ಸಿಎಂಗೆ ಬೆಂಬಲ ನೀಡುವವರಿಂದಲೇ ಖುರ್ಚಿ ಮೇಲೆ ಕಣ್ಣು

KannadaprabhaNewsNetwork |  
Published : Sep 09, 2024, 01:31 AM IST
(ಪೊಟೋ 8ಬಿಕೆಟಿ5, ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ  ಅವರು, ಬಾಗಲಕೋಟೆಯಲ್ಲಿ  ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು) | Kannada Prabha

ಸಾರಾಂಶ

ಸಿಎಂ ಖುರ್ಚಿ ಮೇಲೆ ಬಹಷ್ಟು ಕಾಂಗ್ರೆಸ್ ನಾಯಕರ ಕಣ್ಣು ಹಾಕಿದ್ದಾರೆ. ಸಿಎಂ ಖುರ್ಚಿ ಮೇಲೆ ಸಿಎಂಗೆ ಬೆಂಬಲ ನೀಡುವವರದ್ದೇ ಹಂಬಲವಿದೆ. ಆ ಹಂಬಲದಿಂದಲೇ ರಾಜಕಾರಣ ನಡಿತಾ ಇದೆ. ಈಗ ಏನು ತೀರ್ಪು ಬರುತ್ತದೆ ಅಂತಾ ಎಲ್ಲರೂ ಕಾಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಖುರ್ಚಿ ಮೇಲೆ ಬಹಷ್ಟು ಕಾಂಗ್ರೆಸ್‌ ನಾಯಕರ ಕಣ್ಣು ಹಾಕಿದ್ದಾರೆ. ಸಿಎಂ ಖುರ್ಚಿ ಮೇಲೆ ಸಿಎಂಗೆ ಬೆಂಬಲ ನೀಡುವವರದ್ದೇ ಹಂಬಲವಿದೆ. ಆ ಹಂಬಲದಿಂದಲೇ ರಾಜಕಾರಣ ನಡಿತಾ ಇದೆ. ಈಗ ಏನು ತೀರ್ಪು ಬರುತ್ತದೆ ಅಂತಾ ಎಲ್ಲರೂ ಕಾಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಾಗಲಕೋಟೆಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ತೀರ್ಪುನಲ್ಲಿ ಸಿಎಂ ಅವರದ್ದೇ ತಪ್ಪಿದೆ ಎಂದು ತೀರ್ಪು ಬಂದ್ರೆ, ಎಫ್‌ಐಆರ್ ಬಿದ್ರೆ, ಸಿಎಂ ರಾಜೀನಾಮೆ ಕೊಡಬಹುದು. ಕೊಡಬೇಕಾಗಬಹುದು. ಆ ಸಮಯದಲ್ಲಿ ಸಿಎಂ ಸಿದ್ದು ಅಪೇಕ್ಷೆ ಪಡೋ ವ್ಯಕ್ತಿ ಸಿಎಂ ಆಗ್ತಾರಾ? ಅಥವಾ ಸಿಎಂ ಬೆಂಬಲಿಗರು ಸಿಎಂ ಆಗಲಿಕ್ಕೆ ಡಿಕೆಶಿ, ಎಂಬಿಪಿ ಅವಕಾಶ ಕೊಡಲಿಲ್ಲ ಅಂದ್ರೆ, ಸರ್ಕಾರ ಎಷ್ಟರಮಟ್ಟಿಗೆ ಇರುತ್ತದೆ ಇರೊಲ್ವೊ ಎನ್ನುವುದು ತೀರ್ಪಿನ ಮೇಲೆ ತೀರ್ಮಾಣ ಆಗುತ್ತದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಲಿಕ್ಕಿಲ್ಲ ಅಂತಾ ಕಾಂಗ್ರೆಸ್‌ನ ನಾಯಕರು ಅಂದುಕೊಂಡಿದ್ದಾರೆ ಎಂದರು.

ವೈಯಕ್ತಿಕ ಟೀಕೆಗಳಿಂದ ಟಿವಿ ನೋಡುವುದಕ್ಕೆ ಬೇಸರ:

ರಾಜ್ಯ ರಾಜಕೀಯದಲ್ಲಿ ಹಗರಣಗಳ ಆರೋಪ-ಪ್ರತ್ಯಾರೋಪದ ಕುರಿತು ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷದ ಭ್ರಷ್ಟಾಚಾರ ಬಗ್ಗೆ, ವಿರೋಧ ಪಕ್ಷ ಆರೋಪ ಮಾಡೋದು ತಪ್ಪಲ್ಲ, ಆದರೆ, ವಿರೋಧ ಪಕ್ಷದ ಆರೋಪವನ್ನು ಆಡಳಿತ ಪಕ್ಷದವ್ರು ತನಿಖೆ ಮಾಡಿಸುವ ಪದ್ಧತಿ ಇದೆ. ತಪ್ಪಿತಸ್ಥರಾಗಿದ್ರೆ ಶಿಕ್ಷೆ ಆಗಬೇಕೋ ಆಗುತ್ತೆ, ಆದ್ರೆ ಈಗ ಆಡಳಿತ ಪಕ್ಷ ಬಂದು ಒಂದೂವರೆ ವರ್ಷ ಆದ ಮೇಲೆ, ವಿರೋಧ ಪಕ್ಷಗಳು ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು, ಸಿದ್ದರಾಮಯ್ಯ ಬಗ್ಗೆ ಆಪಾದನೆ ಮಾಡುತ್ತಿದಾರೆ. ಈ ವೇಳೆ ಪಾದಯಾತ್ರೆ, ಧರಣಿಯಂತಹ ಹೋರಾಟಗಳು ನಡೆಯುತ್ತವೆ. ತನಿಖೆ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಅಂದ್ರೆ, ಟಿವಿಗಳನ್ನು ನೋಡುವುದೇ ಬೇಸರ ಆಗ್ತಿದೆ. ರಾಜಕೀಯಕ್ಕೆ ಬರುವ ಯುವ ರಾಜಕಾರಣಿಗಳಲ್ಲಿ ರಾಜಕೀಯಕ್ಕೆ ಬರಬಾರದು ಎಂಬ ಮನಸ್ಥಿತಿ ನಿರ್ಮಾಣ ಆಗಿದೆ. ಕೀಳುಮಟ್ಟ ವೈಯಕ್ತಿಕ ಟೀಕೆಗಳನ್ನು ಎಂದೂ ನಾವು ಕಂಡಿರಲಿಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಇದನ್ನು ಕಂಡಿರಲಿಲ್ಲ, ವೈಯುಕ್ತಿಕ ಟೀಕೆ ಬಿಟ್ಟು, ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಈಶ್ವರಪ್ಪ ತಿಳಿಸಿದರು.

ಮಸೀದಿ, ಚರ್ಚ ಆಹಾರ ಪರೀಕ್ಷೆ ಮಾಡಿದ್ದೀರಾ?:

ಚೌತಿ ಗಣಪತಿಯ ಪ್ರಸಾದವನ್ನು ಪರೀಕ್ಷೆ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಕೆಎಸ್ ಈಶ್ವರಪ್ಪ ಗರಂ ಆಗಿ ಪ್ರತಿಕ್ರಿಯೆ ನೀಡಿದರು.

ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲ ಗಣಪತಿ ಕೂಡ್ರಿಸಲಾಗುತ್ತದೆ. ಗಣಪತಿ ಪ್ರಸಾದ ಕೊಡಬೇಕಾದರೆ ಆಹಾರ ಇಲಾಖೆ ಪರೀಕ್ಷೆ ಮಾಡಬೇಕಂತೆ, ಸಿದ್ದರಾಮಯ್ಯ ಹುಟ್ಟೋ ಮೊದಲಿನಿಂದಲೂ ದೇಶದಲ್ಲಿ ಗಣಪತಿ ಕೂಡ್ರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಹುಟ್ಟೊಕ್ಕಿಂತ ಮುಂಚೆ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೂತಿದೆ. ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದ್ರೆ, ಹಿಂದೂ ಧರ್ಮದ ಬಗ್ಗೆ ಇಷ್ಟು ಕೀಳುಮಟ್ಟದ ರಾಜಕಾರಣ ಕಾಂಗ್ರೆಸ್‌ನವರು ಯಾಕೆ ಮಾಡುತ್ತಿದ್ದಾರೆ. ನೀವು ಮಸೀದಿ, ಚರ್ಚು ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ? ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಟ ಭಾವನೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ, ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

----

ಬಾಕ್ಸ್

ಬಿಜೆಪಿ ಯಾವುದೇ ಪಕ್ಷದೊಂದಿಗೆ ಮರ್ಜ ಆಗೋಲ್ಲ: ಈಶ್ವರಪ್ಪ

ಕೇಂದ್ರದಲ್ಲಿ ಹೆಎಚ್‌ಡಿಕೆ ಅವರ ಪ್ರಾಬಲ್ಯ ಹೆಚ್ಚುತ್ತಿದೆ. ಬಿಜೆಪಿ ಜೆಡಿಎಸ್‌ನಲ್ಲಿ ಸೇರುತ್ತದೇತಾ? ಎಂಬ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಯಾವುದೇ ಪಕ್ಷದ ಜೊತೆ ಮರ್ಜ ಆಗಲ್ಲ. ಹಿಂದೂ ಸಂಸ್ಕ್ರತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ. ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ ಮಾಡೋಕೆ ಸಾಧ್ಯ ಇಲ್ಲ. ದೇಶದ ಪ್ರಧಾನಿ, ಅನೇಕ ರಾಜ್ಯಗಳಲ್ಲಿ ಸಿಎಂಗಳು, ಶಾಸಕರು, ಅನೇಕ ಬಿಜೆಪಿ ಸಂಸದರು ಇರಲು ಕಾರಣ. ಇವತ್ತು, ನಿನ್ನೆ ಯಾರೋ ಮಾಡ್ತಿರೋ ಪ್ರಯತ್ನದಿಂದ ಅಧಿಕಾರಕ್ಕೆ ಬಂದಿಲ್ಲ. ಅನೇಕ ವರ್ಷಗಳಿಂದ ರಕ್ತ ಬೇವರು ರೂಪದಲ್ಲಿ ಸುರಿಸಿದ ರಾಷ್ಟ್ರ ಭಕ್ತರು ಈ ಪಕ್ಷ ಕಟ್ಟಿರೋದು. ಧರ್ಮ ನಿಷ್ಠರು ಈ ಪಕ್ಷ ಕಟ್ಟಿರೋದು. ಹಾಗಾಗಿ ಈ ಪಕ್ಷ ತಾತ್ಕಾಲಿಕವಾಗಿ ಕೆಲವರ ಕುಟುಂಬದ ಕೈಗೆ ಸಿಕ್ಕಿದೆ. ಇದನ್ನು ಸರಿ ಮಾಡೋದಕ್ಕೆ ಖಂಡಿತಾ ಆಗುತ್ತದೆ. ಸರಿ ಆಗೇ ಆಗುತ್ತದೆ. ಅನುಮಾನವಿಲ್ಲ, ಈ ದೇಶಕ್ಕೆ ಒಂದೇ ಆಶಾ ಕಿರಣ ಬಿಜೆಪಿ, ಯಾವುದೇ ಪಕ್ಷದ ಜೊತೆ ಮರ್ಜ ಆಗಲ್ಲ ಎಂದು ಈಶ್ವರಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!