ಹೋರಾಟದ ಉತ್ಸಾಹ ಅತ್ಯದ ವರೆಗೂ ಇರಬೇಕು

KannadaprabhaNewsNetwork |  
Published : Apr 01, 2025, 12:47 AM IST
೩೧ಕೆಎಲ್‌ಆರ್-೩ಕೋಲಾರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜಿಸಿದ್ದ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷ ದಿನಾಚರಣೆ ಉದ್ಘಾಟಿಸಿ ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಡಾ. ಅಂಬೇಡ್ಕರ್ ಮೊಟ್ಟ ಮೊದಲ ಬಾರಿಗೆ ಚೌಡರ್ ಕೆರೆಯಲ್ಲಿ ಸಾರ್ವತ್ರಿಕವಾಗಿ ಅಪಾರವಾದ ಬೆಂಬಲಿಗರೊಂದಿಗೆ ತೆರಳಿ ನೀರು ಕುಡಿದಿದ್ದು ಐತಿಹಾಸಿಕ ಹೋರಾಟವಾಗಿದೆ, ಆದರೆ, ಈ ಹೋರಾಟದ ನಂತರ ಅಂಬೇಡ್ಕರ್ ಸುಮಾರು ಐದತ್ತು ವರ್ಷಗಳ ಕಾಲ ಕಾನೂನಾತ್ಮಕವಾಗಿ ಹೋರಾಟ ಮಾಡಿ ಅಂತಿಮವಾಗಿ ನ್ಯಾಯಾಲಯದಿಂದ ನ್ಯಾಯ ಪಡೆದರು.

ಕನ್ನಡಪ್ರಭ ವಾರ್ತೆ ಕೋಲಾರಅಸಮಾನತೆಯ ವಿರುದ್ಧ ಸಾಮಾಜಿಕ ನ್ಯಾಯದ ಹೋರಾಟ ನಡೆಸುವವರಿಗೆ ಅಂಬೇಡ್ಕರ್ ೯೮ ವರ್ಷಗಳ ಹಿಂದೆ ನಡೆಸಿದ ಮಹಾಡ್ ಕೆರೆ ಹೋರಾಟ ಧರ್ಮಗ್ರಂಥವಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಆಯೋಜಿಸಿದ್ದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೆರೆ ನೀರು ಕುಡಿದು ಪ್ರತಿಭಟನೆ

ಡಾ. ಅಂಬೇಡ್ಕರ್ ಮೊಟ್ಟ ಮೊದಲ ಬಾರಿಗೆ ಚೌಡರ್ ಕೆರೆಯಲ್ಲಿ ಸಾರ್ವತ್ರಿಕವಾಗಿ ಅಪಾರವಾದ ಬೆಂಬಲಿಗರೊಂದಿಗೆ ತೆರಳಿ ನೀರು ಕುಡಿದಿದ್ದು ಐತಿಹಾಸಿಕ ಹೋರಾಟವಾಗಿದೆ, ಆದರೆ, ಈ ಹೋರಾಟದ ನಂತರ ಅಂಬೇಡ್ಕರ್ ಸುಮಾರು ಐದತ್ತು ವರ್ಷಗಳ ಕಾಲ ಕಾನೂನಾತ್ಮಕವಾಗಿ ಹೋರಾಟ ಮಾಡಿ ಅಂತಿಮವಾಗಿ ನ್ಯಾಯಾಲಯದಿಂದ ನ್ಯಾಯ ಪಡೆದುಕೊಳ್ಳುತ್ತಾರೆ. ಹೋರಾಟವನ್ನು ಆರಂಭಿಸಿದಾಗ ಇದ್ದ ಉತ್ಸಾಹ ತಾರ್ಕಿಕ ಅಂತ್ಯ ಕೊಡಿಸುವವರೆವಿಗೂ ಇರಬೇಕಾಗುತ್ತದೆ ಎಂಬ ಬದ್ಧತೆಯನ್ನು ಮಹಾಡ್ ಕೆರೆ ಹೋರಾಟ ಪ್ರತಿಯೊಬ್ಬ ಹೋರಾಟಗಾರನಿಗೂ ಪಠ್ಯವಾಗಿದೆ ಎಂದರು.ಇನ್ನೂ ನಾಶವಾಗದ ಅಸ್ಪೃಶ್ಯತೆ

ಅಂಬೇಡ್ಕರ್‌ರ ಮಹಾಡ್ ಹೋರಾಟ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಾ.ನಾರಾಯಣಸ್ವಾಮಿ, ಮಹಾಡ್ ಕೆರೆಯ ಹೋರಾಟದ ೯೮ ವರ್ಷಗಳ ನಂತರವೂ ಅಸ್ಪೃಶ್ಯತೆ ಎನ್ನುವುದು ಪ್ರತ್ಯಕ್ಷವಾಗಿ ಕಾಣಿಸದಿದ್ದರೂ, ಪರೋಕ್ಷವಾಗಿ ಎಲ್ಲೆಡೆ ಚಾಲ್ತಿಯಲ್ಲಿದೆ, ಆದ್ದರಿಂದಲೇ ಭಾರತ ದೇಶವು ಜಾಗತಿಕ ಸಂತೃಪ್ತ ದೇಶಗಳ ಪಟ್ಟಿಯಲ್ಲಿ ೧೧೮ ನೇ ಸ್ಥಾನದಲ್ಲಿರುವಂತಾಗಿದೆ ಎಂದರು. ನಿವೃತ್ತ ಪ್ರಾಂಶುಪಾಲ ಡಾ.ಟಿ.ಜಯರಾಮ್, ನಗರಸಭೆ ಸದಸ್ಯ ಎನ್.ಅಂಬರೀಶ್ ಮಾತನಾಡಿದರು. ದಸಂಸ ಅಂಬೇಡ್ಕರ್ ವಾದ ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ದಸಂಸ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಎ.ಪಿ.ಎಲ್.ರಂಗನಾಥ್, ವಕೀಲ ಪಿ.ಸಿ.ನಾರಾಯಣಸ್ವಾಮಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ