ರೈತರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ

KannadaprabhaNewsNetwork | Published : Oct 5, 2024 1:38 AM

ಸಾರಾಂಶ

ಲಿಂಗಸುಗೂರು ತಾಲೂಕಿನ ದೇವರಬೂಪುರ ರೈತರ ಪರವಾಗಿ ಅರಣ್ಯ ಇಲಾಖೆ ವಿರುದ್ಧ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ದಸಂಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತಾಲೂಕಿನ ದೇವರಬುಪೂರ ಗ್ರಾಮದ ರೈತರ ಸಾಗುವಳಿ ಭೂಮಿಯಲ್ಲಿ ಪಪ್ಪಾಯಿ ಬೆಳೆನಾಶ ಮಾಡಿದ ಅರಣ್ಯ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹೋರಾಟದೊಂದಿಗೆ ರೈತರು ಬೃಹತ್‌ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಅರಣ್ಯ ಭೂಮಿ ಸಾಗುವಳಿ ಮಾಡುವ ರೈತನಿಗೆ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿದ ಘಟನೆ ಶುಕ್ರವಾರ ನಡೆದಿದೆ.

ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ರಸ್ತೆ ಸಂಚಾರ ಬಂದ್‌ ಮಾಡಿ ಎತ್ತಿನ ಬಂಡಿ, ಟ್ಯ್ರಾಕ್ಟರ್‌ ಹಾಗೂ ನೂರಾರು ರೈತರೊಂದಿಗೆ ಪ್ರತಿಭಟನೆ ಆರಂಭಿಸಿ, 5 ಕಿಮೀ ದೂರದ ಯರಡೋಣ ಶಿವಾರದಲ್ಲಿ ಪಪ್ಪಾಯಿ ಬೆಳೆದ ರೈತನ ಬೆಳೆ ಹಾಳು ಮಾಡಿ, ಗಿಡಗಳನ್ನು ಕಿತ್ತು ಹಾಕಿ ಗುಂಡಿ ಅಗೆದ ಜಮೀನಿಗೆ ತೆರಳಿದ ರೈತರು, ಆರಂಭದಲ್ಲಿ ಎತ್ತಿಗಳೊಂದಿಗೆ ನೇಗಿಲು ಉತ್ತಲು ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಲು ಮುಂದಾದರೂ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳನ್ನು ಲೆಕ್ಕಿಸದೇ ರೈತರು ಎತ್ತುಗಳೊಂದಿಗೆ ಜಮೀನಿನಲ್ಲಿ ನೇಗಿಲು ಹೊಡೆಯಲು ಆರಂಭಿಸಿದರು.

ರೈತರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು, ಎತ್ತಿನ ನೇಗಿಲು ನಿಲ್ಲಿಸಲು ಮುಂದಾದರು ರೈತರು ಕ್ಯಾರೆ ಎನ್ನದೆ ಜೆಸಿಬಿ ಯಂತ್ರದಿಂದ ತಗ್ಗುಗಳನ್ನು ಮುಚ್ಚಿದರು. ಒಗ್ಗಟ್ಟನಿಂದ ಅಪಾರ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮೂಕ ಪ್ರೇಕ್ಷರಕಾದರು.

ರೈತರ ಆಕ್ರೋಶ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಇಲಾಖೆ ಅಗೆದ ಗುಂಡಿಗಳನ್ನು ಮುಚ್ಚಿದ ರೈತರು ಒಗ್ಗಟ್ಟು ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ಪ್ರಸಾದರೆಡ್ಡಿ, ನ್ಯಾಯವಾದಿ ಕುಪ್ಪಣ್ಣ ಮಾಣಿಕ್, ರಾಜ್ಯ ಪ್ರಧಾನ ಕಾರ್ಯಧ್ಯಕ್ಷ ಬೈರೆಗೌಡ, ವೀರಭದ್ರಯ್ಯ ಸ್ವಾಮಿ, ಸೇರಿದಂತೆ ರೈತ, ದಲಿತ ಸಂಘದ ಮುಖಂಡರು,ಕಾರ್ಯಕರ್ತರು. ಅರಣ್ಯ ಇಲಾಖೆಯ ಎಸಿಎಫ್ಗೋವಿಂದರಾಜು, ರಾಜೇಶ ಸೇರಿದಂತೆ ಇದ್ದರು.

Share this article