ವಿಜೃಂಭಣೆಯ ಹೊರನಾಡು ಅನ್ನಪೂಣೇಶ್ವರಿ ರಥೋತ್ಸವ

KannadaprabhaNewsNetwork |  
Published : Feb 21, 2026, 01:30 AM IST
ಪೊಟೋ೨೦ಕಳಸ೧ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀಮನ್ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. | Kannada Prabha

ಸಾರಾಂಶ

ಹೊರನಾಡುಪವಿತ್ರ ಹೊರನಾಡು ಅನ್ನಪೂರ್ಣೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬ್ರಹ್ಮರಥೊತ್ಸವ ಹಾಗೂ ಶ್ರೀಮನ್ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ, ಹೊರನಾಡು

ಪವಿತ್ರ ಹೊರನಾಡು ಅನ್ನಪೂರ್ಣೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬ್ರಹ್ಮರಥೊತ್ಸವ ಹಾಗೂ ಶ್ರೀಮನ್ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಪಟ್ಟಣದ ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಸೇರಿದಂತೆ ನೂರಾರು ಗ್ರಾಮಗಳಿಂದ ಸಾವಿರಾರು ಭಕ್ತರು ಮಾತೆ ಅನ್ನಪೂರ್ಣೆಶ್ವರಿ ದರ್ಶನ ಪಡೆದು ಪುನೀತರಾದರು. ಜಾತ್ರೆಯ ನಿಮಿತ್ತ ಊರ ತುಂಬೆಲ್ಲ ತಳಿರು–ತೋರಣಗಳಿಂದ ಅಲಂಕರಿಸಲ್ಪಟ್ಟಿದ್ದು, ಇಡೀ ಹೊರನಾಡು ದೇವಾಲಯ ವಿದ್ಯುದೀಪಗಳ ಹೊಳಪಿನಲ್ಲಿ ಸ್ವರ್ಗ ಸಮಾನವಾಗಿ ಕಾಣಿಸಿತು. ರಾತ್ರಿ ವೇಳೆ ದೀಪಾಲಂಕಾರದಲ್ಲಿ ಮಿನುಗಿದ ದೇವಾಲಯ ಭಕ್ತರ ಮನಸ್ಸಿಗೆ ಆನಂದದ ಬೆಳಕನ್ನುತುಂಬಿತು.ಗೌಡಲು ಜನಾಂಗ ಶ್ರದ್ಧೆಯಿಂದ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ವಿರಾಜಮಾನವಾಗುವ ಕ್ಷಣಕ್ಕಾಗಿ ಭಕ್ತರು ಉಸಿರುಗಟ್ಟಿಸಿಕೊಂಡಂತೆ ಕಾಯುತ್ತಿದ್ದರು. ಮಧ್ಯಾಹ್ನ ಸ್ತುತಿ ಪಾಠಕರ ವೇದಘೋಷ, ಛತ್ರಿ–ಚಾಮರಗಳ ನೃತ್ಯ, ಮಂಗಳವಾದ್ಯಗಳ ನಾದದೊಂದಿಗೆ ಹೂವಿನ ಅಲಂಕಾರದಲ್ಲಿ ಉತ್ಸವಮೂರ್ತಿ ಹೊತ್ತು ತರಲಾದಾಗ ಭಕ್ತರ ಹೃದಯಗಳಲ್ಲಿ ಭಾವೋದ್ರೇಕ ಉಕ್ಕಿ ಬಂದಿತು.ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಭವ್ಯ ಬ್ರಹ್ಮರಥದಲ್ಲಿ ಕುಳ್ಳಿರಿಸಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದಾಗ, ಭಕ್ತಾದಿ ಗಳು ಫಲ–ಪುಷ್ಪಗಳಿಂದ ಅರ್ಚನೆ ಮಾಡಿ, ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಧಾನ್ಯಗಳನ್ನು ಸಮರ್ಪಿಸಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಶ್ವೇತವಸ್ತ್ರ ಧರಿಸಿದ ಭಕ್ತರು ಭವ್ಯ ಬ್ರಹ್ಮರಥ ಎಳೆಯುತ್ತಿದ್ದ ಕ್ಷಣ ಪವಿತ್ರತೆಯ ಪರಾಕಾಷ್ಠೆಯಾಗಿ ಪರಿಣಮಿಸಿತು. ರಥಾ ರೋಹಣದ ವೈಭವವನ್ನು ಆಸ್ತಿಕ–ನಾಸ್ತಿಕರ ಭೇದವಿಲ್ಲದೆ ಎಲ್ಲರೂ ಕಣ್ತುಂಬಿಸಿಕೊಂಡರು. ಒಂದು ಕಡೆ ಜನರು ಭಕ್ತಿ ಸಾಗರದಲ್ಲಿ ಮುಳುಗಿದರೆ, ಇನ್ನೊಂದು ಕಡೆ ಜಾತ್ರೆ ಸಂತೆ, ವ್ಯಾಪಾರ–ವಹಿವಾಟುಗಳು ಜೀವಂತ ಸಂಸ್ಕೃತಿಯ ಪ್ರತಿರೂಪವಾಗಿ ಮೆರೆದವು.ರಾತ್ರಿ ಅನ್ನಪೂಣೇಶ್ವರಿಯ ಶ್ರೀಮನ್ ಮಹಾ ರಥೋತ್ಸವ ಮತ್ತಷ್ಟು ಭಾವನಾತ್ಮಕವಾಗಿ ನಡೆಯಿತು. ದೇವಾಲಯದ ಬಳಿಯಿಂದ ಆಂಜನೇಯ ದೇವಸ್ಥಾನದವರೆಗೆ ರಥಬೀದಿಯಲ್ಲಿ ಸಾಗಿದ ರಥೋತ್ಸವದ ವೇಳೆ ದಾರಿಯುದ್ದಕ್ಕೂ ಭಕ್ತರು ಹಣ್ಣು–ಕಾಯಿ ಸಮರ್ಪಿಸಿ, ತಮ್ಮ ಜೀವನದ ಸಂಕಟ–ಸಂಕಲ್ಪಗಳನ್ನು ದೇವರ ಪಾದಗಳಲ್ಲಿ ಅರ್ಪಿಸಿದರು. ರಥ ಪುನಃ ದೇವಾಲಯಕ್ಕೆ ಮರಳಿದಾಗ ಭಕ್ತರ ಮನಗಳಲ್ಲಿ ಅಸ್ಪಷ್ಟ ಶಾಂತಿ, ಅಪಾರ ಆಧ್ಯಾತ್ಮಿಕ ತೃಪ್ತಿ ನೆಲೆಸಿತ್ತು.ಪೊಟೋ೨೦ಕಳಸ೧ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿಯ ಶ್ರೀಮನ್ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಮೂಲಗಳಲಿಲ್ಲದ ರೈತರ ಬದುಕು ಬರಡು
ಮಣ್ಣಿನ ಸಂರಕ್ಷಣೆಯಿಂದ ಅನ್ನದ ಭದ್ರತೆ ಖಾತ್ರಿ