ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶನಿವಾರ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ ನೇತೃತ್ವದ ಜೆಡಿಎಸ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಂಗಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದರು.
ಪ್ರಸ್ತುತ ಸರ್ಕಾರರವು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರಜಾರಿಗೆ ತರುತ್ತಿರುವ ಈ ಯೋಜನೆಯೂ ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ ಹಾಗೆ ವರ್ತಿಸುತ್ತಿದೆ ಆದರೆ ಇದರ ಹಿಂದೆ ಬೃಹತ್ ರಿಯಲ್ ಎಸ್ಟೆಟ್ ದಂಧೆ ಅಡಗಿದೆ ಎಂದು ಆಪಾದಿಸಿದರು.ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಧ್ವಂಸ ಮಾಡಿ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಸಕರ್ಾರ ಮಾಡುತ್ತಿದೆ. ಈ ಯೋಜನೆಯಿಂದ ಸಾವಿರಾರೂ ರೈತ ಕುಟುಂಬಗಳು ಬೀದಿಗೆ ಬಿಳಲಿವೆ. ಭೂಮಿಯನ್ನೆ ನಂಬಿ ಬದುಕುತ್ತಿರುವ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡ ಕುಟುಂಬಗಳನ್ನು ಈ ಸರ್ಕಾರ ಸಂಪೂರ್ಣವಾಗಿ ನಾಶ ಮಾಡಲು ಹೋರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಘಟಕದ ಪ್ರಮುಖರಾದ ಸಲಿಂ ಮೋಮಿನ್, ಕೃಷ್ಣಾ ಪಾಟೀಲ, ಎಂ.ಎಸ್.ಹಿರೆಹಾಳ, ಹುಚ್ಚಪ್ಪ ಹದ್ದಣ್ಣವ್ವರ, ಪ್ರಭು ಪಾಟೀಲ, ಸಂತೋಷ ನಾಯನೇಗಲಿ, ಸಚಿನ್ ರಾಂಪೂರ, ಪ್ರಕಾಶ ಕೋಟಿ, ಶರಣಪ್ಪ ಮಾವಿನಮರದ, ಮಲ್ಲು ಹಡಪದ, ಬಸವರಾಜ ಅಮರಗೋಳ, ಗುಂಡಪ್ಪ ಕಡಿವಾಳ ಉಪಸ್ಥಿತರಿದ್ದರು.