ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಜಿಪಂ ಕೊಪ್ಪಳ, ತಾಲೂಕು ಪಂಚಾಯಿತಿ ಕುಷ್ಟಗಿ, ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ನಡೆದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ-2005, ನರೇಗಾ ಯೋಜನೆಯ ಕುರಿತು ಕಾಯಕ ಬಂಧುಗಳ (ಮೇಟ್ಸ್) ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನ ಸಾಕಷ್ಟು ದುಡಿಯುತ್ತಾರೆ. ಅವರಿಗೆ ಕೆಲಸ ಕೊಟ್ಟರೆ ಆರ್ಥಿಕ, ದೈಹಿಕವಾಗಿ ಸದೃಢವಾಗಲು ಮೇಟ್ ಗಳ ಪಾತ್ರ ಮುಖ್ಯವಾಗಿದೆ. ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೆ ನರೇಗಾ ಯೋಜನೆ ತಲುಪಿಸುವಲ್ಲಿ ಕಾಯಕ ಬಂಧುಗಳ ಶ್ರಮ ಸಾಕಷ್ಟಿದೆ. ಅದಕ್ಕಾಗಿ ತಮಗೆ ತರಬೇತಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಮಾತನಾಡಿ, ನರೇಗಾ ಯೋಜನೆಯಲ್ಲಿ ಪ್ರತಿವರ್ಷ ಬದಲಾಗುತ್ತಿದೆ. ಬದಲಾದ ವ್ಯವಸ್ಥೆಗೆ ಹೊಂದಿಕೊಂಡು ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲು ಕಾಯಕ ಬಂಧುಗಳಿಗೆ ತರಬೇತಿ ನೀಡಲು ಹಮ್ಮಿಕೊಂಡಿದೆ. ತರಬೇತಿಯ ಸದುಪಯೋಗ ಪಡೆಯಬೇಕು. ನರೇಗಾ ಯೋಜನೆ ಆರೋಗ್ಯಯುತವಾಗಿ ಸಾಗಲು ಕಾಯಕ ಬಂಧುಗಳ ಸಹಕಾರ ಅಗತ್ಯವಿದೆ ಎಂದರು.