ಅರಳ ಬರಗೂರು ಚೌಡೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರಾಮಾನುಜ ತಿರುನಕ್ಷತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮಾನುಜಾಚಾರ್ಯರ ೧೦೦೯ನೇ ಜಯಂತಿ ಪ್ರಯುಕ್ತ ಶಂಕರಾಚಾರ್ಯರ ಜಯಂತಿಯನ್ನು ಶ್ರೀವೈಷ್ಣವ ಸಮಾಜದವರು ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಸರ್ಕಾರದ ವತಿಯಿಂದ ಕೇವಲ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡುತ್ತಿದ್ದು ಮುಂದಿನ ದಿನದಲ್ಲಿ ರಾಮಾನುಜಾಚಾರ್ಯ ಜಯಂತಿ ಮತ್ತು ಮಧ್ವರ ಜಯಂತಿ ಆಚರಣೆ ಮಾಡಲಿ ಎಂದು ಒತ್ತಾಯ ಮಾಡುತ್ತೇನೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮೂವರು ಯತಿಗಳಾದ ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಚಾರ್ಯರರ ಜಯಂತಿಯನ್ನು ಸರಕಾರದಿಂದಲೇ ಆಚರಿಸಲಿ ಎಂದು ಮಾಜಿ ಶಾಸಕ ಎಚ್.ಡಿ. ರೇವಣ್ಣ ಹೇಳಿದರು.ತಾಲೂಕಿನ ಹೊರವಲಯದಲ್ಲಿರುವ ಅರಳ ಬರಗೂರು ಚೌಡೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರಾಮಾನುಜ ತಿರುನಕ್ಷತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮಾನುಜಾಚಾರ್ಯರ ೧೦೦೯ನೇ ಜಯಂತಿ ಪ್ರಯುಕ್ತ ಶಂಕರಾಚಾರ್ಯರ ಜಯಂತಿಯನ್ನು ಶ್ರೀವೈಷ್ಣವ ಸಮಾಜದವರು ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಸರ್ಕಾರದ ವತಿಯಿಂದ ಕೇವಲ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡುತ್ತಿದ್ದು ಮುಂದಿನ ದಿನದಲ್ಲಿ ರಾಮಾನುಜಾಚಾರ್ಯ ಜಯಂತಿ ಮತ್ತು ಮಧ್ವರ ಜಯಂತಿ ಆಚರಣೆ ಮಾಡಲಿ ಎಂದು ಒತ್ತಾಯ ಮಾಡುತ್ತೇನೆ ಎಂದರು.ನೂರಾರು ವರ್ಷಗಳ ಹಿಂದೆ ಸಮಾಜಕ್ಕೆ ತಮ್ಮ ಸಿದ್ಧಾಂತಗಳ ಮೂಲಕ ಧಾರ್ಮಿಕ ಚಿಂತನೆಯೊಟ್ಟಿಗೆ ವೇದೋಪನಿಷತ್ತುಗಳನ್ನು ಪರಿಚಯಿಸಿದ ರಾಮಾನುಜಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಚಾರ್ಯರ ಕೊಡುಗೆ ಅಪಾರ. ಅವರ ಜಯಂತಿಯನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೂ ಅವರ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಡಬೇಕಿದೆ ಎಂದರು.ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ರಾಮಾನುಜಾಚಾರ್ಯರು ನವಸಮಾಜ ನಿರ್ಮಾಣ ಮಾಡಲು ಸಾಕಷ್ಟು ಪರಿಶ್ರಮಪಟ್ಟಿದ್ದು, ಅವರ ಆದರ್ಶಗಳಿಗೆ ಇಂಬು ನೀಡುವ ಉದ್ದೇಶದಿಂದ ಪೇಜಾವರ ಶ್ರೀಗಳು ದಲಿತರಿಗೂ ದೀಕ್ಷೆ ನೀಡಿದ್ದು ಮಹತ್ವದ ಮೈಲಿಗಲ್ಲು ಎಂದರು. ಇನ್ನು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨೫೦ ಕುಟುಂಬಕ್ಕೂ ಹೆಚ್ಚು ಶ್ರೀವೈಷ್ಣವ ಸಮಾಜ ವಾಸವಿದ್ದು, ಕಳೆದ ೫ ವರ್ಷದ ಹಿಂದೆಯೇ ದೇವಾಲಯಕ್ಕೆ ಕುಡಿಯುವ ಮತ್ತು ಇತರೆ ಬಳಕೆಗೆ ಅನುಕೂಲವಾಗಲೆಂದು ಕೊಳವೆ ಬಾವಿ ಕೊರೆಸಿಕೊಟ್ಟಿದೆ. ರೇವಣ್ಣ ರಸ್ತೆ ಮತ್ತು ಪ್ರಾಂಗಣಕ್ಕೆ ಸಿಮೆಂಟ್ ರಸ್ತೆ ಮಾಡಿಸಿದ್ದಾರೆ. ಮುಂದಿನ ದಿನದಲ್ಲಿ ಸಮಾಜಕ್ಕೆ ಒಂದು ಭವನ ಬೇಕು ಎಂದು ಬೇಡಿಕೆ ಇಟ್ಟಿದ್ದು, ರೇವಣ್ಣ ನವರೊಂದಿಗೆ ಚರ್ಚಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ರಾಮಾನುಜಾಚಾರ್ಯರ ಜೀವನ ಚರಿತ್ರೆ ಬಗ್ಗೆ ಸಂತಶ್ರೀ ಲೋಕೇಶ್ ದಾಸರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜೀ ಕನ್ನಡ ನ್ಯೂಸ್ ಮುಖ್ಯಸ್ಥ ರವಿ ಎಸ್. ಗೌಡ, ಬೆಂಗಳೂರಿನ ಉದ್ಯಮಿ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಸುರೇಶ್, ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಬಿಜೆಪಿ ಮುಖಂಡ ಚಿದಾನಂದ್, ಡಿವೈಎಸ್ಪಿ ಸಿ.ಎನ್ ಕುಮಾರ್, ಹಾಸನ ಜಿಲ್ಲಾ ಶ್ರೀವೈಷ್ಣವ ಸೇವಾ ಸಭಾದ ಜಿಲ್ಲಾಧ್ಯಕ್ಷ ವಳಗೇರಹಳ್ಳಿ ಶ್ರೀಧರ್ ಮೂರ್ತಿ, ನಿರ್ದೇಶಕ ಸುನಿಲ್ ಕುಂಬೇನಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.