ಕನ್ನಡಪ್ರಭ ವಾರ್ತೆ ವಿಜಯಪುರ
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಗೌರವ ಅಧ್ಯಕ್ಷ ಅನಿಲ ಇಕ್ಕಡೆ ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ಸಂಪರ್ಕ ನೀಡದೇ ತನ್ನ ತುಘಲಕ್ ದರ್ಬಾರದ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ರೈತ ಭಾರತ ಪಕ್ಷವು ಹಮ್ಮಿಕೊಂಡಿರುವ ಹೋರಾಟ ಜನಪರವಾಗಿದೆ. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟವನ್ನು ಬೆಂಬಲಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಲಿಂಗರಾಜ ಬಿದರಕುಂದಿ ಮಾತನಾಡಿ, ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸುವ ಮೂಲಕ ಶ್ರೀಮಂತ ಮತ್ತು ಬಡವರ್ಗದವರನ್ನು ಒಡೆದು ಆಳುತ್ತಿದೆ. ಬಡವರ್ಗದ ಜನತೆಗೆ ವಿದ್ಯುತ್ ಸಂಪರ್ಕ ನೀಡದೇ ವಿನಾಃ ಕಾರಣ ತೊಂದರೆ ಕೊಡುತ್ತಿರುವುದು ಖಂಡನೀಯವಾದುದು. ಕೂಡಲೇ ಹೆಸ್ಕಾಂ ಅಧಿಕಾರಿಗಳು ಹಾಗೂ ಸರ್ಕಾರ ಜನರ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಒಂದು ವೇಳೆ ಇತ್ಯರ್ಥ ಪಡಿಸದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕರವೇ ಸ್ವಾಭಿಮಾನಿ ಮುಖಂಡ ಬಾವುಸಾಬ್ ಹತ್ತರಕಿಹಾಳ ಮಾತನಾಡಿದರು. ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಜಿಲ್ಲಾಧ್ಯಕ್ಷ ವಿನೋದ ಖೇಡ, ನೀಲಾಂಬಿಕಾ ಬಿರಾದಾರ, ನಿಮಿಷ ಎಸ್. ಆಚಾರ್ಯ, ಜಿಲಾನಿ ಪಾಶ್ಯಾಜಾಗೀರದಾರ, ಸಂಗಮೇಶ ಮೆಂಡೆಗಾರ, ಅನಸೂಯಾ ಸೆಳಮಕರ, ಸಿದ್ದಪ್ಪ ಬಸನಾಳ, ಅಲ್ತಾಪ ದಫೆದಾರ, ಎಂ.ಬಿ.ಜಾಗೀರದಾರ, ಲಾಯಪ್ಪ ಇಂಗಳೆ, ಪ್ರಕಾಶ ಸಬರದ, ಬಸವಕುಮಾರ ಕಾಂಬಳೆ, ಸಂತೋಷ ಕುಮಾರ ನಾಯಕ, ಅಯೂಬ್ ಕರಜಗಿ, ಸಿಕಂದರ ಜಾಗೀರದಾರ, ಬಿ.ಜಿ.ಶಿಂಧೆ, ಸಂಜೀವಕುಮಾರ ಶಿಂಧೆ, ಕಯೂಮ ಖುರೇಷಿ, ಫಯಾಜಅಹ್ಮದ, ಸಾಧಿಕಹುಸೇನ ಮುಶ್ರೀಫ, ಅಸ್ಪಾಕ್ ಜಾಗೀರದಾರ, ನಯೀಮ್ ಕೋರಿ, ಶಾಯೀದ ಇಲೆ, ಹರೂಮ್ ಶೇಖ, ಇಮಾಮಹುಸೇನ್, ಭಾಗ್ಯ ಗುಡದಿನ್ನಿ, ಶ್ರೀಶೈಲ ಕುಮಸಗಿ, ಇರ್ಫಾನ ಗುಲಬರ್ಗಾ, ಕೆ.ಎಂ.ಹುಂಡೇಕಾರ, ಬಿ.ಬಿ.ಬಗಲಿ, ಇರ್ಫಾನ್ ಮುಲ್ಲಾ, ಅಕ್ರಂ ಮಾಶ್ಯಾಳಕರ, ಮೊಹ್ಮದ್ ಸಾಧಿಕ ಕುಡಚಿ, ಹಾಸೀಂಪಿರ ಕುಡಚಿ, ಹಿನಾಯತ ಗುಲಬರ್ಗಾ, ಸಮೀರ್ ಸುತಾರ, ಸಿ.ಎಸ್.ಸಿಂಧೂರ, ಪ್ರಭು ಹಳ್ಳಿ, ತೌಸಿಪ, ದೀಪಕ ಪವಾರ, ಎಂ.ಎಂ.ಕವಲಗಿ, ಬಸಪ್ಪ ಬಿದರಿ, ಮಲ್ಲಿಕಾರ್ಜುನ ಲಂಗೋಟಿ, ರಾಜು ತಡಲಗಿ, ಸಂತೋಷ ಕಲಗುಡಿ, ಮೊಹ್ಮದ್ ರಫೀಕ್ ಬಾಗವಾನ, ಅಂಬಣ್ಣ ಗುನ್ನಾಪುರ, ಶಿವಪುತ್ರ ಕಟ್ಟಿಮನಿ, ಪ್ರಕಾಶ ಬಿಸೆ, ಸಂಜೀವಕುಮಾರ ಶೆಟಗಾರ, ಪರಶುರಾಮ ಗಾಯಕವಾಡ, ಕಾಶೀನಾಥ ರೊಳ್ಳಿ, ಇಸ್ಮಾಯಿಲ್ ಸುತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.