ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕೋಟೆನಾಡು ಬುದ್ದ ವಿಹಾರ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಕಂಡಂತಹ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಒಳಮೀಸಲು ಮತ್ತು ಸರಕಾರದ ಬದ್ಧತೆ ಕುರಿತ ಚರ್ಚಾಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೈಕೋರ್ಟ್ ಒಳಮೀಸಲಾತಿಗೆ ತಡೆಯಾಜ್ಞೆ ನೀಡಿಲ್ಲ. ಕರ್ನಾಟಕವು 50 ಪರ್ಸೇಂಟ್ ನಿಂದ ಮೀಸಲಾತಿಯನ್ನು 56ಕ್ಕೆ ಏರಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಇದನ್ನು ನೆಪಮಾಡಿ ಒಳ ಮೀಸಲಾತಿ ಅನುಷ್ಠಾನವನ್ನು ತಡೆಯಲು ಹೊರಟಿರುವ ಕರ್ನಾಟಕ ಸರಕಾರದ ನಡೆ ಯಾವ ರೀತಿಯಿಂದಲೂ ಸಮರ್ಥನೀಯವಲ್ಲ. ಸುಪ್ರೀಂಕೋರ್ಟಿನ ಒಳ ಮೀಸಲಾತಿ ತೀರ್ಪಿನ ನಂತರ ಸರಕಾರವೇ ರಚಿಸಿದ ಆಯೋಗದಿಂದ ಸಮೀಕ್ಷೆ ನಡೆಸಿ, ನಿಖರ ದತ್ತಾಂಶ ಪಡೆದು, ಸದನದಲ್ಲಿ ಒಳಮೀಸಲಾತಿ ವರ್ಗೀಕರಣ ಒಪ್ಪಿ, ರಾಜ್ಯಪಾಲರಿಂದ ಅಂಕಿತ ಬಿದ್ದ ಮೇಲೂ ನೆಪವೊಡ್ಡಿ 2022ರ ನೇಮಕಾತಿ ಕಾಯ್ದೆ ಅನುಸಾರ 56,342ಹುದ್ದೆಗಳನ್ನು ಒಳ ಮೀಸಲಾತಿಯಿಲ್ಲದೇ ತುಂಬಲು ಹೊರಟಿ ರುವುದು ನ್ಯಾಯಬಾಹಿರ ಕ್ರಮ ಎಂದರು.ಇಡೀ ಜೀವನದ ರಾಜಕೀಯ ಹೋರಾಟವನ್ನು ಸಾಮಾಜಿಕ ನ್ಯಾಯಕ್ಕಾಗಿಯೇ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಇದ್ದಂತೆ ಪರಿಶಿಷ್ಟ ಜಾತಿಯ 15% ಮೀಸಲಾತಿಯಲ್ಲಿಯೇ ಮಾದಿಗ, ಹೊಲೆಯ ಹಾಗೂ ಇತರೆ ಪರಿಶಿಷ್ಠ ಜಾತಿಗಳಿಗೆ ಹಂಚಿಕೆ ಮಾಡಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಡಿಕ್ಲೇರೇಷನ್ ಅನುಸಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ತಮ್ಮ ಸಾಮಾಜಿಕ ನ್ಯಾಯ ಎಂಬ ಘೋಷಣೆ ರಾಜಕಾರಣಕ್ಕಾಗಿಯೇ ಹೊರತು ವಾಸ್ತವಕ್ಕೆ ಅಲ್ಲ ಎಂಬುದು ಸಾಬೀತಾಗುತ್ತದೆ. ಭವಿಷ್ಯದಲ್ಲಿ ಇದೊಂದು ತಮ್ಮ ರಾಜಕೀಯ ಜೀವನಕ್ಕೆ ದೊಡ್ಡ ಕಪ್ಪುಚುಕ್ಕೆ ಆಗುತ್ತದೆ ಎಂದರು.