ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕಬ್ಬು ಬೆಳೆಯಿಂದ ಕಾರ್ಖಾನೆಗಳು ಸಹ ಉತ್ಪನ್ನಗಳಲ್ಲಿ ಅನೇಕ ಲಾಭ ಗಳಿಸುತ್ತಿದ್ದರು. ರೈತರಿಗೆ ನ್ಯಾಯಯುತ ಬೆಲೆ ₹3500 ನೀಡದೇ ರೈತರನ್ನು ಪೀಡಿಸುತ್ತಿರುವ ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಕಿ.ರಾ.ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಆಶ್ರಯದಲ್ಲಿ 3ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬು ಬೆಳೆಯಿಂದ ಹತ್ತಾರು ಸಾವಿರ ರೂಪಾಯಿ ಲಾಭಗಳಿಸುವ ಕಾರ್ಖಾನೆ ಮಾಲಿಕರು ತಮ್ಮ ಸ್ವಾರ್ಥ ಸಾಧನೆಗಾಗಿ ರೈತರ ರಕ್ತ ಹಿಂಡುತಿದ್ದಾರೆ. ರೈತರು ತಿರುಗಿ ಬಿಳುವ ಮುನ್ನ ಎಚ್ಷೆತ್ತುಕೊಂಡು ರೈತರಿಗೆ ನ್ಯಾಯಯುತ ಬೆಲೆ ಕೊಡಬೇಕು ಎಂದು ಆಗ್ರಹಿಸಿದರು.ಎಂ.ಕೆ.ಹುಬ್ಬಳ್ಳಿಯ ಗದ್ದಿಕೇರಿ ಮಠದ ಸಚ್ಚಿದಾನಂದ ಅವಧೂತ ಸ್ವಾಮೀಜಿ ಮಾತನಾಡಿ, ದೇಶ ಕಾಯುವ ಯೋಧರು, ನಾಡಿಗೆ ಅನ್ನ ನೀಡುವ ರೈತರಿಗೆ ಪ್ರತಿ ಕ್ಷಣವು ಗೌರ ನೀಡಬೇಕು. ಈ ನಿಟ್ಟಿನಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಬೇಕೆಂದು ಒತ್ತಾಸಿ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾ ಅಕ್ಕನವರು ಮಾತನಾಡಿ, ಜಗತ್ತು ಮುನ್ನೆಡೆಯಬೇಕಾದರೆ ರೈತನ ಪಾತ್ರ ಸಮಾಜದಲ್ಲಿ ಅತೀ ಅವಶ್ಯವಾಗಿದ್ದು ಈಗಾಗಿ ಆತನು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕಾಗಿದ್ದು ಸರ್ಕಾರ ಪ್ರಯತ್ನಿಸಲಿ ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳಣ್ಣವರ, ರಾಜ್ಯ ಕಬ್ಬು ಬೆಳೆಗಾರರ ಧಾರವಾಡ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಶಂಕರ ಮಾಡಲಗಿ, ಬೀರಪ್ಪ ದೇಶನೂರ, ಮಲ್ಲಿಕಾರ್ಜುನ ಹುಂಬಿ, ಬಸನಗೌಡ ಪಾಟೀಲ, ಸುರೇಶ ವಾಲಿ, ಮಹಾಂತೇಶ ಕಮತ, ಸೋಮಪ್ಪ ಚಳಕೊಪ್ಪ, ದಾನಪ್ಪಗೌಡ ಕುಸಲಾಪೂರ, ಪ್ರಕಾಶಗೌಡ ಕೆಂಚನಗೌಡ್ರ, ಶಂಕರೆಪ್ಪ ಕುದರಿ, ಭಾಗ್ಯಶ್ರೀ ಹಣಬರ, ಹೇಮಾ ಕಾಜಗಾರ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ತಿಗಡಿ, ಆನಂದಗೌಡ ಪಾಟೀಲ, ಬೀರಪ್ಪ ದೇಶನೂರ, ವೀರೇಶ ಹಲಕಿ, ಮಡಿವಾಳಪ್ಪ ಮರಿತಮ್ಮನವರ, ವೀರಪ್ಪ ಬಡಿಗೇರ, ಮಲ್ಲಪ್ಪ ಬಂಗಿ, ಶಿವಾನಂದ ಪಡಸಲಗಿ, ಉಳವಪ್ಪ ಬಳಿಗೇರ, ಮುದಕಪ್ಪ ತೋಟಗಿ ಸೇರಿದಂತೆ ನೂರಾರು ರೈತರು, ವಿದ್ಯಾರ್ಥಿಗಳು ಇದ್ದರು. ವಿಎಚ್‌ಪಿ ಬೆಂಬಲ:
ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ಕಳೆದ 4 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅವರಿಗೆ ಸ್ಪಂದಿಸದೇ ಅವರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಸರಿಯಾದ ನಡೆಯಲ್ಲ. ಈ ನಿಟ್ಟಿನಲ್ಲಿ ಇಚ್ಚಾಶಕ್ತಿ ತೋರಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.ರಾಜು ಬಡಿಗೇರ, ಗಿರೀಶ ಹರಕುಣಿ, ನಾರಾಯಣ ನಲವಡೆ, ಆಶೋಕ ಸವದತ್ತಿ ಹಾಗೂ ಕಿತ್ತೂರು ಕರ್ನಾಟಕ ಸೇನೆಯ ಮುಖಂಡರು ಹೋರಾಟ ಸ್ಥಳಕ್ಕೆ ಬೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿ ಬಂದ:ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹಾರುಗೊಪ್ಪ-ಚಚಡಿ ರೈತರು ಬೆಳಗಾವಿ-ಬಾಗಲಕೋಟೆ ರಸ್ತೆಯ ಚಚಡಿ ಕ್ರಾಸ್ ಬಳಿ ಬೆಳಗ್ಗೆಯಿಂದ ನೂರಾರು ರೈತರು ರಸ್ತೆ ತಡೆ ನಡೆಸಿ ಉಗ್ರವಾಗಿ ಪ್ರತಿಭಟಿಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ ಕಾಲಕ್ಕೆ ಸುಮಾರು ಕಿಮೀ ಟ್ರಾಫಿಕ್ ಸಮಸ್ಯೆಯುಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಟೋಲ್ ನಾಕಾ ಬಂದ:ಪ್ರತಿ ಟನ್‌ಗೆ ,3500 ನೀಡುವಂತೆ ಒತ್ತಾಯಿಸಿ ನ.7 ರಂದು ಹಿರೇಬಾಗೇವಾಡಿ ಟೊಲ್‌ನಾಕಾ ಬಂದ ಮಾಡಿ ಉಗ್ರವಾಗಿ ಪ್ರತಿಭಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.