ಕಾಯಿ ಕಟ್ಟಿ ಜಾತ್ರೆಗೆ ಚಾಲನೆ

KannadaprabhaNewsNetwork |  
Published : Mar 22, 2026, 03:00 AM IST
ಫೋಟೋ ಶೀರ್ಷಿಕೆ: ೨೦ಎಸ್‌ಡಿಟಿ೧ಸವದತ್ತಿಯ ಗ್ರಾಮದೇವಿಯ ದೇವಸ್ಥಾನದಲ್ಲಿ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ ಹಾಗೂ ಶಾಸಕ ವಿಶ್ವಾಸ ವೈದ್ಯ ಕಾಯಿ ಕಟ್ಟುವ ಮೂಲಕ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಪಟ್ಟಣದಲ್ಲಿ 44 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಗೆ ಶುಕ್ರವಾರ ಕಾಯಿ ಕಟ್ಟುವ ಮೂಲಕ ಚಾಲನೆ ನೀಡಲಾಯಿತು. ಕಟ್ಟಿ ಓಣಿಯ ಗ್ರಾಮದೇವಿಯ ದೇವಸ್ಥಾನದಲ್ಲಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಮಾಮನಿ ಹಾಗೂ ಸಮಿತಿ ಗೌರವಾಧ್ಯಕ್ಷರು, ಶಾಸಕ ವಿಶ್ವಾಸ ವೈದ್ಯ ಅವರು ಜಾತ್ರಾ ಉತ್ಸವ ಪ್ರಾರಂಭಕ್ಕೆ ಕಾಯಿ ಕಟ್ಟುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದಲ್ಲಿ 44 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿಯ ಜಾತ್ರೆಗೆ ಶುಕ್ರವಾರ ಕಾಯಿ ಕಟ್ಟುವ ಮೂಲಕ ಚಾಲನೆ ನೀಡಲಾಯಿತು.

ಕಟ್ಟಿ ಓಣಿಯ ಗ್ರಾಮದೇವಿಯ ದೇವಸ್ಥಾನದಲ್ಲಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಮಾಮನಿ ಹಾಗೂ ಸಮಿತಿ ಗೌರವಾಧ್ಯಕ್ಷರು, ಶಾಸಕ ವಿಶ್ವಾಸ ವೈದ್ಯ ಅವರು ಜಾತ್ರಾ ಉತ್ಸವ ಪ್ರಾರಂಭಕ್ಕೆ ಕಾಯಿ ಕಟ್ಟುವ ಮೂಲಕ ಚಾಲನೆ ನೀಡಿದರು.

ಮೇ 4ರಿಂದ ಮೇ 12ರವರೆಗೆ 9 ದಿನಗಳ ಕಾಲ ಪಟ್ಟಣದಲ್ಲಿ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು, ಅದರ ಅಂಗವಾಗಿ ಶ್ರೀ ದ್ಯಾಮವ್ವನಗುಡಿ, ಸುಂಕದ ಕಟ್ಟಿ ಬಸವೇಶ್ವರ ದೇವಸ್ಥಾನ, ದೇಸಾಯಿ ಕೋಟೆಯ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನ, ಆನಿ ಅಗಸಿಯ ಶ್ರೀ ಕಾಳಮ್ಮ ದೇವಸ್ಥಾನ ಹಾಗೂ ಶ್ರೀ ಜೋಗುಲಭಾವಿ ಸತ್ತೆಮ್ಮಾ ದೇವಸ್ಥಾನಗಳಲ್ಲಿ ರೈತರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ಕಾಯಿ ಕಟ್ಟಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಜೋಗುಲಭಾವಿ ಸತ್ಯೆಮ್ಮಾ ದೇವಸ್ಥಾನ ಸೇರಿದಂತೆ ಐದು ದೇವಸ್ಥಾನಗಳಲ್ಲಿ ಕಾಯಿ ಕಟ್ಟಿದ ನಂತರ ಮಾತನಾಡಿದ ವಿರುಪಾಕ್ಷ ಮಾಮನಿ, ರೈತರೆಲ್ಲರೂ ಸೇರಿಕೊಂಡು ಕಾಯಿ ಕಟ್ಟಲಾಗಿದ್ದು, ಇನ್ನು ಮುಂದೆ ಪಟ್ಟಣದ ಎಲ್ಲ ಹಿರಿಯರು ಹಾಗೂ ಯುವಕರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.

ಅಶ್ವಥ ವೈದ್ಯ ಮಾತನಾಡಿ, ಪಟ್ಟಣದ ಪ್ರತಿಯೊಂದು ಸಮಾಜದ ಬಾಂಧವರೆಲ್ಲಾ ಸೇರಿಕೊಂಡು ಮಾಡುವ ಈ ಗ್ರಾಮದೇವಿಯ ಜಾತ್ರೆಯು ನಾಲ್ಕು ದಶಕಗಳ ನಂತರ ನಡೆಯುತ್ತಿದೆ. ಇದರಿಂದ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ಅತ್ಯವಶ್ಯ ಎಂದರು.

ಅಡಿವೆಪ್ಪಾ ಬೀಳಗಿ ಮಾತನಾಡಿದರು. ಈ ವೇಳೆ ಶ್ರೀಶೈಲ ಮುತಗೊಂಡ, ಸದಾಶಿವ ಕೌಜಲಗಿ, ಸುನಿತಾ ಶಂಕರಗೌಡ ಪಾಟೀಲ, ಶಿವರಾಜ ಚೌಗಲಾ, ಶಿವಾನಂದ ಹೂಗಾರ, ಚಂದ್ರಣ್ಣ ಶಾಮರಾಯನವರ, ಶಿವಾನಂದ ಮೇಟಿ, ಅಲ್ಲಮಪ್ರಭು ಪ್ರಭುನವರ, ಎಲ್.ಆರ್.ಕುಲಕರ್ಣಿ, ಭರಮಪ್ಪ ಅಣ್ಣಿಗೇರಿ, ಬಾಬು ಇನಾಮತಿ, ಸಿದ್ದಯ್ಯ ವಡಿಯರ, ಸೋಮು ಹದ್ಲಿ, ಈರಪ್ಪ ಬಟಕುರ್ಕಿ, ದೊಡಗೌಡ ಪಾಟೀಲ, ವಿರುಪಾಕ್ಷಿ ಹೆರಕಲ್, ಪುಂಡಲೀಕ ಭೀ. ಬಾಳೋಜಿ, ಬಸವರಾಜ ಹಂಪಣ್ಣವರ, ಗಿರೀಶ ಬೀಳಗಿ, ರಾಮತೀರ್ಥ ಜೋಶಿ, ಮಲ್ಲಿಕಾರ್ಜುನ ಬೀಳಗಿ, ಯಲ್ಲಪ್ಪ ಭಜೇರಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಸ್ಲಾಂ ಅಥ೯ ಮಾಡಿಕೊಂಡರೆ ಶ್ರೇಷ್ಠ ಮಾನವ
ಗಮನ ಸೆಳೆದ ಜಾನುವಾರುಗಳ ಜಾತ್ರೆ