ಬಂಕಾಪುರದಲ್ಲಿ ವಿಜೃಂಭಣೆಯ ರೇಣುಕಾ ಯಲ್ಲಮ್ಮನ ರಥೋತ್ಸವ

KannadaprabhaNewsNetwork |  
Published : Oct 24, 2026, 02:15 AM IST
23ಬಿಎನ್‌ಕೆ2 | Kannada Prabha

ಸಾರಾಂಶ

ದಸರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ನಡೆದ ರೇಣುಕಾ ಯಲ್ಲಮ್ಮನ ರಥೋತ್ಸವವು ವಿಜೃಂಭಣೆಯಿಂದ ಸಾಗಿತು. ಅರಳೆಲೆಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಬಂಕಾಪುರ: ದಸರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ನಡೆದ ರೇಣುಕಾ ಯಲ್ಲಮ್ಮನ ರಥೋತ್ಸವವು ವಿಜೃಂಭಣೆಯಿಂದ ಸಾಗಿತು. ಅರಳೆಲೆಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.ಪಟ್ಟಣದ ಬೀರದೇವರಿಗೆ ಪೂಜೆ ಸಲ್ಲಿಸಿ ಬೀರದೇವರ ರಥಬಂಡಿಗೆ ಚಾಲನೆ ನೀಡದ ಶಿಗ್ಗಾಂವ-ಸವಣೂರ ಶಾಸಕರಾದ ಯಾಸಿರಅಹ್ಮದಖಾನ್ ಪಠಾಣ ನಂತರ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.9 ದಿನಗಳ ಕಾಲ ದೇಸ್ಥಾನದಲ್ಲಿ ದೇವಿಗೆ ಅಭಿಷೇಕ, ಉಡಿ ತುಂಬುವುದು ಎಲ್ಲ ತರಹದ ಪೂಜಾ ಕೈಂಕರ್ಯಗಳು ಹಾಗೂ ಸಂಜೆ ಪಟ್ಟಣದ ವಿವಿಧ ಭಜನಾ ಸಂಘಗಳಿಂದ ಭಜನೆ,ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ಜರುಗಿದವು.ತೇರು ಸಾಗುವ ಪ್ರಮುಖ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿದ್ದರು. ಭಕ್ತರು ಮನೆಯ ಮುಂದೆ ರಂಗೋಲಿ ಹಾಕಿ ಅಲಂಕಾರ ಮಾಡಿದ್ದರು.ಯಲ್ಲಮ್ಮನ ದೇವಸ್ಥಾನದ ಮುಂದೆ ಹಾದು ಜೋರಾಗಿ ಹೋಗುವ ಬೀರಪ್ಪನ ರಥಬಂಡಿ ಸಾಗುತ್ತಿದ್ದಂತೆ ಭಕ್ತರು ಬೀರದೇವರಿಗೆ ನಮಸ್ಕರಿಸಿ ಆಶಿರ್ವಾದ ಪಡೆದರು. ಕಳ್ಳಬೀರಪ್ಪನೆಂದೇ ಹೆಸರಾದ ಬೀರಪ್ಪ ದೇವನು ತಾನು ರಥಬಂಡಿಯಲ್ಲಿ ಹೋಗುತ್ತಿದ್ದಾಗ ಯಲ್ಲಮ್ಮನ ಬನ್ನಿ ಕದ್ದು ಓಡಿ ಹೋಗುತ್ತಾನೆ ಎಂಬ ಪ್ರತೀತಿ ಹಿಂದಿನಿಂದಲೂ ಇದೆ.ರಥೋತ್ಸವದಲ್ಲಿ ಭಾಗಿಯಾಗಿದ್ದ ಡೊಳ್ಳು ಕುಣಿತ, ಜಾಂಜ್ ಮೇಳ, ಆರ್ಕೆಸ್ಟರಿ ಹಾಗೂ ಸಾಂಸ್ಕೃತಿಕ ಮೇಳಗಳು ಭಕ್ತರ ಮನಸೂರೆಗೊಂಡವು. ರಥದ ಸುತ್ತಲೂ ಉತ್ತಮ ಲೈಟಿಂಗ್ ವ್ಯವಸ್ಥೆ ಮಾಡಿದ್ದರಿಂದ ರಥವು ಜಗಮಗಿಸುತ್ತಿತ್ತು. ಸುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಯಲ್ಲಮ್ಮನ ಆಶೀರ್ವಾದ ಪಡೆದು ಭಕ್ತಿಯಿಂದ ರಥೋತ್ಸವದ ಮೆರಗನ್ನು ಕಣ್ತುಂಬಿಕೊಂಡರು.ಯುವಕರು ರಥಬೀದಿಯುದ್ದಕ್ಕೂ ವಿವಿಧ ರೀತಿಯ ಪಟಾಕಿಗಳನ್ನು ಹಾರಿಸಿದರು. ರಥವು ಅರಳೆಲೆಮಠ ದವಾಖಾನೆ ಹತ್ತಿರ ಬಂದು ನಿಂತಾಗ ಅಲ್ಲಿ ನೆರೆದಿದ್ದ ಬೀರಪ್ಪದೇವರ, ಮೈಲಾರಲಿಂಗೇಶ್ವರ ದೇವರ, ಯಲ್ಲಮ್ಮನ ಭಕ್ತರು ಪರಸ್ಪರ ಬನ್ನಿ ಮುಡಿದುಕೊಂಡರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸಪ್ಪ ಸೊಪ್ಪಿನ, ವೈದ್ಯರಾದ ಆರ್.ಎಸ್. ಅರಳೆಲೆಹಿರೇಮಠ, ದೀಪಕ ಪುಕಾಳೆ, ಚಂದ್ರು ಕೋರಿ, ದೀಪಕ ಮಂಗಳಾರತಿ, ಸುರೇಶ ಕುರಗೋಡಿ, ಬಸವರಾಜ ನಾರಾಯಣಪೂರ, ದೇವಪ್ಪ ಹಳವಳ್ಳಿ, ಮಲ್ಲಕಾರ್ಜುನ ನರೇಗಲ್ಲ, ಉಮೇಶ ಮಾಳಗಿಮನಿ ಮುಂತಾದವರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ