ಕನ್ನಡಪ್ರಭ ವಾರ್ತೆ ಇಳಕಲ್ಲ
ಮಹಿಳಾ ಮಣಿಗಳೇ ಸೇರಿಕೊಂಡು ಡಾ.ಅರುಣಾ ಅಕ್ಕಿ ಅವರ ನೇತೃತ್ವದಲ್ಲಿ ಸ್ಥಾಪಿಸಿರುವ ಮಹಾಂತೇಶ್ವರ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತ ಇಳಕಲ್ ಇದರ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂಸ್ಥೆಯು ಮುಂದೆ ಸುವರ್ಣ ಮಹೋತ್ಸವ ಹಾಗೂ ಶತಮಾನೋತ್ಸವ ಆಚರಿಸಲಿ. ಸಾಮಾಜಿಕ, ಆರ್ಥಿಕ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಅರುಣಾ ಕೆ. ಅಕ್ಕಿ ಅವರು ಮಹಿಳಾ ಶಕ್ತಿಯಾಗಿ ಸೇವೆ ಸಲ್ಲಿಸುತ್ತಿರುವುದು ಮೊದಲಿಗರು ಎಂದು ಡಾ.ಅರುಣಾ ಅಕ್ಕಿ ಅವರ ಗುಣಗಾನ ಮಾಡಿ ಅನೇಕ ಬಡವರಿಗೆ ಸಂಘದಿಂದ ಆರ್ಥಿಕ ನೆರವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.ನವದೆಹಲಿಯ ಐಐಎಂ(ಅಹ್ಮದಾಬಾದ್) ಸಂಪನ್ಮೂಲ ವ್ಯಕ್ತಿ ವಿಶ್ವಚೇತನ ನಡಮನಿ ಮಹಿಳಾ ಸಿರಿಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಜನರು ಆರ್ಥಿಕವಾಗಿ ಬೆಳೆದು ಬರಲಿ ಎನ್ನುವುದೇ ಸಹಕಾರಿ ಸಂಘದ ಮುಖ್ಯ ಉದ್ದೇಶವಾಗಿದೆ. ದುಡಿದ ಹಣವನ್ನು ಉಳಿಸಿ ಅದನ್ನು ಸಂಘದಲ್ಲಿ ಠೇವಣಿ ಮಾಡಿ. ಅದು ನಿಮಗೆ ಆಪತ್ತಿನ ಕಾಲದಲ್ಲಿ ಬಳಕೆಗೆ ಬರುತ್ತದೆ ಎಂದರು.ಸಂಘದ 25ನೇ ವರ್ಷದಲ್ಲಿ ಒಮ್ಮೆಯೂ ಚುನಾವಣೆ ನಡೆದಿಲ್ಲ. ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 300ಕ್ಕೂ ಅಧಿಕ ಶೇರುದಾರರನ್ನು ಹೊಂದಿದ್ದು ₹45 ಕೋಟಿ ದುಡಿಯುವ ಬಂಡವಾಳ ಇದೆ. ₹೬೦ ಲಕ್ಷ ಲಾಭವಾಗಿದೆ. ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಗೆ ಇರುತ್ತದೆ ಎಂದು ಸಂಘ ಬೆಳೆದು ಬಂದ ದಾರಿ ಕುರಿತು ಸಂಘದ ಸಂಸ್ಥಾಪಕ ಅಧ್ಯಕ್ಷೆ ಡಾ.ಅರುಣಾ ಅಕ್ಕಿ ಹೇಳಿದರು.ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೂಜ್ಯರನ್ನು, ಶಾಸಕ ವಿಜಯಾನಂದ ಕಾಶಪ್ಪನವರ, ವಿಶ್ವಚೇತನ ನಡಮನಿ, ಅವರ ತಂದೆ, ತಾಯಿ, ಅಜ್ಜಿ, ಡಾ.ಅರುಣಾ ಕೆ.ಅಕ್ಕಿ, ಅಧ್ಯಕ್ಷೆ ರಾಜೇಶ್ವರಿ ಹರಿಹರ, ಮಾಜಿ ಅಧ್ಯಕ್ಷೆ ಪುಷ್ಪ ಕಟಾರಿಯ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೨೫ಕ್ಕೂ ಹೆಚ್ಚು ಮಹಿಳೆಯರನ್ನು ಗೌರವಿಸಿ ಸತ್ಕರಿಸಲಾಯಿತು.
ರಾಷ್ಟ್ರಗೀತೆ ನಂತರ ವಿನಯಾ ಹರಿಹರ ಅವರಿಂದ ವಚನ ಪ್ರಾರ್ಥನೆ, ಸಂಘದ ಅಧ್ಯಕ್ಷೆ ರಾಜೇಶ್ವರಿ ಹರಿಹರ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ.ಅನಿತಾ ಎಂ. ಅಕ್ಕಿ ಪರಿಚಯಿಸಿದರು, ಸಂಗಣ್ಣ ಗದ್ದಿ ಸಂದೇಶ ನಿವೇದಿಸಿದರು, ಪ್ರವೀಣ ಮುದುಗಲ್ಲ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕಿ ಶೋಭಾ ಎಂ.ಜೀರಿಗೆ ವಂದಿಸಿದರು.