ನಾಗಠಾಣದಲ್ಲಿ ಗ್ರಾಮದೇವಿಯರ ಜಾತ್ರೆ ಸಂಭ್ರಮ

KannadaprabhaNewsNetwork |  
Published : Oct 04, 2024, 01:22 AM IST
ನಾಗಠಾಣದಲ್ಲಿ ದೇವಿಯರ ಜಾತ್ರಾ ಮಹೋತ್ಸವ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಇತಿಹಾಸ ಪ್ರಸಿದ್ಧ ಗ್ರಾಮದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು. ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಕಲಬುರಗಿಯ ಪೋತರಾಜನ ಕುಣಿತ ಸೇರಿದಂತೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದ ಮಧ್ಯೆ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಇತಿಹಾಸ ಪ್ರಸಿದ್ಧ ಗ್ರಾಮದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು. ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಕಲಬುರಗಿಯ ಪೋತರಾಜನ ಕುಣಿತ ಸೇರಿದಂತೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದ ಮಧ್ಯೆ ನಡೆಯಿತು. ಮೆರವಣಿಗೆಯುದ್ದಕ್ಕೂ ಹೆಣ್ಣು ಮಕ್ಕಳು ದೇವಿಯರಿಗೆ ಉಡಿ ತುಂಬಿ, ಹಣ್ಣು-ಕಾಯಿ ನೈವೇದ್ಯ ಮಾಡುವ ಮೂಲಕ, ವಿವಿಧ ಸೇವೆ ಹರಕೆ ಸಲ್ಲಿಸಿದರು.

500ಕ್ಕೂ ಅಧಿಕ ಮಹಿಳೆಯರಿಂದ ಕುಂಭಮೇಳ ಜರುಗಿದ್ದು, ಜಾತ್ರೆಯ ವಿಶೇಷ. ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅವರು ಬೆಳಿಗ್ಗೆ 9.30ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಚಂದ್ರಶೇಖರ ಅರಕೇರಿ, ಪ್ರಕಾಶ ಲೋಣಿ, ಜಾತ್ರಾ ಕಮಿಟಿಯ ಅಧ್ಯಕ್ಷ ಕಲ್ಯಾಣಿ ಪತ್ತಾರ, ಉಪಾಧ್ಯಕ್ಷ ಸಿದ್ದಪ್ಪ ಶಿರಕನಹಳ್ಳಿ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ಬಾಬು ಕತ್ನಳ್ಳಿ, ಬಸವರಾಜ ಹಳ್ಳಿ, ಪ್ರಭು ಹಂಡಿ, ಶ್ರೀಧರ ಬಡಿಗೇರ, ಸಿದ್ದು ಬಡಿಗೇರ, ಸುಭಾಷ ಪತ್ತಾರ, ಮೋನಪ್ಪ ಬಡಿಗೇರ, ಮಲಕಣ್ಣ ಹುಣಶ್ಯಾಳ, ಬಸವರಾಜ ಬಂಡೆ, ಪ್ರಕಾಶ ಹಡಪದ, ಕಾಶೀನಾಥ ಬಡಿಗೇರ, ಶರಣು ಬಗಲಿ, ಸಿದ್ಧಗೊಂಡ ರೊಳ್ಳಿ, ರೇವಣಸಿದ್ದ ಸಾರವಾಡ, ಸುರೇಶ ಹೊರ್ತಿ, ಭಗವಂತ ಬಡಿಗೇರ, ರೇವಪ್ಪ ಹಚಡದ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?