ಕೋಮುಲ್ ಗದ್ದುಗೆಗೇರಲು ಅಂತಿಮ ಕರಸತ್ತು

KannadaprabhaNewsNetwork |  
Published : Jun 23, 2025, 11:49 PM ISTUpdated : Jun 24, 2025, 12:49 PM IST
23ಕೆಬಿಪಿಟಿ.1.ಶಾಸಕ ಎಸ್.ಎನ್.ನಾರಾಯಣಸ್ವಾಮಿ. | Kannada Prabha

ಸಾರಾಂಶ

ಕೋಲಾರ ಹಾಲು ಒಕ್ಕೂಟದ ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಉಳಿದಿದ್ದು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು ಮತದಾರರನ್ನು ಓಲೈಕೆ ಮತ್ತು ಆಸೆ ಅಮೀಷಗಳನ್ನು ನೀಡಿ ತಮ್ಮತ್ತ ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರಿದಿದೆ.

 ಬಂಗಾರಪೇಟೆ :  ಕೋಲಾರ ಹಾಲು ಒಕ್ಕೂಟದ ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಉಳಿದಿದ್ದು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು ಮತದಾರರನ್ನು ಓಲೈಕೆ ಮತ್ತು ಆಸೆ ಅಮೀಷಗಳನ್ನು ನೀಡಿ ತಮ್ಮತ್ತ ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರಿದಿದೆ.

ಕೈ- ಮೈತ್ರಿ ನಡುವೆ ಪೈಪೋಟಿ

ಕಳೆದ ತಿಂಗಳು ಡಿಸಿಸಿ ಬ್ಯಾಂಕಿನ ಚುನಾವಣೆಯ ಗುಂಗಿನಲ್ಲಿದ್ದ ರಾಜಕೀಯ ಪಕ್ಷಗಳು ಈಗ ಕೋಮುಲ್ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ, ಕಣದಲ್ಲಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಬಿ.ಎಂ.ವೆಂಕಟೇಶ್ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದವರಂತೆ ಡೇರಿಗಳ ಡೆಲಿಗೇಟ್ಸ್‌ಗಳನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

 ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಳೆದ ವಾರದಿಂದ ಚುನಾವಣೆಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.ಮತ್ತೊಂದು ಕಡೆ ಬಿ.ಎಂ.ವೆಂಕಟೇಶ್ ಸಹ ಶಾಸಕರ ಕಡೆಯಿರುವ ಡೆಲಿಗೇಟ್ಸ್‌ಗಳನ್ನು ಸೆಳೆಯಲು ಮಾಜಿ ಸಂಸದ ಎಸ್.ಮುನಿಸ್ವಾಮಿ ಮೂಲಕ ಭಗೀರಥ ಪ್ರಯತ್ನದಲ್ಲಿ ತೊಡಗಿದ್ದಾರೆ.ಇದರಿಂದ ಈ ಚುನಾವಣೆ ಕ್ಷೇತ್ರದಲ್ಲಿ ಹೆಚ್ಚಿನ ಕುತೂಹಲ ಕೆರಳಿಸಿದೆ. ಕ್ಷೇತ್ರದಲ್ಲಿ ಒಟ್ಟು ೫೪ ಮತದಾರರಿದ್ದು ಈ ಪೈಕಿ ಶಾಸಕರ ಕಡೆ ಈಗಾಗಲೇ ೪೦ಕ್ಕೂ ಹೆಚ್ಚಿನ ಮತದಾರರು ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಿ ಮತಕ್ಕೆ ₹2 ಲಕ್ಷ?

ಮೈತ್ರಿ ಅಭ್ಯರ್ಥಿ ಬಿ.ಎಂ.ವೆಂಕಟೇಶ್ ಒಕ್ಕಲಿಗರಾಗಿದ್ದು ಮತ್ತು ಡೆಲಿಗೇಟ್ಸ್‌ಗಳಲ್ಲಿ ಬಹುತೇಕರು ಒಕ್ಕಲಿಗರೇ ಆಗಿರುವ ಕಾರಣ ಕೊನೆ ಕ್ಷಣದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು ತಮ್ಮ ನಿಷ್ಠೆಯನ್ನು ತಮ್ಮ ಪರ ತೋರಬಹುದೆಂಬ ಆಸೆ ಭಾವಣೆಯಲ್ಲಿದ್ದಾರೆ. ಇದಕ್ಕೆ ಅವಶಾಕ ನೀಡದಂತೆ ಶಾಸಕರು ತಮ್ಮ ಪರವಿರುವವರನ್ನು ಈಗಾಗಲೇ ಪ್ರವಾಸಕ್ಕೆ ಕಳುಹಿಸಿದ್ದಾರೆ. ಒಂದು ಮೂಲದ ಪ್ರಕಾರ, ಪ್ರತಿ ಮತಕ್ಕೆ 1 ರಿಂದ2 ಲಕ್ಷದವರೆಗೂ ಆಮಿಷ ಒಡ್ಡಲಾಗಿದೆ ಎನ್ನಲಾಗಿದೆ.

PREV
Read more Articles on

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ