ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಲಲಿತಾ ಮತ್ತು ಪ್ರೊ. ಸಿ.ವಿ. ಕೆರಿಮನಿ ದತ್ತಿಯಲ್ಲಿ ‘ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ’ ವಿಷಯ ಕುರಿತು ಮಾತನಾಡಿದ ಅವರು, ಗೋಕಾಕ ಸಮಿತಿ ರಚನೆ ಹಾಗೂ ನಂತರ ಜರುಗಿದ ಚಳವಳಿಯ ಪ್ರಭಾವದಿಂದ 44 ವರ್ಷಗಳ ಹಿಂದೆ ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರ ವರೆಗೆ ಭಾಷೆಯ ಕುರಿತು ಹೋರಾಟದ ಕಿಚ್ಚನ್ನು ಹಚ್ಚುವ ಜತೆಗೆ ಬೆಂಗಳೂರು ದೂರದರ್ಶನ, ಸರೋಜಿನಿ ಮಹಿಷಿ ವರದಿ, ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಡಳಿತದಲ್ಲಿ ಕನ್ನಡ, ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯ, ಶಾಸ್ತ್ರೀಯ ಭಾಷೆ ಸ್ಥಾನಮಾನ ಸೇರಿದಂತೆ ಹಲವಾರು ಕನ್ನಡ ಕೆಲಸಗಳಿಗೆ ನಾಂದಿಯಾಯಿತು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಗೋಕಾಕ ಚಳವಳಿಯಲ್ಲಿ ಮಾಡಿದ ಕಾರ್ಯ, ಚಲನಚಿತ್ರ ಕಲಾವಿದರ ಬಳಗ, ಸಾಹಿತಿಗಳ, ಅಸಂಖ್ಯಾತ ಕನ್ನಡಿಗರು ವಹಿಸಿದ ಪಾತ್ರ ಅವಿಸ್ಮರಣೀಯ. ಅಖಂಡ ಧಾರವಾಡ ಜಿಲ್ಲೆಯಲ್ಲಿ ಕನ್ನಡದ ಕಂಪು ಹಾಗೂ ಪರಿಸರವನ್ನು ಬೆಳೆಸುವಲ್ಲಿ ಪ್ರೊ. ಸಿ. ವಿ. ಕೆರಿಮನಿ ಅವರ ಪಾತ್ರ ಪ್ರಮುಖ ಎಂದು ಹೇಳಿದರು.ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಪ್ರೊ. ಸಿ.ವಿ. ಕೆರಿಮನಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಇದೇ ವೇಳೆ ಸಾಹಿತ್ಯ ದಂಪತಿ ಪ್ರಶಸ್ತಿಯನ್ನು ಡಾ. ನಿಂಗಪ್ಪ ಮುದೇನೂರು ಮತ್ತು ಲಕ್ಷ್ಮಿ ಮುದೇನೂರೆಗ ನೀಡಿ ಗೌರವಿಸಲಾಯಿತು. ಮೇಘಾ ಹುಕ್ಕೇರಿ ಮತ್ತು ಡಾ. ವಿಜಯಶ್ರೀ ಅಂಗಡಿ ಸಹೋದರಿಯರು ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಬಿ.ವೈ. ಪಾಟೀಲ ವಂದಿಸಿದರು.