ಕನ್ನಡಪ್ರಭ ವಾರ್ತೆ ಶಿರಸಿ
ಯುಗಾದಿ ಹಬ್ಬದ ಶುಭಸಂದರ್ಭದಲ್ಲಿ ಪಡಂಬೈಲಿನ ದೊಡ್ಡಜಡ್ಡಿಯ ಶ್ರೀ ಸುರೇಶ ಹೆಗಡೆ ಅವರ ತವರುಮನೆ ತೋಟದಲ್ಲಿ ನಡೆದ ಅಘನಾಶಿನಿ ನದಿ ಪೂಜೆ, ಬಾಗಿನ ಅರ್ಪಣೆ ಹಾಗೂ ಗಂಗಾರತಿ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರನ್ನು ಭಾವಿಸಿದರೆ ನಿಂತ ನೆಲವೇ ದೇವಾಲಯ. ದೇವಾಲಯ ಮಾಡಿಯೇ ಕ್ಷೇತ್ರ ಮಾಡಬೇಕಾಗಿಲ್ಲ. ತವರಿನ ಭಾವವೃಷ್ಟಿಯನ್ನು ಸುರಿಸಿದ ಈ ಕ್ಷೇತ್ರ ಹಲವು ಜನರಿಗೆ ನಿವೇಶನ ಖರೀದಿಸಿ ಪ್ರಕೃತಿಯ ಮಡಿಲಲ್ಲಿ ಮನವನ್ನೂ, ಮನೆಯನ್ನೂ ಕಟ್ಟಿಕೊಳ್ಳಲು ಪ್ರೇರಣೆ ನೀಡಿದೆ ಎಂದರು.ಹಿರಿಯ ಸಾಹಿತಿ ಡಾ. ಜಿ.ಎ. ಹೆಗಡೆ, ಸಾಮಾಜಿಕ ಧುರೀಣ ವಿಶ್ವನಾಥ ಶರ್ಮಾ ಮಾತನಾಡಿದರು.
ಈ ಶುಭ ಸಂದರ್ಭದಲ್ಲಿ ತವರುಮನೆ ತೋಟದ ಬಡಾವಣೆಯಲ್ಲಿ ಸಿಮೆಂಟ ರಸ್ತೆಯ ಉದ್ಘಾಟನೆ ಹಾಗೂ ಬಡಾವಣೆಯ ಒಳಚರಂಡಿಯ ನೀರು ಶುದ್ಧೀಕರಣ ಘಟಕದ ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು.
ಸುರೇಶ ನರಸಿಂಹ ಹೆಗಡೆ ಮತ್ತು ಕುಟುಂಬದವರು ಹಾಗೂ ತವರುಮನೆ ತೋಟದ ಬಳಗ ಏರ್ಪಡಿಸಿದ ಈ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಜಯಪ್ರಕಾಶ ಹಬ್ಬು ಸೊಗಸಿನ ಸೊಗಡಿನಲ್ಲಿ ಕನಸು ನನಸಾಗುವ ತವರುಮನೆ ತೋಟದ ಯಶೋಗಾಥೆಯ ಕವನ ಬಿಡುಗಡೆ ಮಾಡಿದರು. ನಂತರ ಕಾರ್ಯಕ್ರಮ ನಿರ್ವಹಿಸಿದರು. ತವರುಮನೆ ತೋಟದ ರೇಖಾ ಹೆಗಡೆ ವಂದಿಸಿದರು.