ದೇವನಹಳ್ಳಿ: ಚದುರಂಗದ ಆಟದಿಂದ ಏಕಾಗ್ರತೆ, ಬುದ್ದಿಶಕ್ತಿ, ಆಲೋಚನೆ ವೃದ್ಧಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಹೇಳಿದರು.ಪಟ್ಟಣದ ಸರ್ಕಾರಿ ಮಾದ್ಯಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ದೇವನಹಳ್ಳಿ ಚೆಸ್ ಅಸೋಸಿಯೇಷನ್ ಆಯೋಜಿಸಿದ್ದ ಚೆಸ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಆಯೋಜಕರು ಸೇರಿದಂತೆ ಸ್ಪರ್ಧಿಗಳು ಚೆಸ್ ಕಮಿಟಿಯವರು ಎಲ್ಲರೂ ಕ್ರೀಡಾಪಟುಗಳೇ ಆಗಿರುವುದು ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿದಾಯಕ. ಮಕ್ಕಳು ಹಾಗೂ ಪೋಷಕರು ಈ ಚದುರಂಗದಾಟದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಡಾ.ಮಾನಸ ಮಾತನಾಡಿ, ಚದುರಂಗ ಇಂದು ವಿಶ್ವಮಟ್ಟದ ಕ್ರೀಡೆಯಾಗಿ ಬೆಳೆದಿದೆ. ಹಾಕಿ, ಖೋಖೋ, ಕಬಡ್ಡಿಯಂತೆಯೇ ಈ ಆಟದ ತವರು ನಮ್ಮ ಭಾರತ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ. ಇದನ್ನು ಮಹಾಭಾರತ ಕಾಲದಲ್ಲಿಯೇ ರಾಜಮಹಾರಾಜರು ಆಡುತ್ತಿದ್ದರು. ಚದುರಂಗ ಆಟ ನಮ್ಮ ಜೀವನದ ಹೆಜ್ಜೆಗಳನ್ನು ಹೇಗೆ ಮುಂದಿಡಬೇಕು, ನಮ್ಮ ಗುರಿ ಯಾವ ರೀತಿ ಸಾಗಬೇಕು ಎಂಬುದನ್ನು ಕಲಿಸಿಕೊಡುತ್ತದೆ ಎಂದರು.ಚೆಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಮಂಜು ಮಾತನಾಡಿ, ಯುವಕ ಯುವತಿಯರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ನಾವು ಈ ಪಂದ್ಯಾವಳಿಗಳನ್ನು ಆಯೋಜಿಸಿದ್ದೇವೆ. ಮಕ್ಕಳಿಂದ ವೃದ್ಧರವರೆಗೂ ಈ ಚದುರಂಗದಾಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ಇಂದು ೭೦ ಮಂದಿ ಹೆಸರು ನೊಂದಾಯಿಸಿಕೊಂಡಿರುವುದು ಸಂತಸ ತಂದಿದೆ. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಪೃಥಮ ಮೂವರಿಗೆ ಕ್ರಮವಾಗಿ ೫ ಸಾವಿರ, ೩ ಸಾವಿರ ಮತ್ತು ೨ ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ನೀಡಲಿದ್ದೇವೆ ಎಂದರು.
ಈ ವೇಳೆ ಶಾಲಾ ಮುಖ್ಯ ಶಿಕ್ಷಕಿ ಬೊಮ್ಮಕ್ಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪುಟ್ಟಸ್ವಾಮಿ, ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್.ಗೋಪಾಲ್, ಉಪಾಧ್ಯಕ್ಷ ಎಸ್.ಆರ್. ಮುನಿರಾಜು, ಎಸ್.ಆರ್.ರವಿಕುಮಾರ್, ಬಿಸಿಎಸ್ ಚಂದ್ರಶೇಖರ್, ಕೇಶವ ಎಂ, ಅಜೇಯ್ ಆರ್, ಕಾರ್ಯದರ್ಶಿ ಡಿ.ಪಿ.ರವಿಕಿರಣ್, ಸಹಕಾರ್ಯದರ್ಶಿ ಎಂ.ಅಣ್ಣಪ್ಪ, ಖಜಾಂಚಿ ರಗುನಾಥ್ ಆರ್, ಕಾನೂನು ಸಲಹೆಗಾರ ಎನ್.ಕೃಷ್ಣ, ಸದಸ್ಯರಾದ ನಟರಾಜ, ನಾಗರಾಜ, ನರೇಂದ್ರ, ಶ್ರೀನಿವಾಸ, ನಾಗೇಂದ್ರ, ವೆಂಕಟೇಶ್, ಕುಮಾರ್, ಶಿವರಾಜ್, ಲಕ್ಷ್ಮೀನಾರಾಯಣ್, ಬಿ.ನಾಗರಾಜ್, ಹರೀಶ್ , ಜಿ.ಅನಿಲ್, ಎಂ.ಆನಂದ್, ಧನಂಜಯ್, ಅಮರ್‌ನಾಥ, ಮಂಜುನಾಥ, ಮಹೇಶ್ ಇತರರಿದ್ದರು.೧೮ ದೇವನಹಳ್ಳಿ ೦೧ ಚಿತ್ರಸುದ್ದಿ:
ದೇವನದಹಳ್ಳಿಯಲ್ಲಿ ಆಯೋಜಿಸಿದ್ದ ಚದುರಂಗ ಪಂದ್ಯಾವಳಿಗಳನ್ನು ಬಿಇಒ ಲಲಿತಮ್ಮ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಬೊಮ್ಮಕ್ಕ, ಡಾ. ಮಾನಸ, ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್.ಗೋಪಾಲ್, ಅಧ್ಯಕ್ಷ ಕೆ.ಮಂಜು ಇತರರಿದ್ದರು.