್ಣೂರ ಕೆಇಎಸ್ ಶಿಕ್ಷಣ ಸಮಿತಿಯ ಶಿಕ್ಷಣ ಸೇವೆ ಅಮೋಘವಾದುದು.

ಕನ್ನಡಪ್ರಭ ವಾರ್ತೆ ನರಗುಂದ

ಈ ಭಾಗದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರ ಹಣತೆ ಹಚ್ಚಿದ ಕೊಣ್ಣೂರ ಕೆಇಎಸ್ ಶಿಕ್ಷಣ ಸಮಿತಿಯ ಶಿಕ್ಷಣ ಸೇವೆ ಅಮೋಘವಾದುದು. ವಜ್ರಮಹೋತ್ಸವವು ಕೇವಲ ಅರವತ್ತು ವರ್ಷಗಳ ಸಂಭ್ರಮವಲ್ಲ, ಅದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಸ್ಥಾಪಕರ ದೂರದೃಷ್ಟಿ ಎಂದು ಶ್ರೀ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 389ನೇ ಮಾಸಿಕ ಶಿವಾನುಭವ ಹಾಗೂ ಕೊಣ್ಣೂರು ಶಿಕ್ಷಣ ಸಮಿತಿಯ ವಜ್ರಮಹೋತ್ಸವದ ನಿಮಿತ್ತ ಸದಸ್ಯರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

1965ರಲ್ಲಿ ಆ ಗ್ರಾಮದ ವಿರಕ್ತಮಠದ ಶ್ರೀಗಳು ಮತ್ತು ಗೋವಿಂದರೆಡ್ಡಿ ಚೌಡರೆಡ್ಡಿ ಸೇರಿದಂತೆ ಇನ್ನೂ ಹಲವಾರು ಶಿಕ್ಷಣ ಪ್ರೇಮಿಗಳಿಂದ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತ ಮುಂದೆ 1995ರಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸ್ವಂತ ಕಟ್ಟಡವನ್ನು ಹೊಂದುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಿದೆ. ಅಂದಿನಿಂದ ಇಂದಿನವರೆಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಇಮ್ಮಡಿಯಾಗಲಿ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಕೊಣ್ಣೂರು ವಿರಕ್ತಮಠದ ಚನ್ನವೀರೇಶ್ವರ ಶ್ರೀಗಳು ಮಾತನಾಡಿ, ಕೆಇಎಸ್ ಶಿಕ್ಷಣ ಸಂಸ್ಥೆಯು ಆರು ದಶಕಗಳ ಶೈಕ್ಷಣಿಕ ಪಯಣದಲ್ಲಿ ಜಾತಿ ಬೇಧವನರಿಯದೆ ಸರ್ವರಿಗೂ ವಿದ್ಯಾದಾನ ಮಾಡುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುತ್ತಾ ಬಂದಿದೆ. ವಜ್ರಮಹೋತ್ಸವದ ಈ ಐತಿಹಾಸಿಕ ಸಂಭ್ರಮವು ಸಂಸ್ಥೆಯ ಭವಿಷ್ಯದ ಶೈಕ್ಷಣಿಕ ಸಾಧನೆಗಳಿಗೆ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ನೀಡಲಿ ಎಂದು ಹೇಳಿದರು.

ಈ ಸಂದರ್ಭ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಟಿ.ಚೌಡರೆಡ್ಡಿ, ಎಸ್.ಬಿ. ಯಲಿಗಾರ, ನಿಂಗಪ್ಪ ಸೋಮಾಪೂರ, ಇಸಾಕ್ ಮಸೂತಿಮನಿ, ಪ್ರಾಚಾರ್ಯ ಕೆ.ಎಂ. ಮಾಕನ್ನವರ, ದೈಹಿಕ ಶಿಕ್ಷಕ ಹೇಮಯ್ಯ ಶಿವಪ್ಪಯ್ಯನಮಠವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಧಾರವಾಡ ಉಚ್ಛ ನ್ಯಾಯಾಲಯದ ನ್ಯಾಯವಾದಿ ಕೆ.ಎಸ್. ಕೋರಿಶೆಟ್ಟರ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಿ.ಬಿ. ಐನಾಪೂರ, ಬಸಪ್ಪ ಸಂಗಳದ, ಈರಪ್ಪ ಐನಾಪೂರ, ಚನ್ನಬಸಪ್ಪ ತಿಗಡಿ, ಆರ್.ಕೆ. ಐನಾಪೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನ್‌ಲೈನ್‌ ಗೇಮ್‌ ವಂಚನೆ: 495 ಯುಆರ್‌ಎಲ್‌ಗಳು ಪತ್ತೆ
ಮತದಾನ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಶಕ್ತಿ: ಉಮೇಶ ಮೇಟಿ