ಸಮಸ್ತ ಪಡ್ತಿ ಸಮಾಜ ಗೆದ್ದಿದೆ: ರೂಪಾಲಿ ನಾಯ್ಕ

KannadaprabhaNewsNetwork |  
Published : Mar 25, 2025, 12:45 AM IST
ಚಾಂಪಿಯನ್ ತಂಡ  | Kannada Prabha

ಸಾರಾಂಶ

ಪಡ್ತಿ ಸಮಾಜ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಗೆಲುವು ಸೋಲಿಗಿಂತ ಮುಖ್ಯವಾಗಿ ಸಮಸ್ತ ಪಡ್ತಿ ಸಮಾಜ ಗೆದ್ದಿದೆ.

ಕಾರವಾರ: ಪಡ್ತಿ ಸಮಾಜ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಗೆಲುವು ಸೋಲಿಗಿಂತ ಮುಖ್ಯವಾಗಿ ಸಮಸ್ತ ಪಡ್ತಿ ಸಮಾಜ ಗೆದ್ದಿದೆ. ಇದಕ್ಕಾಗಿ ಪಡ್ತಿ ಸಮಾಜ ಹೆಮ್ಮೆ ಪಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.ತಾಲೂಕಿನ ಬಾಡದಲ್ಲಿ ಏರ್ಪಡಿಸಿದ್ದ ಪಡ್ತಿ ಸಮಾಜದ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-2 ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ, ಸಮಾರೋಪ ಸಮಾರಂಭದಲ್ಲೂ ಪಾಲ್ಗೊಂಡು ಅವರು ಮಾತನಾಡಿದರು.

ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರನಿಗೂ ಸೋಲು- ಗೆಲುವು ಮುಖ್ಯವಲ್ಲ. ಇಡೀ ಪಡ್ತಿ ಸಮಾಜ ಗೆದ್ದಿದೆ ಎಂದು ಹೆಮ್ಮೆ ಪಡಬೇಕು. ಸಮಾಜದವರ ಒಗ್ಗಟ್ಟಿಗಾಗಿ ಆಯೋಜಿಸಿದ ಈ ಕ್ರಿಕೆಟ್‌ ಟೂರ್ನ್‌ಮೆಂಟ್‌ನ ವೈಭವ ವರ್ಷದಿಂದ ವರ್ಷಕ್ಕೆ ಹೆಚ್ಚಾಗಲಿ ಎಂದರು.

2ನೇ ಸೀಸನ್‌ ನ್ನು ಕೂಡ ಅಚ್ಚುಕಟ್ಟಾಗಿ ಆಯೋಜಿಸಿದ ಪಡ್ತಿ ಸಮಾಜದ ಪಂದ್ಯಾವಳಿ ಆಯೋಜಕರಿಗೆ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತಂಡಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪಡ್ತಿ ಸಮಾಜದ ಪ್ರಮುಖರಾದ ಗಿರೀಶ್‌ ಕೊಠಾರಕರ, ಕಾರವಾರ ನಗರಸಭೆ ಸದಸ್ಯ ಸಂದೀಪ್‌ ತಳೇಕರ, ಮೋಹನ ಕೊಚ್ರೇಕರ, ಪ್ರಶಾಂತ ತಳೇಕರ, ಚಂದ್ರಹಾಸ ಕೊಠಾರಕರ, ಸಂತೋಷ ಟಾಕರಕರ, ನರೇಂದ್ರ ತಳೇಕರ ಹಾಗೂ ಪಡ್ತಿ ಸಮಾಜದ ಯುವಕರು, ಹಿರಿಯರು, ಆಟಗಾರರು ಮತ್ತು ಕ್ರೀಡಾಪ್ರೇಮಿಗಳು ಉಪಸ್ಥಿತರಿದ್ದರು.

ಈ ಪಂದ್ಯಾವಳಿಯಲ್ಲಿ ಆಮಚೆ ಸೂಪರ್ ಕಿಂಗ್ಸ್ ಅಮದಳ್ಳಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ (₹2 ಲಕ್ಷ), ಓಂ ಸಾಯಿ ಹಳಗೇಜೂಗ ತಂಡ ರನ್ನರ್‌ಅಪ್‌ (₹1 ಲಕ್ಷ), ತೃತೀಯ ಸ್ಥಾನವನ್ನು ರಾಮ ಬೇತಾಳ ಮಾಜಾಳಿ (₹50 ಸಾವಿರ) ಪಡೆಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!