ವಚನಗಳ ಒಂದೊಂದು ಶಬ್ದದ ಮೇಲಿದೆ ಹೋರಾಟ

KannadaprabhaNewsNetwork | Published : Apr 14, 2025 1:19 AM

ಸಾರಾಂಶ

ವಚನಗಳ ಒಂದೊಂದು ಶಬ್ದದ ಮೇಲೆ ಹೋರಾಟವಿದೆ. ಲಿಂಗದ ಮೇಲೆ ಬಸವಧರ್ಮ ಉಳಿದಿದೆ ಎಂದು ಜಗದ್ಗುರು ತೋಂಟದಾರ್ಯ ಮಠ ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣವಚನಗಳ ಒಂದೊಂದು ಶಬ್ದದ ಮೇಲೆ ಹೋರಾಟವಿದೆ. ಲಿಂಗದ ಮೇಲೆ ಬಸವಧರ್ಮ ಉಳಿದಿದೆ ಎಂದು ಜಗದ್ಗುರು ತೋಂಟದಾರ್ಯ ಮಠ ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ ನುಡಿದರು.ಇಲ್ಲಿನ ಅಕ್ಕಮಹಾದೇವಿ ಗವಿಯಲ್ಲಿ ನಡೆದ ಅಕ್ಕನ ಮೂರ್ತಿ ಅನಾವರಣ ಮಾಡಿ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶರಣರನ್ನು ಅನುಭಾವದಿಂದ ತೆಗೆದುಕೊಂಡು ಹೋಗಬೇಕು. ಶರಣರ ಭಾವಚಿತ್ರಗಳು ಲಿಂಗಾಯತರ ಸಂಸ್ಕೃತಿ, ಇತಿಹಾಸ, ಪರಂಪರೆ, ಸಂಸ್ಕೃತಿ ಉಳಿಸುತ್ತವೆ ಎಂದರು.ವೈದಿಕ ಪರಂಪರೆಯನ್ನು ದೂರವಿರಿಸಿ ಅಜ್ಞಾನದಿಂದ ಜ್ಞಾನದೆಡೆಗೆ, ಮೂಢನಂಬಿಕೆಯಿಂದ ವೈಜ್ಞಾನಿಕದೆಡೆಗೆ ಕೊಂಡೊಯ್ದ ಶರಣರ ಮೂರ್ತಿಗಳನ್ನು ಅನಾವರಣ ಮಾಡುವುದರಿಂದ ಮುಂದಿನ ಜನಾಂಗಕ್ಕೆ ತತ್ವಗಳು ದಾರಿಯಾಗುತ್ತವೆ. ಶರಣ ಧರ್ಮ ಕಾಯಕ ಪ್ರಧಾನವಾದ ಧರ್ಮ ಕಾಯಕ ಶರಣರಿಂದ ಕಟ್ಟಲ್ಪಟ್ಟ ಧರ್ಮವಾಗಿದೆ. ಲಿಂಗವಿಡಿದ ಅಕ್ಕನ ಮೂರ್ತಿಯನ್ನು ನೋಡಿದರೆ ಅವರ ವಚನಗಳು ಕಣ್ಣೆದುರಿಗೆ ಬರುತ್ತವೆ ಎಂದು ನುಡಿದರು.ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಅಕ್ಕನ ಮೂರ್ತಿಯ ದರ್ಶನ ಮಾಡುವುದರ ಜೊತೆಗೆ ಅವರ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದರು. ಅಕ್ಕಮಹಾದೇವಿಯ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕ ಮಾತನಾಡಿದರು.ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು. ಆಶಿರ್ವಚನ ನೀಡಿ, ಇತಿಹಾಸ ಅಳಿಯಬಾರದು ಅದು ಉಳಿಯಬೇಕು ಎಂದರು.ಬಸವ ಮಹಾಮನೆ ಸಂಸ್ಥೆಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ಡಾ. ಗಂಗಾಂಬಿಕಾ ಅಕ್ಕನವರು ವಿರಚಿತ “ವೀರವೈರಾಗ್ಯನಿಧಿ ಮಹಾದೇವಿ ಅಕ್ಕನವರ ಸಾಹಿತ್ಯ ದರ್ಶನ” ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಗವಿಯಲ್ಲಿ ಅಕ್ಕನ ಮೂರ್ತಿ ಅನಾವರಣಗೊಳಿಸಲಾಯಿತು. ಶರಣೆಯರ ನೇತೃತ್ವದಲ್ಲಿ ಅಕ್ಕನ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಡಾ. ಮಹಾಂತ ಬಸವಲಿಂಗ ಸ್ವಾಮಿ, ಪೂಜ್ಯ ಸಿದ್ಧಬಸವದೇವರು, ಬಸವಪ್ರಭು ಸ್ವಾಮಿ, ಗೋಣಿರುದ್ರ ಸ್ವಾಮಿ, ಕಲಬುರಗಿ ಮಹಾನಗರ ಪಾಲಿಕೆ ಆಸ್ತಿ ಅಧಿಕಾರಿ ಸಾವಿತ್ರಿ ಸಲಗರ, ಪುಷ್ಪಾವತಿ ಧಾರವಾಡಕರ್, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ, ಬಸವರಾಜ ಬಾಲಿಕಿಲೆ, ಜಗನ್ನಾಥ ಕುಶನೂರೆ, ಸಿ.ಬಿ.ಪ್ರತಾಪೂರೆ ಬಸವರಾಜ ರುದ್ರವಾಡಿ ಉಪಸ್ಥಿತರಿದ್ದರು.

Share this article