ಸಹಕಾರ ಸಂಘ ಅಭಿವೃದ್ಧಿಗೆ ಚುನಾಯಿತ ಸದಸ್ಯರ ಶ್ರಮ ಅಗತ್ಯ

KannadaprabhaNewsNetwork | Published : Jan 24, 2024 2:04 AM

ಸಾರಾಂಶ

ರೈತರ ಹಿತ ಕಾಯುವ ಜತೆಗೆ ಸಹಕಾರ ಸಂಘದ ಬೆಳವಣಿಗೆಗೆ ಚುನಾಯಿತ ಸದಸ್ಯರು ಶ್ರಮಿಸಿದ್ದೆ ಆದರೆ ಸಂಘ ಹಾಗೂ ಸದಸ್ಯರ ಆರ್ಥಿಕ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿದರು.

ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿಕೆ । ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈತರ ಹಿತ ಕಾಯುವ ಜತೆಗೆ ಸಹಕಾರ ಸಂಘದ ಬೆಳವಣಿಗೆಗೆ ಚುನಾಯಿತ ಸದಸ್ಯರು ಶ್ರಮಿಸಿದ್ದೆ ಆದರೆ ಸಂಘ ಹಾಗೂ ಸದಸ್ಯರ ಆರ್ಥಿಕ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ಎಂ ಶಿವಲಿಂಗೇಗೌಡ ಹೇಳಿದರು.ಗಂಡಸಿ ಸಂತೇ ಮೈದಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ(ನಿ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಓರ್ವ ಸದಸ್ಯ ಸೇರಿದಂತೆ ಒಟ್ಟು 11 ಮಂದಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿರುವ ಅವರು ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಬಹುದು ಇಲ್ಲಿ ಪಕ್ಷದ ಚಿನ್ನೆ ಇರದೆ ಹೋದರು ಚುನಾವಣೆಗಳಿಗೆ ಮಾತ್ರ ರಾಜಕೀಯ ಪಕ್ಷಗಳ ನಂಟು ಇದ್ದೇ ಇರುತ್ತದೆ ಅದೇ ರೀತಿ ನನಗೂ ನಮ್ಮ ಪಕ್ಷದ ಮುಖಂಡರ ಬೆಂಬಲಿತ ಅಭ್ಯರ್ಥಿಗಳು ಸಹಕಾರ ಸಂಘದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂಪೂರ್ಣವಾಗಿ ಗೆಲುವು ಸಾಧಿಸುವ ಮೂಲಕ ಗೆಲುವಿನ ನಗೆ ಬಿರಿಯುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೂತನವಾಗಿ ಸಹಕಾರ ಸಂಘಕ್ಕೆ ಆಯ್ಕೆಯಾಗಿರುವ ಸದಸ್ಯರೆಲ್ಲರೂ ಒಗ್ಗೂಡಿ ರೈತರ ಹಿತ ದೃಷ್ಟಿಯಿಂದ ಸಹಕಾರ ಸಂಘದ ಮೂಲಕ ಕೈಗೊಳ್ಳಬಹುದಾದ ಎಲ್ಲಾ ಕ್ರಮಗಳಿಗೆ ನಾನು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನ ಹಾಗೂ ಸ್ಥಳೀಯ ಪಕ್ಷದ ಎಲ್ಲಾ ಮುಖಂಡರ ಶ್ರಮದಿಂದಾಗಿ ಸಹಕಾರ ಸಂಘ ನಮ್ಮ ಬೆಂಬಲಿತ ಅಭ್ಯರ್ಥಿಗಳ ವಶವಾಗಿದೆ ನಮ್ಮ ಸದಸ್ಯರು ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ರೈತರಿಗೆ ತಲುಪಿಸುವ ಹಾಗೂ ಸಹಕಾರ ಸಂಘದ ಜನಸ್ನೇಹಿ ವೈವಾಟಿನ ಮೂಲಕ ರೈತರ ಶ್ರೇಯಸ್ಸಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.ಈ ಸಂದರ್ಭದಲ್ಲಿ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಣ್ಣೇಗೌಡ, ತೋಪೇಗೌಡ, ನಾಗೇಂದ್ರ, ಬಸವರಾಜು, ಮರಿಗೌಡ, ಮೋಹನ್ ಕುಮಾರ್, ರೇಣುಕಮ್ಮ, ಲಕ್ಕಯ್ಯ, ಲಕ್ಷ್ಮಮ್ಮ, ಶಿವಸ್ವಾಮಿ ಹಾಗೂ ಸತೀಶ್ ಅವರನ್ನು ಶಾಸಕರು ಹಾಗೂ ಮುಖಂಡರು ಸನ್ಮಾನಿಸಿ ಗೌರವಿಸಿದರು.ತಾಪಂ ಮಾಜಿ ಸದಸ್ಯ ಜಯಲಕ್ಷ್ಮಿ ಮಲ್ಲೇಶ್, ಆಗ್ರೋ ಬಾಬು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯ ರಾಮಚಂದ್ರ. ಮತ್ತಿತರರು ಉಪಸ್ಥಿತರಿದ್ದರು.ಸಹಕಾರ ಸಂಘದ ಬೆಳವಣಿಗೆಗೆ ಚುನಾಯಿತ ಸದಸ್ಯರು ಶ್ರಮಿಸಿದ್ದೆ ಆದರೆ ಸಂಘ ಹಾಗೂ ಸದಸ್ಯರ ಆರ್ಥಿಕ ಬೆಳವಣಿಗೆ ಕಾಣಲು ಸಾಧ್ಯ: ಕೆ,ಎಂ ಶಿವಲಿಂಗೇಗೌಡ

Share this article