ಕನ್ನಡಪ್ರಭ ವಾರ್ತೆ ಹಾಸನ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಥಮ ಏಕಾದಶಿ ದಿಂಡಿ ಮಹೋತ್ಸವವು ಶನಿವಾರದಂದು ಬೆಳಿಗ್ಗೆ ಜರುಗಿತು. ಮುಂಜಾನೆ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ಅವರಿಗೆ ಅಭಿಷೇಕ, ಕಾಕಡ ಆರತಿಯಿಂದ ಆರಂಭವಾಗಿ ಶ್ರೀ ಪಾಂಡುರಂಗ ಸ್ವಾಮಿಯವರ ಉತ್ಸವ ಬೆಳ್ಳಿ ರಥದಲ್ಲಿ ಪಂಡರಿ ಸಂಪ್ರದಾಯದಂತೆ ಚಾಲನೆ ದೊರಕಿತು. ನಗರದ ಪ್ರಮುಖ ರಾಜಬೀದಿಯಲ್ಲಿ ವೈಭವದ ಉತ್ಸವವು ಸಾಗಿತು. ಇದೇ ವೇಳೆ ಆಕರ್ಷಣೆಯಾಗಿ ಸ್ಯಾಕ್ಸೋಫೋನ್, ಭಜನೆ, ಮಹಿಳೆಯರಿಂದ ದೇವರ ನಾಮ ಹಾಡಿಗೆ ಕುಣಿತ ಸೇರಿದಂತೆ ಇನ್ನು ಹಲವಾರು ಕಲಾತಂಡಗಳು ಪಾಲ್ಗೊಂಡಿದ್ದವು. ಇನ್ನು ಒಂಬತ್ತು ದಿನದ ಉತ್ಸವದ ಕೊನೆಯ ದಿವಸದಂದು ಭಾನುವಾರದಂದು ಮಧ್ಯಾಹ್ನ ೧೨ ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಸಾದವನ್ನು ಸ್ವೀಕರಿಸಿ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.
ಜೈ ಮಾತಾ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಟಿ. ಎಸ್. ಭವಾನಿ ಮಾಧ್ಯಮದೊಂದಿಗೆ ಮಾತನಾಡಿ, ಭಾವಸಾರ ಕ್ಷತ್ರಿಯ ಮಂಡಳಿ ಹಾಗೂ ಹಾಸನದ ಪಾಂಡುರಂಗ ದೇವಸ್ಥಾನ ಮತ್ತು ಜೈ ಮಾತಾ ಮಹಿಳಾ ಮಂಡಳಿವತಿಯಿಂದ ಜಿಲ್ಲೆಯ ಜನೆತೆಗೆ ೫೫ನೇ ವರ್ಷದ ಆಶಾಢ ಮಾಸದ ದಿಂಡಿ ಮಹೋತ್ಸವದ ಶುಭಾಶಯಗಳನ್ನು ತಿಳಿಸುತ್ತೇವೆ. ಆಶಾಢ ಮಾಸವು ಪಾಂಡುರಂಗನ ಸೇವೆಗೆ ಉತ್ತಮ ಕಾಲವಾಗಿದೆ ಎಂದರು. ಭಾವಸಾರ ಕ್ಷತ್ರಿಯರು ಪ್ರತಿವರ್ಷ ಚಪ್ಪಳಿಯನ್ನು ಹಾಕದೇ ಪಂಡರಿಪುರಕ್ಕೆ ತೆರಳಿ ಭಕ್ತಿ ಸಲ್ಲಿಸುತ್ತಾರೆ. ಉತ್ಸವದ ವೇಳೆ ಮಳೆ ಬಂದರೂ ಸಹ ಯಾವ ಉತ್ಸಹ ಕಡಿಮೆ ಆಗದಂತೆ ಪಾಲ್ಗೊಂಡು ವಿಜೃಂಭಣೆಯಿಂದ ಮಹೋತ್ಸವ ಜರುಗಿದೆ ಎಂದರು. ಭಾನುವಾರದಂದು ಪಾಂಡುರಂಗ ದೇವಸ್ಥಾನದಲ್ಲಿ ಬೆಳಿಗ್ಗೆ ೮:೩೦ರಿಂದ ಕಲ್ಯಾಣೋತ್ಸವ ನಡೆದು ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆಗೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.ಇದೇ ವೇಳೆ ಭಾವಸಾರ ಕ್ಷತ್ರಿಯ ಮಂಡಳಿಯ ಅಧ್ಯಕ್ಷರಾದ ಚಿರಂತ್ ಬೈರಾಟೆ, ಉಪಾಧ್ಯಕ್ಷ ಬಿ. ಎಲ್. ನಿರ್ವಾಹಣೆ ರಾವ್ ಮಹಳತ್ಕರ್, ಕಾರ್ಯದರ್ಶಿ ಚಂದ್ರಕಾಂತ್ ನಾಜರೆ, ಸಹ ಕಾರ್ಯದರ್ಶಿ ಜಿ.ಎಸ್. ನರೇಂದ್ರ ಗದ್ದಾಳೆ, ಖಜಾಂಚಿ ಜೆ. ಅಂಬರೀಶ್, ಜೈ ಮಾತಾ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ವಿಮಲಾ ಶ್ರೀನಿವಾಸ್ ಗದ್ದಾಳೆಮ ಅಧ್ಯಕ್ಷೆ ಸುನೀತಾ ರಮೇಶ್ ಕಲೋಸೆ, ಉಪಾಧ್ಯಕ್ಷೆ ಚಂದ್ರಿಕಾ ನಾರಾಯಣ್ ನಾಜರೆ, ಕಾರ್ಯದರ್ಶಿ ಶ್ವೇತಾ ಸುನೀಲ್ ಘನಾತೆ, ಖಜಾಂಚಿ ರಿಚ ಕಿಶನ್ ನಾಜರೆ ಇತರರು ಉಪಸ್ಥಿತರಿದ್ದರು.