ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರ ಪಾತ್ರ: ಆರ್.ಎಂ.ನಾಗಣ್ಣ

KannadaprabhaNewsNetwork |  
Published : Nov 23, 2026, 01:45 AM IST
22ಕೆಎಂಎನ್ ಡಿ22 | Kannada Prabha

ಸಾರಾಂಶ

ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯ ಅಪೂರ್ವ ಸಂಪತ್ತು. ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ ಕಾಪಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ರಾಜ್ಯ ಮಟ್ಟದ ಶೃಂಗ ಮಹಾ ಮಂಡಳಿ ಉಪಾಧ್ಯಕ್ಷ ಆರ್.ಎ.ನಾಗಣ್ಣ ಹೇಳಿದರು.

ಪಟ್ಟಣದ 3ನೇ ಹಂತದ ನಂದಗೋಕುಲ, ಕಿಡ್ಸ್ ವರ್ಲ್ಡ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ, ಕನ್ನಡ ರಾಜೋತ್ಸವದಲ್ಲಿ ಮಾತನಾಡಿ, ದೇಶದ ನಿಜವಾದ ಸಂಪತ್ತು ಮಕ್ಕಳು. ಹಾಗಾಗಿ ಅವರ ಆರೋಗ್ಯದಲ್ಲಿ ಸ್ಧಿರತೆ ಕಾಪಾಡಲು ಪೋಷಕರು ಹಾಗೂ ಶಿಕ್ಷಕರು ಸದಾ ಜಾಗೃತೆ ವಹಿಸಬೇಕು ಎಂದರು.

ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯ ಅಪೂರ್ವ ಸಂಪತ್ತು. ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ ಕಾಪಾಡಬೇಕೆಂದರು.

ಐಟಿಐ ಕಾಲೇಜಿನ ಪ್ರಾಧ್ಯಾಪಕ ತಿಮ್ಮೇಗೌಡ ಮಾತನಾಡಿ, ಮಾಜಿ ಪ್ರಧಾನಿ ನೆಹರು ಅವರಿಗೆ ಮಕ್ಕಳೆಂದರೆ ಇನ್ನಿಲ್ಲದ ಪ್ರೀತಿ. ಅದರ ಪ್ರತೀಕಾವಾಗಿಯೇ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಕರೆಯುತ್ತಾರೆ ಎಂದರು.

ಇದೇ ವೇಳೆ ಮಕ್ಕಳಿಗೆ ಪ್ರಿಯವಾದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಾಲೆ ಕಾರ್ಯದರ್ಶಿ ಡಾ.ಆರ್.ಎನ್.ರಶ್ಮಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರು ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ಮೀನಾಕ್ಷಿ ಆರ್.ಎ.ನಾಗಣ್ಣ, ನಿವೃತ ಶಿಕ್ಷಕಿ ಮೀನಾಕ್ಷಮ್ಮ, ಸಹ ಶಿಕ್ಷಕಿಯಾರಾದ ಯಶೋದ, ಶೀಬಾ, ರಮ್ಯ ಭವ್ಯ, ಸೇರಿದಂತೆ ಪೋಷಕರು ಹಾಜರಿದ್ದರು. ಮಕ್ಕಳಿಗೆ ವಿವಿಧ ವೇಷ ಭೂಷಣ ಸ್ಪರ್ಧೆ ನಡೆಯಿತು.

ಎಸ್‌ಡಿಎಂಸಿ ಸಮಿತಿಗಳ ಒಕ್ಕೂಟಕ್ಕೆ ದಿವಾಕರ್ ಅಧ್ಯಕ್ಷರಾಗಿ ನೇಮಕ

ಮೇಲುಕೋಟೆ: ಏಕರೂಪ ಸಮಾನ ಶಿಕ್ಷಣ ಜಾರಿ ಹಾಗೂ ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹೋಬಳಿಯ ಮಾಣಿಕ್ಯನಹಳ್ಳಿ ದಿವಾಕರ್‌ರನ್ನು ಎಸ್‌ಡಿಎಂಸಿ ಸಮಿತಿಗಳ ಒಕ್ಕೂಟದ ಪಾಂಡವಪುರ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ರುವಾರಿ ಮಂಡ್ಯಗೌಡ ಅವರು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತೊಡಗಿಸಿಕೊಂಡು ಅಳಿವನಂಚಿನಲ್ಲಿರುವ ಶಾಲೆಗಳನ್ನು ಗುರುತಿಸಿ ಗ್ರಾಮಸ್ಥರ ಮನವೊಲಿಸಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕೆನ್ನುವ ಆಶಯದೊಂದಿಗೆ ನನ್ನ ನೇಮಕ ಮಾಡಿದ್ದಾರೆ. ಪ್ರಾಮಾಣಿಕವಾಗಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸೇವೆ ಮಾಡುವುದಾಗಿ ದಿವಾಕರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ