ಸಂಭ್ರಮದ ಸಿಂಗಟಾಲೂರು ವೀರಭದ್ರೇಶ್ವರ ರಥೋತ್ಸವ

KannadaprabhaNewsNetwork |  
Published : Mar 24, 2026, 01:45 AM IST
ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗಿತು. | Kannada Prabha

ಸಾರಾಂಶ

ರಥೋತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಿ ಜಯಘೋಷ ಕೂಗಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಮುಂಡರಗಿ: ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಸಾವಿರಾರು ಭಕ್ತರ ಜಯಘೋಷದೊಂದಿಗೆ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ರಥೋತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಿ ಜಯಘೋಷ ಕೂಗಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಭಕ್ತರು ಆಗಮಿಸಿ‌ ಜಾತ್ರಾ ಮಹೋತ್ಸವದಲ್ಲಿ‌ ವೀರಭದ್ರೇಶ್ವರ ದೇವರ ದರ್ಶನಾಶೀರ್ವಾದ ಪಡೆದು ಪುನೀತರಾದರು.

ವೀರಭದ್ರೇಶ್ವರ ಮಹಾರಥೋತ್ಸವದಲ್ಲಿ ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಸೋಗಿ ಪುರವರ್ಗದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಕಲಕೇರಿ- ವಿರುಪಾಪುರದ ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಉಪಾಧ್ಯಕ್ಷ ಶೇಖರಪ್ಪ ಬಾಲೇಹೊಸೂರ, ಸದಸ್ಯರಾದ ಕೊಟ್ರೇಶ ಬಳ್ಳೊಳ್ಳಿ, ಸುಭಾಶಪ್ಪ ಬಾಗೇವಾಡಿ, ಕಾಶಯ್ಯ ಬೆಂತೂರಮಠ, ಕರ್ಣಂ ಸಣ್ಣತಮ್ಮಪ್ಪ, ಸಿ.ಕೆ.ಎಂ. ಬಸವಲಿಂಗ ಸ್ವಾಮಿ, ಅಂದಪ್ಪ ಗೋಡಿ, ಬಸವರಾಜಪ್ಪ ಉಮನಾಬಾದಿ, ಮುತ್ತಯ್ಯ ಹಿರೇಮಠ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ದಾಸಿಮಯ್ಯ ಮೊದಲ ವಚನಕಾರ

ನರಗುಂದ: ಜೇಡರ ದಾಸಿಮಯ್ಯ ಅವರು ಕನ್ನಡ ಸಾಹಿತ್ಯದ ಮೊಟ್ಟಮೊದಲ ವಚನಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು 11ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಶರಣರಾಗಿದ್ದರೆಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜೇಡರ ದಾಸಿಮಯ್ಯನವರ ಜಯಂತಿ ಪ್ರಯುಕ್ತ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದಾಸಿಮಯ್ಯನವರು ಬಹಳ ಸ್ವಾತಿಕವಾಗಿ ಜೀವಿಸಿದವರು. ಬಸವಣ್ಣನವರಿಗಿಂತ ಮೊದಲೇ ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಿದವರು ಎಂದು ವಚನಗಳ ಮೂಲಕ ತಿಳಿದು ಬರುತ್ತದೆ ಎಂದರು.ಇವರು ತಮ್ಮ ವಚನಗಳಲ್ಲಿ ರಾಮನಾಥ ಎಂಬ ಅಂಕಿತನಾಮವನ್ನು ಬಳಸಿದ್ದಾರೆ. ಈಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮವು ಇವರ ಜನ್ಮಸ್ಥಳ ಮತ್ತು ಕಾರ್ಯಕ್ಷೇತ್ರವಾಗಿತ್ತು. ವೃತ್ತಿಯಿಂದ ನೇಕಾರರಾಗಿದ್ದರು. ಜೇಡರ ಎಂದರೆ ನೇಕಾರ ಎಂದರ್ಥ. ಇವರ ಪತ್ನಿ ದುಗ್ಗಳೆ, ಇವರೂ ಒಬ್ಬ ಶ್ರೇಷ್ಠ ಶಿವಶರಣೆ ಆಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಕೃಷ್ಣ ಗೊಂಬೆ, ರವಿ ಚಿಂತಾಲ, ಸುಭಾಷಚಂದ್ರ ಹಳಕಟ್ಟಿ, ರಾಚಪ್ಪ ಮುಳ್ಳೂರು, ಶಿವಪ್ಪ ಮುಂಡಾಸದ, ಹನುಮಂತ ಪೂಜಾರ, ಪರಮೇಶ್ವರ ಗೊಂಬೆ, ಗಣೇಶ ಮಲ್ಲಾಪುರ, ಯಲ್ಲಪ್ಪಗೌಡ್ರ, ಈರಪ್ಪ ಮ್ಯಾಗೇರಿ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ಹಾವಳಿ ತಡೆಗೆ ಹೆಚ್ಚುವರಿ ಕಂದಕ ನಿರ್ಮಾಣಕ್ಕೆ ಕ್ರಮ:ಖಂಡ್ರೆ
ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಜಯ: ಯಡಿಯೂರಪ್ಪ