ರಾಜ್ಯಪಾಲರ ನಡವಳಿಕೆ ಖಂಡನೀಯ

KannadaprabhaNewsNetwork |  
Published : Jan 28, 2026, 02:00 AM IST
ಪೊಟೋ: 27ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.  | Kannada Prabha

ಸಾರಾಂಶ

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡವಳಿಕೆ ಖಂಡನೀಯ. ಅಧಿವೇಶನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಷ್ಟ್ರಗೀತೆ ಹೇಳದಂತೆ ಅಗೌರವದಿಂದ ಓಡಿ ಹೋಗುವ ಅವಶ್ಯಕತೆ ಏನಿತ್ತು. ರಾಜ್ಯಪಾಲರು ದೇಶದ ಮುಂದೆ ಕ್ಷಮೆ ಕೇಳುವ ಜತೆಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ಶಿವಮೊಗ್ಗ: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡವಳಿಕೆ ಖಂಡನೀಯ. ಅಧಿವೇಶನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಷ್ಟ್ರಗೀತೆ ಹೇಳದಂತೆ ಅಗೌರವದಿಂದ ಓಡಿ ಹೋಗುವ ಅವಶ್ಯಕತೆ ಏನಿತ್ತು. ರಾಜ್ಯಪಾಲರು ದೇಶದ ಮುಂದೆ ಕ್ಷಮೆ ಕೇಳುವ ಜತೆಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸದನವನ್ನುದ್ದೇಶಿಸಿ ಮಾತನಾಡುವುದು ವಾಡಿಕೆ. ಅವರು ರಾಜ್ಯಪಾಲರಾಗಿ, ನ್ಯಾಯಾಧೀಶರ ರೀತಿಯಲ್ಲಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಪೂರ್ವಾಶ್ರಮ ನೆನಪಿಸಿಕೊಂಡು ಮಾತನಾಡಬಾರದು. ಬಿಜೆಪಿಯ ಏಜೆಂಟ್ ರೀತಿ ವರ್ತಿಸಬಾರದು ಎಂದು ಕಿಡಿಕಾರಿದರು.ರಾಜ್ಯಪಾಲರು ಬೇಕಿದ್ದರೆ ಸರ್ಕಾರದ ಭಾಷಣವನ್ನು ಸದನಕ್ಕೆ ಒಪ್ಪಿಸಬಹುದಾಗಿತ್ತು. ಅದನ್ನು ಬಿಟ್ಟು ರಾಷ್ಟ್ರಗೀತೆ ಹೇಳದೆ ಓಡಿ ಹೋಗುವ ಅಗತ್ಯವೇನಿತ್ತು. ಏಳೂವರೆ ಕೋಟಿ ಜನರನ್ನು ಪ್ರತಿನಿಧಿಸುವ ಸದನಕ್ಕೆ ರಾಜ್ಯಪಾಲರು ಅವಮಾನ ಮಾಡಿದ್ದಾರೆ. ಸದನದಿಂದ ಹೊರಟ ರಾಜ್ಯಪಾಲರನ್ನು ಬಿ.ಕೆ.ಹರಿಪ್ರಸಾದ್ ತಡೆದಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ರಾಜ್ಯಪಾಲ ಗೆಹ್ಲೋಟ್ ಅವರು ತನ್ನ ಪೂರ್ವಶ್ರಮವನ್ನು ನೆನಪು ಮಾಡಿಕೊಂಡವರಂತೆ ಕೇಂದ್ರದ ಕೈಗೊಂಬೆಯಂತೆ ವರ್ತಿಸಿ ಹೋಗಿರುವುದು ಅತ್ಯಂತ ಖಂಡನೀಯ. ಅವರು ಸಾಮಂತ ರಾಜರಲ್ಲ, ಬಿಜೆಪಿಯ ಪ್ರತಿನಿಧಿಯೂ ಅಲ್ಲ, ಅವರಿಂದ ಹಕ್ಕುಚ್ಯುತಿಯಾಗಿದೆ ಎಂದು ಟೀಕಿಸಿದರು.ಕೇಂದ್ರದ ಬಿಜೆಪಿ ಸರ್ಕಾರ ಅತಿಯಾಗಿ ವರ್ತಿಸುತ್ತಿದೆ. ಮನರೇಗಾ ವಿಷಯದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿದೆ. ಗಾಂಧೀಜಿಯವರ ಹೆಸರನ್ನು ತೆಗೆಯಲು ಕಾರಣ ಏನಿತ್ತು ? ಮನರೇಗಾ ವಿಶೇಷ ಅಧಿವೇಶನ ಕರೆದಿದ್ದು ವಿರೋಧಪಕ್ಷಗಳಿಗೆ ಚರ್ಚೆಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಅವರು ಹಾಗೆ ಮಾಡಲೇ ಇಲ್ಲ. ಬಿಜೆಪಿಯವರಿಗೆ ಮನರೇಗಾ ಅರ್ಥವೇ ಆಗಿಲ್ಲ. ಈ ದೇಶದಲ್ಲಿ 30 ಕೋಟಿ ಜನರಿಗೆ ಉದ್ಯೋಗ ಇಲ್ಲ. ಕೇಂದ್ರ ಸರ್ಕಾರದಿಂದ ಉದ್ಯೋಗ ಸೃಷ್ಟಿಯೂ ಇಲ್ಲ. ಸರ್ಕಾರಿ ಕೆಲಸ ನೀಡಲು ಸಾಧ್ಯವಿಲ್ಲ ನಿಜ. ಆದರೆ ಮನರೇಗಾದಂತಹ ಕಾರ್ಯಕ್ರಮದಲ್ಲಿ ನಿರುದ್ಯೋಗಿಗಳಿಗೆ ಅವಕಾಶ ಕೊಡಬಹುದು. ಇದು ಒಂದು ಸಾಮಾಜಿಕ ಕೆಲಸವೂ ಹೌದು. ದೇಶದಲ್ಲಿ ಸುಮಾರು 2 ಲಕ್ಷ ಗ್ರಾಮ ಪಂಚಾಯಿತಿಗಳಿವೆ. ಗ್ರಾಪಂ ಮಟ್ಟದಲ್ಲಿ ಯುವಕರ ಕೈಗೆ ಉದ್ಯೋಗವಿಲ್ಲ. ಈಗ ಈ ಉದ್ಯೋಗಕ್ಕೂ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಕಡಿವಾಣ ಹಾಕುತ್ತಿದೆ ಎಂದರು.ಮನರೇಗಾ ಎಂಬುದು ಗ್ರಾಮೀಣ ಭಾರತದ ಕನಸು. ಕೇಂದ್ರದ ಹೊಸ ನಿರ್ಧಾರದಿಂದ ಗ್ರಾಪಂಗಳಿಗೆ ಯಾವ ಹಕ್ಕೂ ಇಲ್ಲ, ಎಲ್ಲಾ ಅಧಿಕಾರವನ್ನು ಖಾಸಗಿಯವರಿಗೆ ನೀಡಲಾಗಿದೆ. ಕಳೆದ 3 ವರ್ಷಗಳಿಂದ ಉದ್ಯೋಗಖಾತ್ರಿ ಯೋಜನೆಯಡಿ ಬರಬೇಕಾಗಿದ್ದ ಸುಮಾರು 2800 ಕೋಟಿ ರು. ಹಣ ಇನ್ನೂ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಶೇ.40ರಷ್ಟು ಹಣ ನೀಡಬೇಕು ಎಂಬ ನಿಯಮವನ್ನು ಏಕೆ ಮಾಡಿದ್ದಾರೋ ಗೊತ್ತಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಜಿಪಂ ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಪೂರ್ಣೇಶ್, ಅಮರನಾಥ್‌ಶೆಟ್ಟಿ, ಆದರ್ಶ, ಜಯಕರಶೆಟ್ಟಿ, ಶ್ರೇಯಸ್‌ರಾವ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ