ಭವಿಷ್ಯದ ಭಾರತ ನಿಂತಿರುವುದು ಶಿಕ್ಷಕರಿಂದ: ಜಿ.ಕೆ.ಶೋಭಾಕುಮಾರಿ

KannadaprabhaNewsNetwork |  
Published : Jul 06, 2025, 01:48 AM IST
ಫೆÇೀಟೋ 2 :  ಹೊಸಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ನಿವೃತ್ತಿ ಪಡೆದ ಜಿ.ಕೆ.ಶೋಭಾಕುಮಾರಿರವರಿಗೆ ಶಿಕ್ಷಕರು, ಗ್ರಾಮಸ್ಥರು ಬಿಳ್ಕೋಡುಗೆ ನೀಡಿ ಸನ್ಮಾನಿಸಿದರು. | Kannada Prabha

ಸಾರಾಂಶ

ಈ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು ಜೀವನದ ಸ್ಮರಣೀಯ ಕ್ಷಣ, ಉತ್ತಮ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಬಹಳ ಮುಖ್ಯ, ವೃತ್ತಿ ಜೀವನದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳು ಅತ್ಯಂತ ಮಹತ್ವವಾದದ್ದು .

ದಾಬಸ್‍ಪೇಟೆ: ಭವ್ಯ ಭಾರತದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತಿದ್ದು, ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ವಯೋ ನಿವೃತ್ತಿ ಹೊಂದಿದ ಸಹ ಶಿಕ್ಷಕಿ ಜಿ.ಕೆ.ಶೋಭಾಕುಮಾರಿ ಹೇಳಿದರು.

ಸೋಂಪುರ ಹೋಬಳಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ತಮ್ಮ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಈ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು ಜೀವನದ ಸ್ಮರಣೀಯ ಕ್ಷಣ, ಉತ್ತಮ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಬಹಳ ಮುಖ್ಯ, ವೃತ್ತಿ ಜೀವನದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳು ಅತ್ಯಂತ ಮಹತ್ವವಾದದ್ದು ಎಂದರು.

ಮುಖ್ಯಶಿಕ್ಷಕ ಕೆ.ಬಿ.ಚಂದ್ರಶೇಖರಯ್ಯ ಮಾತನಾಡಿ, ಸಹೋದ್ಯೋಗಿ ಶಿಕ್ಷಕಿಯಾದ ಜಿ.ಕೆ.ಶೋಭಾ ಕುಮಾರಿ ಸೇವೆ ಅಪಾರವಾದದ್ದು, ತಮ್ಮದೇ ಆದ ಬೋಧನಾ ಶೈಲಿಯಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಕೃಷ್ಣಪ್ಪ, ಕಂಬೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟ ರುದ್ರರಾಧ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಟಿ.ವಾಸುದೇವಮೂರ್ತಿ, ಎನ್.ಗಿರೀಶ್. ಬಿ.ಆರ್.ಸಿ. ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ನಾಗೇಶ್, ಜಿ.ವಿ.ಕುಮಾರ್, ಶಿವಕುಮಾರ್, ಎಸ್.ಎಂ. ಕೃಷ್ಣಮೂರ್ತಿ, ವನರಾಜು, ಮುಖ್ಯಶಿಕ್ಷಕ ಚಂದ್ರಶೇಖರಯ್ಯ, ಗ್ರಾ.ಪಂ.ಸದಸ್ಯರಾದ ರತ್ನ.ಬಿ.ಆರ್., ಮೋಹನ್ ಕುಮಾರ್. ಮುಖಂಡರಾದ ಬಾಲಚಂದ್ರಮೂರ್ತಿ (ಬಾಬು), ನಾಗೇಂದ್ರ, ಕುಮಾರ್, ಚೇತನ್ , ಶಂಕರ್ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು