ಸಿದ್ದಾಂತ ಶಿಖಾಮಣಿ ಸಾರವನ್ನು ಜನಸಾಮಾನ್ಯರಿಗೆ ತಿಳಿಸಬೇಕಿದೆ

KannadaprabhaNewsNetwork |  
Published : Mar 13, 2025, 12:53 AM IST
ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು | Kannada Prabha

ಸಾರಾಂಶ

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಅಡಳಿತ ಹಾಗೂ ಕೊರಟಗೆರೆ ತಾಲೂಕಿನ ವೀರಶೈವ ಸಮುದಾಯದ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಅಡಳಿತ ಹಾಗೂ ಕೊರಟಗೆರೆ ತಾಲೂಕಿನ ವೀರಶೈವ ಸಮುದಾಯದ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಕಾರ್ಯಕ್ರಮ ನೆರವೇರಿತು.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಗುರುಗಳಲ್ಲಿ ಒಬ್ಬರು. ಇವರ ತತ್ವ, ಬದುಕಿನ ಚರಿತ್ರೆ, ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಕನ್ನಡ ಭಾಷೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣಗಳು ಮತ್ತು ಗ್ರಂಥಗಳಿವೆ.

ಶ್ರಿ ರೇಣುಕಾಚಾರ್ಯ ಜಗದ್ಗುರುಗಳು ಆಂಧ್ರ ಪ್ರದೇಶದ ಕೊಲನಪಾಕಿಯ ಲಿಂಗದಿಂದ ಅವಿರ್ಭವಿಸಿದರೆಂದು ನಂಬಲಾಗಿದೆ. ಕೆಲವೊಂದು ಕಾದಂಬರಿಗಳು ಇವರನ್ನು ಪರಮಶಿವನ ಅವತಾರ ಎಂದು ಗುರುತಿಸುತ್ತವೆ. ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪಾರಿಪೂರ್ಣರಾಗಿದ್ದರು. ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದರು. ವೀರಶೈವ ಧರ್ಮದ ಮೂಲ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು ಎಂದು ತಿಳಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕೊರಟಗೆರೆ ತಾಲೂಕು ಘಟಕದ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ ರೇಣುಕಾಚಾರ್ಯರು ರಚಿಸಿದ ಸಿದ್ದಾಂತ ಶಿಖಾಮಣಿಯು ಸಂಸ್ಕೃತ ಭಾಷೆಯ ವೀರಶೈವ ಧರ್ಮದ ಮಹಾನ್ ಗ್ರಂಥವಾಗಿದೆ. ಪಂಚಾಚಾರ್ಯರ ಪ್ರಕಾರ ಇದು ವೀರಶೈವರ ಮತ ಗ್ರಂಥವಾಗಿದೆ. ಈ ಕೃತಿಯು ಜಗದ್ಗುರು ರೇಣುಕ ಮತ್ತು ಅಗಸ್ತ್ಯ ಮಹರ್ಷಿಗಳ ಸಂವಾದದ ರೂಪದಲ್ಲಿದೆ. ಸಿದ್ಧಾಂತ ಶಿಖಾಮಣಿಯ ಸಾರವನ್ನು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸುವ ಅಗತ್ಯವಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯೆ ದ್ರಾಕ್ಷಾಯಿಣಿ ರಾಜಣ್ಣ ಮಾತನಾಡಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಆಚರಿಸುತ್ತಿರುವದು ವೀರಶೈವ ಸಮುದಾಯಕ್ಕೆ ಅತ್ಯಂತ ಸಂತಸ ತಂದಿದೆ. ರೇಣುಕಾಚಾರ್ಯರವರ ಕೀರ್ತನೆಗಳು ಮತ್ತು ಅವರ ಅವರ ಗ್ರಂಥದ ಕರ್ತೃಗಳು ಸಮಾಜಕ್ಕೆ ಶಾಂತಿಯನ್ನು ಕಾಪಾಡುವುದು ಮೂಲ ಉದ್ದೇಶವಾಗಿದೆ. ಎಂದು ಸಭೆಗೆ ತಿಳಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಸುರೇಶ್, ಸಿದ್ದಮಲ್ಲಯ್ಯ, ವೀರಭದ್ರಯ್ಯ, ಚನ್ನಬಸವರಾಧ್ಯ, ಶಿವಾನಂದ್, ಪವನ್ ಕುಮಾರ್, ಉಮಾಶಂಖರ್, ಪುಟ್ಟರಾಜು, ಚಿದಾನಂದ್, ಮಧುಸೂದನ್, ಈಶಪ್ರಸಾದ್, ಕಿರಣ್, ರೂಪಶ್ರೀ, ಶಾಂಭವಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಮತಾದಿವಾಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...