ಗಾಯಕರಿಗೆ ಸಭಿಕರ ಪ್ರೋತ್ಸಾಹವೇ ಶ್ರೀರಕ್ಷೆ

KannadaprabhaNewsNetwork |  
Published : Jun 19, 2025, 11:50 PM ISTUpdated : Jun 19, 2025, 11:51 PM IST
5 | Kannada Prabha

ಸಾರಾಂಶ

ಮೈಸೂರು: ಜನಚೈತನ್ಯ ಫೌಂಡೇಶನ್ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗುರುವಾರ ಡಿಸ್ಕೋ ಮೆಲೋಡಿ ಸಾಂಗ್ಸ್ ಸಂಗೀತ ಸಂಜೆ ನಡೆಯಿತು.

ಮೈಸೂರು: ಜನಚೈತನ್ಯ ಫೌಂಡೇಶನ್ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗುರುವಾರ ಡಿಸ್ಕೋ+ ಮೆಲೋಡಿ ಸಾಂಗ್ಸ್ ಸಂಗೀತ ಸಂಜೆ ನಡೆಯಿತು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಮಾತನಾಡಿ, ಗಾಯಕರಿಗೆ ಸಭಿಕರ ಪ್ರೋತ್ಸಾಹವೇ ಶ್ರೀರಕ್ಷೆ. ನಾದಬ್ರಹ್ಮ ಸಭಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸಭಿಕರು ನೀಡುತ್ತಿರುವ ಸಹಕಾರದಿಂದ ವಿವಿಧ ಸಂಘಟನೆಗಳು ನಿರಂತರವಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದರು.

ಲಕ್ಷ್ಮಣ್‌ ಅವರು ವಕೀಲರಾಗಿ, ಗಾಯಕರಾಗಿ, ಸಮಾಜಸೇವಕರಾಗಿ ಕೆಲಸ ಮಾಡುತ್ತಾ 20ಕ್ಕೂ ಹೆಚ್ಚು ಜನರ ತಂಡ ಕಟ್ಟಿ, ಸತತ ಎರಡು ದಿನ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಮಾತನಾಡಿದರು.

ಜನಚೈತನ್ಯ. ಫೌಂಡೇಷನ್‌ ಅಧ್ಯಕ್ಷ ಆರ್‌. ಲಕ್ಷ್ಮಣ್‌ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್‌ಅಧ್ಯಕ್ಷರಾದ ವಕೀಲ ಆರ್. ಲಕ್ಷ್ಮಣ್ ಅವರ ನೇತೃತ್ವದಲ್ಲಿ

ಗಾಯಕರಾದ ಜಾಯ್ಸ್ ವೈಶಾಕ್, ಡಾ. ರೇಖಾ ಅರುಣ್, ಗುರುರಾಜ್, ಡಾ.ಎ.ಎಸ್. ಪೂರ್ಣಿಮಾ, ಅಜರುದ್ದೀನ್, ಡಾ.ಎ.ಎನ್. ಪದ್ಮಾ, ವಿಜಯ್‌ಆನಂದ್, ವೈ.ಎಂ. ನಾಗೇಂದ್ರ, ಕೆ.ಎಸ್. ಶೇಷಾದ್ರಿ, ಡಿ. ನಾಗೇಶ್, ಶಾಂತಕುಮಾರಿ, ರೂಪ್‌ಕುಮಾರ್, ಶಶಿಕಾಂತ್, ಮಧು. ನರಸಿಂಹಮೂರ್ತಿ, ತೇಜ್‌, ಸುಮಿತಾ, ತಿರುಮಲೇಶ್‌, ಪ್ರಮೀಳಾ ಅವರು ಜನಪ್ರಿಯ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಚಿತ್ರಗೀತೆಗಳನ್ನು ಹಾಡಿದರು. ಶುಕ್ರವಾರ ಸಂಜೆ 4.30 ರಿಂದ 9.30 ರವರೆಗೆ ಗಾಯನ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶ ಇರುತ್ತದೆ. ಸಿ.,ಸಬಿತಾ, ಪಿ. ಗುರುಸ್ವಾಮಿ, ಟಿ. ಚೇತನ್‌, ಶ್ರೀನಿವಾಸ್‌, ಜಿ. ಪೀಟರ್‌, ವಿ. ಪ್ರಶಾಂತ್‌, ಡಿ.ಎಲ್. ವಿಕಾಸ್‌ ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ