ಗುಂಡಿ ಮುಚ್ಚಲು, ಬಸ್‌ಗೆ ಡಿಸೇಲ್ ಹಾಕಲು ಸರ್ಕಾರದಲ್ಲಿ ಹಣವಿಲ್ಲ: ವಿಜಯೇಂದ್ರ

KannadaprabhaNewsNetwork |  
Published : Oct 08, 2026, 02:15 AM IST
ಬಿ.ವೈ.ವಿಜಯೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಅಭಿವೃದ್ಧಿ ಇರಲಿ ಗುಂಡಿ ಮುಚ್ಚಲು, ಬಸ್‌ಗಳಿಗೆ ಡಿಸೇಲ್ ಹಾಕಲು ಸಹ ಸರ್ಕಾರದಲ್ಲಿ ಹಣವಿಲ್ಲ.

ಬಿಜೆಪಿ ರೋಣ ಮತಕ್ಷೇತ್ರ ಸೇವಾ ಸಂಕಲ್ಪ ಅಭಿಯಾನ ಬೂತ್ ವಿಜಯ ಸಂಕಲ್ಪ ಯಾತ್ರೆ ಸಭೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ರಾಜ್ಯದಲ್ಲಿ ಅಭಿವೃದ್ಧಿ ಇರಲಿ ಗುಂಡಿ ಮುಚ್ಚಲು, ಬಸ್‌ಗಳಿಗೆ ಡಿಸೇಲ್ ಹಾಕಲು ಸಹ ಸರ್ಕಾರದಲ್ಲಿ ಹಣವಿಲ್ಲ. ಆದರೆ ಮಂಗಳೂರಿಗೆ ತೆರಳಿ ಸಿಎಂ 32 ಸಾವಿರ ಕೋಟಿ ರು. ಕೊಡುಗೆ ಘೋಷಿಸಿದ್ದು, ಸಿಎಂಗೆ ಆರ್ಥಿಕ ಇಲಾಖೆ ಇಂತಹ ಘೋಷಣೆಗಳನ್ನು ಮಾಡಬೇಡಿ ಎಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ

ಪಟ್ಟಣದ ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಬುಧವಾರ ಬಿಜೆಪಿ ರೋಣ ಮತಕ್ಷೇತ್ರ ಸೇವಾ ಸಂಕಲ್ಪ ಅಭಿಯಾನ ಬೂತ್ ವಿಜಯ ಸಂಕಲ್ಪ ಯಾತ್ರೆ ಸಭೆ ಉದ್ಘಾಟಿಸಿ ಮಾತನಾಡಿ, ಹಣಕಾಸು ಇಲಾಖೆ ಪತ್ರ ಬರೆದು, ಪುಕ್ಸಟ್ಟೆ ಘೋಷಣೆ ಮಾಡಬೇಡಿ, ರೈತರಿಗೆ ಬರ ಪರಿಹಾರ ಕೊಡಲಿಕ್ಕೂ ನಮ್ಮ ಹತ್ತಿರ ದುಡ್ಡಿಲ್ಲ ಎಂದು ಕಪಾಳಮೋಕ್ಷ ಮಾಡಿದೆ ಎಂದು ವಿಜಯೇಂದ್ರ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ, ಗ್ಯಾರಂಟಿ ಎನ್ನುವ ಸರ್ಕಾರ ಬಡವರಿಗೆ ಮನೆ ಕಟ್ಟುತ್ತಿಲ್ಲ, ಬಿಪಿಎಲ್ ಕಾರ್ಡ್‌ಗಳನ್ನು ಕಟ್ ಮಾಡುತ್ತಿದೆ, ವಿಧವಾ ವೇತನ ಸೇರಿ ಇತರು ಸಹಾಯಧನ ಬಿಡುಗಡೆ ಮಾಡಲಾಗುತ್ತಿಲ್ಲ.

ರಾಜ್ಯದಲ್ಲಿ ಭೀಕರ ಬರಗಾಲ ಸಂದರ್ಭ ರೈತರಿಗೆ ಪರಿಹಾರ ನೀಡದೆ ಕುಂಬಕರ್ಣ ನಿದ್ರೆಯಲ್ಲಿದ್ದ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಿ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ನಾವು ಮಾಡಿದ್ದೇವೆ. ರೈತರಿಗೆ ₹೫೦ ಸಾವಿರ ಪರಿಹಾರ ನೀಡಿ ಎಂದರೆ ರೈತವಿರೋಧಿ ಕಾಂಗ್ರೆಸ್ ಸರ್ಕಾರ ಕೇವಲ ₹೨೫೦೦ ಪರಿಹಾರ ಬಿಡುಗಡೆ ಮಾಡಿದ್ದು ವಿಪರ್ಯಾಸ. ಈ ಹಿಂದೆ ರಾಜ್ಯದಲ್ಲಿ ಭೀಕರ ನೆರೆಯ ಉಂಟಾದಾಗ ಸಿಎಂ ಯಡಿಯೂರಪ್ಪ ಮನೆ ಕಟ್ಟಿಕೊಳ್ಳಲು ₹೫ ಲಕ್ಷ ಪರಿಹಾರ ನೀಡಿದ್ದರು. ಆದರೆ ಇಂದಿನ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿ ೨೦ ದಿನಗಳಿಗೊಮ್ಮೆ ನೀರು ಕೊಡುವುದು ಗಮನಿಸಿದರೆ ಜಿಲ್ಲೆಯ ಅಭಿವೃದ್ಧಿ ತಿಳಿಯುತ್ತದೆ ಎಂದು ಟೀಕಿಸಿದರು.

ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಯುವಕರು, ರೈತರು ಹಾಗೂ ಉದ್ಯಮಿಗಳಲ್ಲಿ ಹೊಸ ವಿಶ್ವಾಸ ಮೂಡಿಸಿದ್ದಾರೆ. ಪ್ರಧಾನಿಯವರು ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮೋದಿ ಜನಪ್ರಿಯತೆ ಸಹಿಸಿಕೊಳ್ಳದ ರಾಹುಲ್ ಗಾಂದಿ ದೆಹಲಿಯಲ್ಲಿ ಹೋರಾಟ ಮಾಡಿದರೆ ರಾಹುಲ್ ಮೆಚ್ಚಿಸಲು ಸಿಎಂ ಚುನಾವಣಾ ಆಯೋಗದ ಮುಂದೆ ಹೋರಾಟ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಅಲೆ ಬಿಸಿದ್ದು, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನ ತೀರ್ಮಾನಿಸಿದ್ದಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಕೆಲಸವನ್ನು ಮಾಡುತ್ತೇವೆ. ಪಕ್ಷದ ಕಾರ್ಯಕರ್ತರು ತಲೆ ಎತ್ತಿ ನಡೆಯುವಂತೆ ಆಡಳಿತ ನಡೆಸುತ್ತೇವೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಆಡಳಿತದಿಂದ ಜನತೆ ಆತಂಕಗೊಂಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಕಿತ್ತೊಗೆಯುವವರೆಗೆ ವಿಶ್ರಮಿಸುವುದಿಲ್ಲ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಉಮೇಶ ಮಲ್ಲಾಪುರ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರಡಗಿ, ಶಾಸಕ ಚಂದ್ರು ಲಮಾಣಿ, ಪ್ರೀತಂಗೌಡ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಮುಖಂಡರಾದ ಅನಿಲ ಮೆಣಸಿನಕಾಯಿ, ಅಂದಪ್ಪ ಹಾರೋಗೇರಿ, ಬೋಜರಾಜ ಕರೊದಿ, ನಿಂಗಪ್ಪ ಕೆಂಗಾರ, ಬಿ.ಎಂ. ಸಜ್ಜನ, ಅಮರೇಶ ಬಳಿಗೇರ, ಎಚ್.ಕೆ. ಹಟ್ಟಿಮನಿ, ಮಹಾಂತೇಶ ಸೋಮನಕಟ್ಟಿ, ಮುದ್ದಿಂಗಪ್ಪ ಕೊರ್ಲಳ್ಳಿ, ಇಂದಿರಾ ತೇಲಿ, ನಿರ್ಮಲಾ ಕೊಳ್ಳಿ, ಬಸವರಾಜ ಬೆಲ್ಲದ, ರಂಗನಾಥ ಮೇಟಿ, ಸಲೀಮ ಕಲಾದಗಿ, ಆರ್.ಕೆ. ಚವ್ಹಾಣ, ರೂಪ್ಲೇಶ ರಾಠೋಡ, ಬಾಳಾಜೀರಾವ್ ಭೋಸಲೆ, ಲೀಲಾ ಸವಣೂರ, ವಿಜಯಲಕ್ಷ್ಮೀ ಚಟ್ಟೇರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವರ್ಣವಲ್ಲೀ ಮಠದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಹಳಿಯಾಳದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ತೆರೆ