ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ 19ನೇ ವಾರ್ಡಿನ ಬುಧವಾರ ಲಿಟ್ಲ್ ಏಂಜಲ್ ನರ್ಸರಿ ಸ್ಕೂಲ್ ಮತ್ತು ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೇತ್ರದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಿದ್ದು, ಕ್ಷೇತ್ರದ ಮತದಾರರು ಕಣ್ಣಿನ ಸಮಸ್ಯೆಯಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ನಿರಂತರವಾಗಿ ಕಣ್ಣಿನ ಸಮಸ್ಯೆ ಇರುವಂತವರಿಗೆ ಉಚಿತವಾಗಿ ಸೇವೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಈಗಾಗಲೇ ಕ್ಷೇತ್ರದ ಬಹುತೇಕ ಕಳ್ಳಿಗಳಲ್ಲಿ ಶಿಬಿರವನ್ನು ನಡೆಸಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ, ಏಳು ಸಾವಿರ ಜನರಿಗೆ ಕಣ್ಣಿನ ಕನ್ನಡಕವನ್ನು ವಿತರಿಸಲಾಗಿದೆ, ಯಾವುದೇ ಜನರಿಂದಲೂ ಸಹ ಹಣವನ್ನು ತೆಗೆದುಕೊಳ್ಳದೆ ಉಚಿತವಾಗಿ ಕೆಲಸವನ್ನು ನಮ್ಮ ಮಾವನವರಾದ ದೊಡ್ಡಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಆರ್.ಕೆ ಸರ್ದಾರ್ , ವಾಸಿಮ್, ರೆಹಮಾನ್ ಜಲೀಲ್ ಹಾಗೂ ಇತರರು ಇದ್ದರು.