ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬಲ್ಲೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ಜನರ ಕುಂದು ಕೊರತೆಗಳ ಆಲಿಸಿ ಮಾತನಾಡಿ, ಅಧಿಕಾರಿ-ಸಿಬ್ಬಂದಿ ಸಾರ್ವಜನಿಕರ ಅಹವಾಲುಗಳ ಸ್ವೀಕರಿಸಿ ಅವುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಿ ಶೀಘ್ರ ಬಗೆಹರಿಸಿಕೊಡುವ ಮನಸ್ಥಿತಿ ಹೊಂದಬೇಕು ಎಂದರು.
ಬಹುತೇಕ ಗ್ರಾಮಗಳ ಜನರು ಸರ್ವರ್ ಸೇರಿದಂತೆ ಕೆಲವೊಂದು ತಿದ್ದುಪಡಿ ಸಮಸ್ಯೆಯಿಂದ ಪಡಿತರ ಸೇರಿದಂತೆ ವೃದ್ಯಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ ವಿತರಣೆ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದು, ಇವುಗಳ ನಿವಾರಣೆಗೆ ಕ್ರಮವಹಿಸಿ ಜನರ ಅಲೆದಾಟ ತಪ್ಪಿಸಲು ನನ್ನ ಸೂಚನೆ ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದರು.ಕೂಡಲಕುಪ್ಪೆ ಗ್ರಾಮದಿಂದ ಕೆ.ಶೆಟ್ಟಹಳ್ಳಿ ಗ್ರಾಮಗಳ ನಡುವಿನ ಲೋಕಪಾವನಿ ನದಿಗೆ ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಿ ನೇರ ಸಂಪರ್ಕ ಕಲ್ಪಿಸಿ ಗ್ರಾಮೀಣ ಜನರ ಕೀಲೋ ಮೀಟರ್‌ಗಟ್ಟಲೆ ಸುತ್ತಾಟ ತಗ್ಗಿಸುವುದು ಹಾಗೂ 25 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ವೇಳೆ ತಾಪಂ ಚಂದ್ರಶೇಖರ್, ತಾಲೂಕು ಪಶುವೈದ್ಯಾಧಿಕಾರಿ ಡಾ.ಪ್ರವೀಣ್, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ಪಿಡಿಒ ಸುರೇಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನೆಲಮನೆ ಚೆಲುವೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ರವಿಶಂಕರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಬೆಟ್ಟೇಗೌಡ, ಗ್ರಾಪಂ ಮಾಜಿ ಸದಸ್ಯ ಸೋಮಶೇಖರ್, ಚಿಂದಗಿರಿಕೊಪ್ಪಲು ಜ್ಞಾನೇಶ್, ಪ್ರಭಾಕರ್, ನಂದೀಶ್ ಇತರರು ಈ ವೇಳೆ ಭಾಗಿಯಾಗಿದ್ದರು.